ವಿಭಿನ್ನ ಸಮಯಗಳಲ್ಲಿ ತೀವ್ರವಾದ ಭಾವನೆಗಳು ಮತ್ತು ಸಂವೇದನೆಗಳನ್ನು ಪ್ರದರ್ಶಿಸುತ್ತಾರೆ. ಹದಿಹರಯದವರ ಮನೋಸ್ಥಿತಿ ಊಹಿಸಲು ಅಸಾಧ್ಯವಾಗಿರುತ್ತದೆ. ಈ ಭಾವನಾತ್ಮಕ ಉಬ್ಬರ – ಇಳಿತಗಳು ಸಮಸ್ಯೆಗಳಿಗೆ ಕಾರಣವಾಗಬಹುದು. ಮಗುವಿನ ಮನಸ್ಸು ಭಾವನೆಗಳನ್ನು ಹೆಚ್ಚು ಪ್ರೌಢವಾಗಿ ನಿಯಂತ್ರಿಸಲು ಮತ್ತು ಅಭಿವ್ಯಕ್ತ ಪಡಿಸಲು ಇನ್ನೂ ಕಲಿಯುತ್ತಿರುತ್ತದೆ.
Advertisement
ನಿಮ್ಮ ಭಾವನೆಗಳಿಗೆ ಹೆಚ್ಚು ಸೂಕ್ಷ್ಮವಾಗಿ ಪ್ರತಿಸ್ಪಂದಿಸುತ್ತಾರೆ: ತಾವು ಬೆಳೆಯುತ್ತಾ ಹೋದಂತೆ ಹದಿಹರಯದವರು ಇತರರ ಭಾವನೆಗಳನ್ನು ತಿಳಿದುಕೊಳ್ಳುವುದರಲ್ಲಿ ಮತ್ತು ವಿಶ್ಲೇಷಿಸುವುದರಲ್ಲಿ ಉತ್ತಮರಾಗುತ್ತಾ ಹೋಗುತ್ತಾರೆ. ಈ ಕೌಶಲಗಳನ್ನು ಬೆಳೆಸಿಕೊಳ್ಳುತ್ತಾ ಇರುವ ಈ ವಯಸ್ಸಿನಲ್ಲಿ ಕೆಲವೊಮ್ಮೆ ಅವರು ಮುಖಭಾವನೆಗಳನ್ನು ಅಥವಾ ದೈಹಿಕ ಅಂಗಭಂಗಿಗಳನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿರುತ್ತದೆ.
Related Articles
ಪರಿವರ್ತನೆ
ಕುಟುಂಬದ ಜತೆಗೆ ಅತಿ ಕಡಿಮೆ ಸಮಯ ಕಳೆಯಲು ಬಯಸುತ್ತಾರೆ ಹಾಗೂ ಗೆಳೆಯರು ಹಾಗೂ ಸಮಾನ ವಯಸ್ಕರ ಜತೆಗೆ ಹೆಚ್ಚು ಇರಲಾರಂಭಿಸುತ್ತಾರೆ.
Advertisement
ಹೆತ್ತವರ ಜತೆಗೆ ಆಗಾಗ ವಾದಕ್ಕಿಳಿಯುತ್ತಾರೆ: ಮಕ್ಕಳ ಹದಿಹರಯದಲ್ಲಿ ಅವರು ಮತ್ತು ಹೆತ್ತವರ ನಡುವೆ ಬಿಕ್ಕಟ್ಟುಗಳು ತಲೆದೋರುವುದು ಸಹಜ, ಮಗು ಹೆಚ್ಚು ಸ್ವಾತಂತ್ರ್ಯವನ್ನು ಬಯಸುವುದೇ ಇದಕ್ಕೆ ಕಾರಣ. ಮಗು ಮಾಗುತ್ತಾ ಪ್ರೌಢವಾಗುತ್ತಿದೆ ಎಂಬುದರ ಲಕ್ಷಣ ಇದು. ಹದಿಹರಯದ ಆರಂಭದಲ್ಲಿ ಇಂತಹ ಬಿಕ್ಕಟ್ಟುಗಳು ತಾರಕ ಸ್ಥಿತಿಯಲ್ಲಿರುವುದು ಹೆಚ್ಚು. ಇಂತಹ ಸಂದರ್ಭಗಳಲ್ಲಿ, ಹೆತ್ತವರು ತಾವು ಮಗುವಿನ ಜತೆಗೆ ಸಂವಾದಿಸುತ್ತಿರುವುದಾಗಿ (ಆರೋಗ್ಯಕರ ಚರ್ಚೆ) ಭಾವಿಸುವುದರಿಂದ ಇದು ಮಗುವಿನ ಜತೆಗೆ ತಮ್ಮ ದೀರ್ಘಕಾಲಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗಬಹುದು.
ಮಗು ಪ್ರತಿಯೊಂದನ್ನೂ ತನ್ನ ಹೆತ್ತವರಿಗಿಂತ ಭಿನ್ನವಾಗಿ ನೋಡುತ್ತದೆ: ಮಗು ತನ್ನ ತಾಯ್ತಂದೆಯರನ್ನು ಅಸಮಾಧಾನಗೊಳಿಸಲು ಹೀಗೆ ಮಾಡುವುದಲ್ಲ. ಮಗು ಹೆಚ್ಚು ಅಮೂರ್ತವಾಗಿ ಆಲೋಚಿಸಲು ಹಾಗೂ ವಿವಿಧ ದೃಷ್ಟಿಕೋನಗಳನ್ನು ಪ್ರಶ್ನಿಸಲು ಕಲಿಯುತ್ತಿರುವುದೇ ಇದಕ್ಕೆ ಕಾರಣ. ಇದೇ ಸಮಯದಲ್ಲಿ ಕೆಲವು ಹದಿಹರಯದವರು ತಮ್ಮ ನಡವಳಿಕೆ ಮತ್ತು ಇತರರ ಬಗ್ಗೆ ತಾವಾಡಿದ ಮಾತುಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟಪಡುತ್ತಾರೆ. ಇಂತಹ ಕೌಶಲಗಳು ಕಾಲ ಸಂದಂತೆ ಅಭಿವೃದ್ಧಿ ಹೊಂದುತ್ತವೆ.
ಅಕಾಲ ಪ್ರೌಢತೆಬಾಲಕಿಯರಲ್ಲಿ ಎಂಟು ವರ್ಷ ಮತ್ತು ಬಾಲಕರಲ್ಲಿ ಒಂಬತ್ತು ವರ್ಷ ವಯಸ್ಸಿಗೆ ಮುನ್ನವೇ ದ್ವಿತೀಯಕ ಲೈಂಗಿಕ ಗುಣಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ಅಕಾಲ ಪ್ರೌಢತೆ ಎಂದು ಪರಿಗಣಿಸಲಾಗುತ್ತದೆ. ಅಕಾಲ ಪ್ರೌಢತೆಯ ಜತೆಗೆ ಹಲವು ಮನೋಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದ್ದು, ಇವು ಮಗುವಿನ ಭಾವನಾತ್ಮಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಬಾಲಕರಿಗಿಂತ ಬಾಲಕಿಯರಲ್ಲೆ ಅಕಾಲ ಪ್ರೌಢತೆ ಕಾಣಿಸಿಕೊಳ್ಳುವುದು ಹೆಚ್ಚು. ಯಾವುದೇ ಕಾಯಿಲೆ ಅಥವಾ ವೈದ್ಯಕೀಯ ಸ್ಥಿತಿ ಇಲ್ಲದೆಯೇ ಅನೇಕ ಬಾಲಕಿಯರು ಅಕಾಲ ಪ್ರೌಢತೆಯನ್ನು ಅನುಭವಿಸುತ್ತಾರೆ. ಆದರೆ, ಬಾಲಕರಲ್ಲಿ, ಹುದುಗಿರುವ ಯಾವುದಾದರೂ ವೈದ್ಯಕೀಯ ಸಮಸ್ಯೆಯ ಕಾರಣವಾಗಿ ಅಕಾಲ ಪ್ರೌಢತೆ ಉಂಟಾಗುವುದು ಹೆಚ್ಚು. ಇದು ಗೊನಾಡಲ್ ಸ್ಟಿರಾಯ್ಡಗಳ ಅವಧಿಪೂರ್ವ ಸ್ರಾವದಿಂದ ಉಂಟಾಗುತ್ತದೆ. ಇದು ಹೈಪೊಥಾಲಮಿಕ್ – ಪಿಟ್ಯುಟರಿ – ಗೊನಾಡಲ್ (ಎಚ್‌ಪಿಜಿ) ಆ್ಯಕ್ಸಿಸ್‌ನ ಅವಧಿಪೂರ್ವ ಸಕ್ರಿಯಾತ್ಮಕತೆಯಿಂದ ಉಂಟಾಗುವ ಕೇಂದ್ರ ಅಥವಾ ಗೊನಾಡೊಟ್ರೊಪಿನ್ ಆಧರಿತ ಅಕಾಲ ಪ್ರೌಢತೆಯಾಗಿರಬಹುದು ಅಥವಾ ಅಂಡಾಶಯ, ಅಡ್ರಿನಾಲ್‌ಗಳು ಅಥವಾ ಬೀಜಗಳಿಂದ ಗೊನಾಡಲ್ ಸ್ಟಿರಾಯ್ಡ ಗಳು ಉತ್ಪಾದನೆಗೊಂಡು ಉಂಟಾಗುವ ಬಾಹ್ಯ ಆರ್ಗನಾಡೊಟ್ರೊಪಿನ್ ಸ್ವತಂತ್ರ ಅಕಾಲ ಪ್ರೌಢತೆಯಾಗಿರಬಹುದು. ಇಂತಹ ಪ್ರಕರಣಗಳಲ್ಲಿ ಅತ್ಯಲ್ಪ ಸಂಖ್ಯೆಯ ಅಕಾಲ ಪ್ರೌಢತೆಯ ಪ್ರಕರಣಗಳು ಥೈರಾಯ್ಡ ಗ್ರಂಥಿಯ ಅಸಹಜತೆಗಳು ಅಥವಾ ಇತರ ಹಾರ್ಮೋನ್ ಸಂಬಂಧಿ ಸಮಸ್ಯೆಗಳಿಂದ, ವಂಶವಾಹಿ ಸ್ಥಿತಿಗತಿಗಳಿಂದ, ಮಿದುಳಿನ ಗಡ್ಡೆಗಳು ಯಾ ಸೋಂಕುಗಳಿಂದ ಮತ್ತು ಮಿದುಳಿಗಾದ ಗಾಯಗಳಿಂದ ಉಂಟಾಗುತ್ತವೆ. ಅವಧಿಮೀರಿದ ಪ್ರೌಢತೆ
ಬಾಲಕರಲ್ಲಿ ವೃಷಣಗಳ ಗಾತ್ರ 14 ವರ್ಷ ವಯಸ್ಸಿನ ಬಳಿಕವೂ ವೃದ್ಧಿಸದಿದ್ದಾಗ ಮತ್ತು ಬಾಲಕಿಯರಲ್ಲಿ 13 ವರ್ಷ ವಯಸ್ಸಿನ ಬಳಿಕವೂ ಸ್ತನಗಳು ಬೆಳೆಯದೆ ಇದ್ದಾಗ ಮಗು ಇನ್ನೂ ಹರಯಕ್ಕೆ ಬಂದಿಲ್ಲ ಅಥವಾ ಅವಧಿ ಮೀರಿದ ಪ್ರೌಢತೆ ಎಂದು ಪರಿಗಣಿಸಲಾಗುತ್ತದೆ. ಪ್ರಥಮ ಋತುಸ್ರಾವ 16 ವರ್ಷಗಳಾದರೂ ಆಗಿರುವುದಿಲ್ಲ. ದ್ವಿತೀಯಕ ಲೈಂಗಿಕ ಗುಣಲಕ್ಷಣಗಳು ವಿಳಂಬವಾಗಿ ಕಾಣಿಸಿಕೊಳ್ಳುವುದು ಬಹುತೇಕ ಹದಿಹರಯದವರ ಸಮಸ್ಯೆಯಾಗಿರುತ್ತದೆ. ಇದು ಕೀಳರಿಮೆ ಮತ್ತು ಸಂಬಂಧಿಯಾದ ಅನೇಕ ಮಾನಸಿಕ ಕಳವಳಗಳಿಗೆ ಕಾರಣವಾಗುತ್ತದೆ. ಅವಧಿಮೀರಿದ ಪ್ರೌಢತೆಯ ಸಮಸ್ಯೆಯುಳ್ಳ ಹದಿಹರಯದವರು ಶಾಲೆ, ಆಟೋಟ ಮತ್ತು ಇನ್ನಿತರ ಚಟುವಟಿಕೆಗಳ ಸಂದರ್ಭದಲ್ಲಿ ಕೀಟಲೆ, ತಮಾಷೆ, ಅವಹೇಳನಗಳಿಗೆ ತುತ್ತಾಗುತ್ತಾರೆ. ತಮ್ಮ ಸ್ನೇಹಿತರು ಮತ್ತು ಸಮಾನವಯಸ್ಕರಿಂದ ಹಿಂದುಳಿಯುವ ಕಳವಳ ಮತ್ತು ಭಯ ಅವರನ್ನು ನಾಚಿಕೆಯ ಸ್ವಭಾವದವರನ್ನಾಗಿಯೂ ಏಕಾಂಗಿಗಳಾಗಿಯೂ ಪರಿವರ್ತಿಸುತ್ತದೆ, ಇದು ಕೆಲವೊಮ್ಮೆ ವೈದ್ಯಕೀಯ ಸಹಾಯ ಪಡೆಯಬೇಕಾಗಿ ಬರುವಂತಹ ಸ್ಥಿತಿಯನ್ನೂ ತಲುಪಬಹುದು. ಕೆಲವೊಮ್ಮೆ ಅವಧಿಮೀರಿದ ಪ್ರೌಢತೆಯ ಗುಣವು “ಕುಟುಂಬ ಲಕ್ಷಣ’ವಾಗಿಯೂ ಕಾಣಿಸಿಕೊಳ್ಳಬಹುದು; ಇಂತಹ ಪ್ರಕರಣಗಳಲ್ಲಿ ಸಹಜ ಹದಿಹರಯದ ಬೆಳವಣಿಗೆಗಳು ವಿಳಂಬದ ಬಳಿಕ ನಡೆಯುತ್ತವೆ. ಇದನ್ನು ಕೆಲವೊಮ್ಮೆ ಸಾಂವಿಧಾನಿಕ ವಿಳಂಬ ಎಂಬುದಾಗಿ ಕರೆಯಲಾಗುತ್ತದೆ ಮತ್ತು ಇದು ಬಹುತೇಕ ಅವಧಿಮೀರಿದ ಪ್ರೌಢತೆಯ ಪ್ರಕರಣಗಳಿಗೆ ಕಾರಣವಾಗಿರುತ್ತದೆ. ಬೆಳವಣಿಗೆ ಮತ್ತು ವಯಸ್ಕತೆಯನ್ನು ಸಾಧಿಸುವುದರ ಮೇಲೆ ಪ್ರಭಾವ ಬೀರುವ ಸಾಂವಿಧಾನಿಕ ವಿಳಂಬವು ಹುಡುಗಿಯರಿಗಿಂತ ಹುಡುಗರಲ್ಲಿ ಕಾಣಿಸಿಕೊಳ್ಳುವುದು ಅಧಿಕ. ಅವಧಿಪೂರ್ವ ಪ್ರೌಢತೆ ಅಥವಾ ಅವಧಿಮೀರಿದ ಪ್ರೌಢತೆ ಯಾ ಬೆಳವಣಿಗೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳುಳ್ಳ ಹದಿಹರಯದವರು ಸಂಭಾವ್ಯ ಅಂಗಾಂಗ ಸಂಬಂಧಿ ರೋಗಕಾರಣಗಳನ್ನು ಕಂಡುಕೊಳ್ಳುವುದಕ್ಕಾಗಿ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು.