ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬುಧವಾರ (ಆಗಸ್ಟ್ 5-2020) ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ. ದೆಹಲಿಯಿಂದ ಲಕ್ನೋಗೆ ಆಗಮಿಸಿದ್ದ ಪ್ರಧಾನಿ ನಂತರ ಹೆಲಿಕಾಪ್ಟರ್ ಮೂಲಕ ಅಯೋಧ್ಯೆಗೆ ಆಗಮಿಸಿದ್ದರು. ನಂತರ ಹನುಮಾನ್ ಗಡಿಗೆ ತೆರಳಿ ಪೂಜೆ ಸಲ್ಲಿಸಿದ್ದರು, ಬಳಿಕ ರಾಮ್ ಲಲ್ಲಾನಿಗೆ ಪೂಜೆ ನೆರವೇರಿಸಿದ್ದರು.
ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್, ಗವರ್ನರ್ ಆನಂದಿಬೆನ್ ಪಟೇಲ್ ಹಾಗೂ 175 ಗಣ್ಯರು ಸಾಕ್ಷಿಯಾಗಿದ್ದರು.
ರಾಮಮಂದಿರ ಹೋರಾಟಕ್ಕೆ ಅರ್ಪಣ, ತರ್ಪಣವಿತ್ತು. ಈ ನಿಟ್ಟಿನಲ್ಲಿ 130 ಕೋಟಿ ಭಾರತೀಯರಿಗೆ ತಲೆಬಾಗಿ ನಮಿಸುತ್ತೇನೆ. ಶ್ರೀರಾಮ ಮರ್ಯಾದಾ ಪುರುಷೋತ್ತಮ. ಯಾವುದೇ ಕೆಲಸವಾಗಬೇಕಾದರೂ ಶ್ರೀರಾಮನತ್ತ ನೋಡುತ್ತೇವೆ. ನಾನು ಈ ಕಾರ್ಯ ಮಾಡುವ ಮೊದಲು ರಾಮಭಕ್ತ ಹನುಮಾನ್ ಆಶೀರ್ವಾದ ಪಡೆದು ಬಂದಿದ್ದೇನೆ ಎಂದು ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದರು.
ಹೀಗೆ ಅಯೋಧ್ಯೆಯಲ್ಲಿನ ಸಂಭ್ರಮದ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕ್ಷಣಗಳು ಇಲ್ಲಿವೆ…