Advertisement

ಛಾಯಾಗ್ರಾಹಕರು ಮೊದಲು ಸಂಘಟಿತರಾಗಿ: ಅಶೋಕ್‌

05:47 PM Aug 25, 2022 | Team Udayavani |

ಹಗರಿಬೊಮ್ಮನಹಳ್ಳಿ: ಛಾಯಾಗ್ರಾಹಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಎಲ್ಲರೂ ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಿ ಎಂದು ಪತ್ರಕರ್ತ ಅಶೋಕ್‌ ಉಪ್ಪಾರ್‌ ಛಾಯಾಗ್ರಹಕರಿಗೆ ಕರೆ ನೀಡಿದರು.

Advertisement

ಪಟ್ಟಣದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 183ನೇ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಛಾಯಾಗ್ರಾಹಕರು ಬರಹಗಾರರು ಹಾಗೂ ಶಿಲ್ಪಿಗಳು ಇತಿಹಾಸವನ್ನು ಉಳಿಸುವುದರಲ್ಲಿ ಪ್ರಮುಖರಾಗಿದ್ದಾರೆ. ಅವರಿಲ್ಲದೆ ಇತಿಹಾಸ ಮುಂದಿನ ಪೀಳಿಗೆಗೆ ಕಾಣಿಕೆಯಾಗಿ ಕೊಡಲು ಸಾಧ್ಯವಿಲ್ಲ ಎಂದರು.

ಹಿರಿಯ ಛಾಯಾಗ್ರಹಕ ಮಹೇಶ್‌ ಜಿಟ್ಟಿ ಮಾತನಾಡಿ, ಮೊಬೈಲ್‌ ಹಾವಳಿ ಹಾಗೂ ಡಿಜಿಟಲ್‌ ಹಿನ್ನೆಲೆಯಲ್ಲಿ ಛಾಯಾಗ್ರಾಹಕರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪೈಪೋಟಿ ನಡುವೆಯೂ ನಾವು ಉಳಿಯಬೇಕಾಗಿದೆ. ಸರ್ಕಾರ ನಮ್ಮ ಬಗ್ಗೆ ಕಾಳಜಿವಹಿಸಿ ಸೌಲಭ್ಯಗಳನ್ನು
ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹೊಸಪೇಟೆಯ ಖಾಜಾಪೀರ್‌ ಕಾರ್ಯಕ್ರಮ ಉದ್ಘಾಟಿಸಿ, ಛಯಾಗ್ರಾಹಕರ ಜೀವನ ಮತ್ತು ಶೈಲಿ ಕುರಿತು ಮಾತನಾಡಿದರು. ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೆ.ಎಂ. ಶಿವಶಂಕರ್‌ ಸ್ವಾಮಿ ನಿರ್ವಹಿಸಿದರು. ಕಠಾರೆ ಆಪ್ಟಿಕಲ್ಸ್‌ನ ಸಿ.ಎ.ಮೋಹನ್‌, ಬೆಂಗಳೂರಿನ ಪ್ಯಾನಾಸೋನಿಕ್‌ ಮ್ಯಾನೇಜರ್‌ ಚೇತನ್‌, ಬೆಂಗಳೂರಿನ ಚಿನ್ನು ಫೋಟೋ ಬುಕ್‌ ಮಾಲೀಕ ಮಲ್ಲೇಶ್‌
ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next