Advertisement

ಬಿಳಿಗಿರಿ ರಂಗನ ದೇಗುಲದಲ್ಲಿ ಅರಸರ ಫೋಟೋ ತೆರವು: ಆಕ್ರೋಶ

05:51 PM Sep 13, 2021 | Team Udayavani |

ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದಲ್ಲಿ ದೇವಾಲಯದ ಆವರಣದಲ್ಲಿ ಮೈಸೂರು ಮಹಾರಾಜರ ಫೋಟೋಗಳನ್ನು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಯೊಬ್ಬರ ಸೂಚನೆ ಯಿಂದ ಕಳೆದ ತಿಂಗಳ ಹಿಂದೆ ತೆರವುಗೊಳಿಸಲಾಗಿದೆ ಎಂದು ದೇಗುಲದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಐತಿಹಾಸಿಕ ದೇಗುಲ: ಸಾವಿರಾರು ವರ್ಷಗಳ ಪಾರಂಪರಿಕ ಹಿನ್ನೆಲೆಯುಳ್ಳ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಕಟ್ಟಡಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ. ಇದಕ್ಕೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿಗೆ ರಸ್ತೆ ನಿರ್ಮಾಣ, ದೇಗುಲದ ನಿರ್ಮಾಣ ಮಾಡಿ ದವರು ಮೈಸೂರು ಅರಸರೇ ಎಂದು ಇತಿಹಾಸ ಹೇಳುತ್ತದೆ. ಇದರೊಂದಿಗೆ ಇಲ್ಲಿನ ರಂಗನಾಥ ಸ್ವಾಮಿ, ಅಲಮೇಲು ರಂಗನಾಯಕಿ ಹಾಗೂ ಇದರ ತಳಭಾಗದ ಗಂಗಾಧರೇಶ್ವರ ಸ್ವಾಮಿಗೆ ಲಕ್ಷಾಂತರ ರೂ. ಮೌಲ್ಯದ ರತ್ನಖಚಿತ ಚಿನ್ನಾಭರಣಗಳನ್ನುಮೈಸೂರಿನ ಅರಸರು ನೀಡಿದ್ದಾರೆ.

ದೇವಸ್ಥಾನ ಶಿಥಿಲಗೊಂಡ ಹಿನ್ನೆಲೆ 2017 ಮಾರ್ಚ್‌ನಲ್ಲಿ ಪುರಾತತ್ವ ಇಲಾಖೆ ವತಿಯಿಂದ 2.40 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಯನ್ನು ಶಿವಮೊಗ್ಗದ ಪರಂಪರಾ ಕನ್ಸಟ್ರಕ್ಷನ್‌ ವತಿಯಿಂದ ಆರಂಭಿಸಲಾಗಿತ್ತು. 20 ತಿಂಗಳ ಒಳಗೆಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತಾದರೂ ಸುಮಾರು 4 ವರ್ಷದ ತರುವಾಯ ಅಂದರೆ ಇದೇ ವರ್ಷದ ಮಾ.29ರಿಂದಏ.2ರವರೆಗೆ ಕಾಮಗಾರಿಪೂರ್ಣ ಗೊಳಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡ
ಲಾಗಿತ್ತು. ನಂತರ ಕೋವಿಡ್‌ 2ನೇ ಅಲೆ ಜಿಲ್ಲೆಯಲ್ಲಿ ಇಲ್ಲಿಂದಲೇ ಆರಂಭಗೊಂಡಿತ್ತು.

ವಿಶಿಷ್ಟ ಭಾವಚಿತ್ರ: ಇಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌, ಜಯಚಾಮರಾಜೇಂದ್ರ ಒಡೆಯರ್‌ರ ಭಾವಚಿತ್ರವೂ ತೈಲವರ್ಣ ಚಿತ್ರಗಳಾಗಿದ್ದು ಇದಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಇದು ದೇಗುಲಕ್ಕೆ ಯಾರು ನೀಡಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನು ಯಾವ ಕೋನದಲ್ಲಿ ನೋಡಿದರು. ಇಬ್ಬರು ಅರಸರು ನಮ್ಮನ್ನೇ ನೋಡುತ್ತಿರುವಂತೆ ಇದನ್ನು ಚಿತ್ರಿಸಲಾಗಿದೆ. ಈ ಚಿತ್ರಗಳನ್ನು ಅಳವಡಿಸಿದ್ದ ದೇಗುಲದ ಆಡಳಿತ ವರ್ಗ ಇದಕ್ಕಿದ್ದಂತೆಯೇ ತೆರವುಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮತ್ತೆ ಭಾವಚಿತ್ರ ಅಳವಡಿಸಿದ ಆಡಳಿತವರ್ಗ:
ಈ ಸುದ್ದಿ ವ್ಯಾಪಿಸುತ್ತಿದ್ದಂತೆಯೇ ದೇಗುಲದ ಆಡಳಿತ ವರ್ಗ ಎಚ್ಚೆತ್ತು ಮತ್ತೆ ಇದನ್ನು ಅಲ್ಲೇ ಅಳವಡಿಸಿದ್ದಾರೆ. ಈ ಬಗ್ಗೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ ಕುಮಾರ್‌ ಮಾಹಿತಿ ನೀಡಿ, ಇಲ್ಲಿನ ಕಲ್ಲಿನ ಕಂಬಗಳಿಗೆ ಮೈಸೂರು ಅರಸರ ಭಾವಚಿತ್ರದ ಫೋಟೋ ಅಳವಡಿಸಬೇಕಾಗಿದೆ. ಬಿಟ್‌ನಲ್ಲಿ ಕಲ್ಲು ಕೊರೆದು ಇದಕ್ಕೆ ಮೊಳೆ ಹಾಕಿ ಇದನ್ನು ಶಾಶ್ವತವಾಗಿ ಇಲ್ಲೇ ಇರುವಂತೆ ಮಾಡುವ ಸಲುವಾಗಿ ತೆರವುಗೊಳಿಸಲಾಗಿತ್ತು ಹೊರತು ಬೇರೆ ಯಾರ ಒತ್ತಡದಿಂದ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next