Advertisement
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಕೊಡಗು, ತುಮಕೂರು, ಕೋಲಾರ ಸುತ್ತಲಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರಿಗೆ ಪೂರ್ವಮುಂಗಾರು ಮಳೆ ತಂಪೆರೆಯಿತು.
Related Articles
Advertisement
ಈ ಮಧ್ಯೆ, ರಾತ್ರಿ 7ರಿಂದ 8ರವರೆಗೆ ಚಾಮರಾಜನಗರದಲ್ಲಿ 73 ಮಿ.ಮೀ., ನೆಲಮಂಗಲದಲ್ಲಿ 66.5, ಮಡಿಕೇರಿ 65.5 ಮಿ.ಮೀ., ಬೆಂಗಳೂರಿನ ಹೊರವಲಯದ ವಿವಿಧೆಡೆ 50ರಿಂದ 100 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಸಿಡಿಲು ಬಡಿದು ಹನ್ನೆರಡು ಕುರಿಗಳು ಸಾವಿಗೀಡಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಕರಾವಳಿಯಲ್ಲೂ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ಬಳಿಕ ಮಳೆ ಬಂದಿದೆ. ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಪುತ್ತೂರಿನಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆ ಸುರಿಯಿತು. ಇದೇ ವೇಳೆ, ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 43.1 ಡಿ.ಸೆ.ತಾಪಮಾನ ದಾಖಲಾಗಿದೆ.