ಹೊಸದಿಲ್ಲಿ: ಇನ್ನು ಫೋನ್ ಪೇ ಬಳಸಿ ವಿದೇಶಗಳಲ್ಲೂ ಹಣ ಪಾವತಿ ಮಾಡಬಹುದು. ಇದರ ಮೂಲಕ ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ವಿದೇಶಿ ಕರೆನ್ಸಿಯಲ್ಲಿ ಹಣ ಕಡಿತವಾಗುತ್ತದೆ. ಸದ್ಯ ಈ ಪಾವತಿ ವ್ಯವಸ್ಥೆ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಲ, ಭೂತಾನ್‌ಗಳಲ್ಲಿ ಲಭ್ಯವಿದೆ. ಕಾಲಕ್ರಮೇಣ ಇನ್ನಷ್ಟು ದೇಶಗಳಿಗೆ ಇದು ವಿಸ್ತರಿಸಿಕೊಳ್ಳಲಿದೆ. ಈ ಹೊಸ ವ್ಯವಸ್ಥೆ ಯುಪಿಐ ವ್ಯವಸ್ಥೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಅಧಿಕೃತ ಆ್ಯಪ್ ಮಾತ್ರ: ಆರ್‌ಬಿಐ
ಹೊಸದಿಲ್ಲಿ: ಆ್ಯಪ್ ಸ್ಟೋರ್‌ಗಳಲ್ಲಿ ಇನ್ನು ಮುಂದೆ ಕೇವಲ ಅನುಮತಿಯಿರುವ ಮತ್ತು ನಿಯಂತ್ರಿತ ಡಿಜಿಟಲ್ ಸಾಲ ಆ್ಯಪ್‌ಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿದೆ.
ಜತೆಗೆ ಕಾನೂನುಬದ್ಧ ಸಂಸ್ಥೆಗಳು ಬಳಸುತ್ತಿರುವ ಡಿಜಿಟಲ್ ಸಾಲ ಆ್ಯಪ್‌ಗ್ಳ ಪಟ್ಟಿಯನ್ನು ಕೂಡ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆರ್‌ಬಿಐ ರವಾನಿಸಿದೆ.