ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ತೆರಳುವ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಮತ್ತು ರಾಜ್ಯದ ಸಚಿವರೊಬ್ಬರ ನಡುವೆ ದೂರವಾಣಿಯಲ್ಲಿಯೇ ಮಾತಿನ ಸಮರ ನಡೆದಿದೆ.
ತಮಿಳುನಾಡಿನ ಥೇಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ತೆರಳುವಂತೆ ರಾಜ್ಯದ ಬೆಂಗಳೂರಿನ ಸಚಿವರೊಬ್ಬರಿಗೆ ಬಿಜೆಪಿ ರಾಷ್ಟ್ರೀಯ ಮುಖಂಡರು ಸೂಚನೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಒಂದು ಗಂಟೆ ಬಾಕಿ ಇರುವಾಗ ತೆರಳುವಂತೆ ಸೂಚಿಸಿದ್ದಕ್ಕೆ ಸಚಿವರು ಸಿಟ್ಟಾಗಿದ್ದು, ತಾನು ತೆರಳುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ
ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೇಳುತ್ತಿದ್ದೇನೆ. ಈ ವೇಳೆ ತೆರಳಲೇಬೇಕು ಎಂದು ಪಕ್ಷದಲ್ಲಿನ ತನ್ನ ಹುದ್ದೆಯನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಮುಖಂಡ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಮತ್ತಷ್ಟು ಸಿಟ್ಟಾದ ಸಚಿವ ಆ ಹುದ್ದೆಗೆ ಹೋಗುವ ಮೊದಲೇ ನಿನ್ನನ್ನು ನೋಡಿದ್ದೇನೆ, ಇದೆಲ್ಲಾ ನನ್ನ ಹತ್ತಿರ ಬೇಡ, ನನಗೆ ಸರಿಯಾಗಿ ಹೇಳಿಲ್ಲ ಎಂದು ನೇರವಾಗಿ ಸಚಿವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿ.ಡಿ. ಪ್ರಕರಣ: ನ್ಯಾಯಾಂಗ ತನಿಖೆಗೆ ಪಟ್ಟು, 6 ಸಚಿವರ ರಾಜೀನಾಮೆಗೂ ಕೈ ಆಗ್ರಹ