Advertisement

ಫಿಲೋಮಿನಾ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ

02:45 PM Nov 29, 2017 | Team Udayavani |

ದರ್ಬೆ: ಶಿಕ್ಷಣ ಎಂಬುದು ಮನುಷ್ಯನ ಬದುಕನ್ನು ರೂಪಿಸುವ ಮಾಧ್ಯಮ. ಶಿಕ್ಷಣದಿಂದ ವ್ಯಕ್ತಿತ್ವ ಹಾಗೂ ಬಲಿಷ್ಠ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ| ಬಿ. ಶ್ಯಾಮ್‌ ಪ್ರಸಾದ್‌ ಶೆಟ್ಟಿ ಹೇಳಿದರು. ಅವರು ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Advertisement

ಸಮಯದ ಪರಿಪಾಲನೆ ಅಗತ್ಯ
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಶಿಕ್ಷಣದ ದಾಹ ಇರಬೇಕು ಮತ್ತು ಈ ಶಿಕ್ಷಣದ ದಾಹ ಮತ್ತೂಬ್ಬರಿಗೆ ಸ್ಫೂರ್ತಿಯಾಗಬೇಕು. ಶೈಕ್ಷಣಿಕ ಅವಧಿಯಲ್ಲಿ ಶ್ರದ್ಧೆ, ತಾಳ್ಮೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಲ್ಲಿ ಜೀವನದ ಕೊನೆಯವರೆಗೆ ಯಶಸ್ವಿ ಎನಿಸಲು ಸಹಕಾರಿಯಾಗುವುದು. ಧನಾತ್ಮಕ ಚಿಂತನೆಯೊಂದಿಗೆ ಪರಸ್ಪರ ಗೌರವ, ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳುವುದರ ಜತೆಗೆ ಸಮಯದ ಪರಿಪಾಲನೆಯನ್ನು ಕೂಡ ಅಗತ್ಯವಾಗಿ ಮಾಡಬೇಕು ಎಂದರು.

ಪರಿಪೂರ್ಣತೆ
ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹಾ ಮಾತನಾಡಿ, ಸಮಾಜದಲ್ಲಿನ ಇತರರ ಕಷ್ಟದ ನೋವಿನ ಕಾಳಜಿ ಹೊಂದಿದಾಗ, ಜೀವನದಲ್ಲಿ ಧೈರ್ಯ, ಭರವಸೆಯಿದ್ದಾಗ ಮಾತ್ರ ಮನುಷ್ಯ ಪರಿಪೂರ್ಣವೆನಿಸಬಲ್ಲನು ಎಂದು ಹೇಳಿದರು.

ಪ್ರತಿಭೆಗಳಿಗೆ ಗೌರವ
ಕಳೆದ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಆಯಿಷತುಲ್‌ ಶಮೀಮ, ನಿಶಾ ಭಟ್‌, ಅನುಪಮಾ ಪೈ. ಬಿ., ಮೊಹಮ್ಮದ್‌ ಸಿನಾನ್‌ ಎ.ಎಸ್‌., ಜೆನಿಫರ್‌ ರೊವಿನಾ ಗೊನ್ಸಾಲ್ವಿಸ್‌, ಹೃತ್ವಿಕ್‌ ಆ್ಯನ್ಸಿ ಡಿ’ಸೋಜಾ, ಶ್ರೀಲಕ್ಷ್ಮೀ ಭಟ್‌, ಮೈತ್ರಿ ಕೆ.ಬಿ., ವೆನಿಶ ಶೈಲಿ ಡಿ’ಸೋಜಾ, ದೀಪಾ ಸಿ. ಭಟ್‌, ಶ್ವೇತಲ್‌ ಶೆರೀನ್‌ ವೇಗಸ್‌, ಕೌಶಿಕ್‌ ಮಯ್ಯ, ಐರಲ್‌ ಕೆರೋಲಿನ್‌ ಡಿ’ಸೋಜಾ, ಜಿಶಾ ಎಂ.ಪಿ., ಶಮಾ ಟಿ.ಕೆ., ಪ್ರಜ್ವಲ್‌ ಸಿ.ಪಿ., ಅರ್ಚನಾಡಿ. ಅವರನ್ನು ಗೌರವಿಸಲಾಯಿತು.

ಬಹುಮಾನ ವಿತರಣೆ
ಪಠ್ಯ, ಪಠ್ಯೇತರ ವಿಭಾಗದಲ್ಲಿ ಸಾಧನೆಗೈದ, ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಸಿಬಂದಿ ವರ್ಗದವರಿಗೆ ಬಹುಮಾನ ವಿತರಿಸಲಾಯಿತು.

Advertisement

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ| ಬಿ. ಶ್ಯಾಮ್‌ ಪ್ರಸಾದ್‌ ಶೆಟ್ಟಿ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಪ್ರೊ| ಜನಾರ್ದನ್‌ ಹೇರಳೆ ಅವರನ್ನು ಸಮ್ಮಾನಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್‌ ರೈ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ಎ.ಜೆ. ರೈ ಉಪಸ್ಥಿತರಿದ್ದರು. ಪ್ರಾಂಶುಪಾಲ ವಂ| ವಿಜಯ್‌ ಲೋಬೋ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಆ್ಯಲನ್‌ ರೊವಿನ್‌ ಪಿಂಟೋ ಸ್ವಾಗತಿಸಿ, ಕಾರ್ಯದರ್ಶಿ ಕೃತಿ ಎ.ಟಿ. ವಂದಿಸಿದರು. ವಿದ್ಯಾರ್ಥಿ ಅನ್ವಿತ್‌ ಡಿ’ಸೋಜಾ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಶಿಕ್ಷಣ ಕ್ಷೇತ್ರದಲ್ಲಿನ ಹೊಸ ಕ್ರಾಂತಿ
ಮಾçದೆ ದೇವುಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಆಲ್ಫೆ†ಡ್‌ ಜಾನ್‌ ಪಿಂಟೋ, ಶಿಕ್ಷಣ ಶಿಲ್ಪಿ ವಂ| ಪತ್ರಾವೋ ಅವರು 36 ವರ್ಷಗಳ ಕಾಲ ಮಾಯಿದೆ ದೇವುಸ್‌ ಚರ್ಚ್‌ನಲ್ಲಿ ಧರ್ಮಗುರುಗಳಾಗಿದ್ದ ಸಂದರ್ಭದಲ್ಲಿ ಪುತ್ತೂರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸತಾದ ಕ್ರಾಂತಿ ಆರಂಭವಾಯಿತು.  ವಿಷ್ಯದಲ್ಲಿ ಇನ್ನೂ ಅನೇಕ ಶಿಕ್ಷಣ ಸಂಸ್ಥೆಗಳು ಮಾಯಿದೆ ದೇವುಸ್‌ ಚರ್ಚ್‌ ಹೆಸರಿನಲ್ಲಿ ಆರಂಭಗೊಳ್ಳಬಹುದು ಎಂದರು.

ಕ್ರೀಡಾ ಪ್ರತಿಭೆಗಳಿಗೆ ಗೌರವ 
ವಿವಿಧ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರಶಾಂತ್‌ ಜೆ.ನಾೖಕ್‌ (ಚೆಸ್‌), ಸಿಂಚನಾ ಡಿ. ಗೌಡ (ಸರ್ಫಿಂಗ್), ಭವಿತ್‌ ಕುಮಾರ್‌ (ಪೋಲ್‌ವಾಲ್ಟ್), ತ್ರಿಶೂಲ್‌ (ವಾಟರ್‌ ಪೋಲೋ), ರೋಯ್ಸ ಟನ್‌ ರೊಡ್ರಿಗಸ್‌ (ಈಜು), ಜೈಶಾಂ ಭಟ್‌(ಈಜು), ಜೇನ್‌ ನೀನಾ ಕುಟಿನ್ಹಾ (ಈಜು), ಪ್ರತೀಕ್ಷಾ  ಎನ್‌. ಕೆ. (ಹಾಕಿ), ಪೃಥ್ವಿ ಕೆ.ಜೆ (ಹಾಕಿ), ನಾಣಯ್ಯ ಎನ್‌.ಎಸ್‌(ಹಾಕಿ), ಟಿ.ಎಚ್‌. ಅಕ್ಷಿತ್‌ ಕಾವೇರಪ್ಪ (ಹಾಕಿ), ಅಗ್ನಿವೇಶ್‌ ಪಿ. (ಟೆನ್ನಿಸ್‌), ಹರ್ಷಿತ್‌ ಎಂ. (ಟೆನ್ನಿಸ್‌), ನಿಧಿ ಯು. ಕುಮಾರ್‌ (ಆ್ಯತ್ಲೆಟಿಕ್ಸ್‌ ) ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಕಾರಾತ್ಮಕ ನಿಲುವು ಬೇಕು
ಕಾಲೇಜು ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೋ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ತನ್ನ ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆ, ಕೌಶಲವನ್ನು ತೋರ್ಪಡಿಸುವಂತಾಗಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next