Advertisement

ಫರಂಗಿಪೇಟೆ : 10 ಜೋಡಿಗಳ ಸಾಮೂಹಿಕ ವಿವಾಹ

12:27 PM Feb 27, 2017 | Team Udayavani |

ಬಂಟ್ವಾಳ : ಮುಹಿಯ್ಯುದ್ದೀನ್‌ ಜುಮಾ ಮಸೀದಿ ಫರಂಗಿಪೇಟೆ  ಸಹಕಾರದೊಂದಿಗೆ ಖೀದ್‌ಮತುಲ್‌ ಇಸ್ಲಾಂ ಅಸೋಸಿಯೇಶನ್‌ ಫರಂಗಿಪೇಟೆ  ಇದರ ಆಶ್ರಯದಲ್ಲಿ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ  ಫೆ. 26ರಂದು  ನಡೆದ 10 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ದ.ಕ.  ಜಿಲ್ಲಾ ಖಾಝಿ ತ್ವಾಕ ಅಹ್ಮದ್‌ ಮುಸ್ಲಿಯಾರ್‌ ದುಅ ಮೂಲಕ ಉದ್ಘಾಟಿಸಿದರು.

Advertisement

ಫರಂಗಿಪೇಟೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಫ್‌. ಮುಹಮ್ಮದ್‌ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಪಾಣಕ್ಕಾಡ್‌ ಶಮೀರ್‌ ಅಲಿ ತಂಙಳ್‌, ಗೇರು ಅಭಿವೃದ್ಧಿ  ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ  ಎಂ.ಎ. ಗಫ‌ೂರ್‌, ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ| ಬಿ.ಅಹ್ಮದ್‌ ಹಾಜಿ ಮುಹಿಯುದ್ದೀನ್‌ ಅವರನ್ನು  ಸಮ್ಮಾನಿಸಲಾಯಿತು. ಫರಂಗಿಪೇಟೆ ಜುಮಾ ಮಸೀದಿ ಖತೀಬ್‌ ಉಸ್ಮಾನ್‌ ದಾರಿಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಆಹಾರ ಸಚಿವ ಯು.ಟಿ. ಖಾದರ್‌., ಎಂಜೆಎಂ ಫರಂಗಿಪೇಟೆ ಕಾರ್ಯದರ್ಶಿ  ಎ. ಯೂಸುಫ್‌ ಅಲಂಕಾರ್‌, ಮಂಗಳೂರು ಹಿದಾಯ ಫೌಂಡೇಶನ್‌ ಅಧ್ಯಕ್ಷ ಹನೀಫ್‌, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್‌ ಖಾನ್‌ ಕೋಡಾಜೆ, ಜಿಪಂ ಶಿಕ್ಷಣ ಸ್ಥಾಯೀ  ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್‌ ಹಮೀದ್‌,  ತುಂಬೆಯ ಅಬ್ದುಲ್‌ ಲತೀಫ್‌, ಫರಂಗಿಪೇಟೆ ಸ್ವರ್ಣೋದ್ಯಮಿ  ಶುಕುರ್‌, ಉದ್ಯಮಿಗಳಾದ ಅಬ್ದಲ್‌ ಮೋನು, ಅಬ್ದುಲ್‌ ರಶೀದ್‌, ಮಂಗಳೂರು ಫಿಶ್‌ ಮರ್ಚೆಂಟ್‌ನ ಇಸ್ಮಾಯಿಲ್‌ ಕೆಇಎಲ್‌, ಕಣ್ಣೂರು ಬೀಡಿ ಉದ್ಯಮಿ ಮುಹಮ್ಮದ್‌, ವಳಿಬೆ„ಲ್‌ ಜುಮಾ ಮಸೀದಿಯ ಗೌರವಾಧ್ಯಕ್ಷ ಝಫರುಲ್ಲಾ ಒಡೆಯರ್‌, ಸಲೀಂ ಟೆ„ಲರ್‌ ಫರಂಗಿಪೇಟೆ, ಉದ್ಯಮಿ  ಹಂಝ, ಮಾಹಿನ್‌ ದಾರಿಮಿ ಪಾತೂರು, ಮಂಗಳೂರು ಟಿಆರ್‌ಎಫ್‌ ಗೌರವ ಸಲಹೆಗಾರ ರಫೀಕ್‌ ಮಾಸ್ಟರ್‌, ಝುಬೆ„ರ್‌ ಸಜಿಪಪಡು, ಬಿ.ಕೆ. ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.

ಜಿ.ಪಂ.  ಮಾಜಿ ಸದಸ್ಯ ಎಫ್‌.ಉಮರ್‌ ಫಾರೂಕ್‌ ಪ್ರಸ್ತಾವನೆ ನೀಡಿ  ಸ್ವಾಗತಿಸಿದರು. ಅಬ್ದುಲ್‌ ಹಮೀದ್‌ ಗೋಳ್ತಮಜಲು ವಂದಿಸಿದರು.  ಮಾಸ್ಟರ್‌ ಅಬ್ದುಲ್‌ ರಝಾಕ್‌ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಫರಂಗಿಪೇಟೆ ಜುಮಾ ಮಸೀದಿ ಮತ್ತು ಖೀದ್‌ಮತ್ತುಲ್‌ ಇಸ್ಲಾಮ್‌ ಅಸೋಸಿಯೇಶನ್‌ನ  ಸದಸ್ಯರು ಈ ಸಂದರ್ಭದಲ್ಲಿ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next