ಕೋವಿಡ್ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ, ಅರ್ಧಕ್ಕೆ ನಿಂತಿದ್ದ “ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಹೈದರಾಬಾದ್‌ನತ್ತ ಮುಖ ಮಾಡಿತ್ತು. ಅಲ್ಲಿ ಅದ್ಧೂರಿ ಸೆಟ್ ನಿರ್ಮಿಸಿದ್ದ ಚಿತ್ರತಂಡ, ಅಂದುಕೊಂಡಂತೆ ಈಗ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. “ಫ್ಯಾಂಟಮ್’ ಚಿತ್ರಕ್ಕಾಗಿ ಮೂರು ತಿಂಗಳಿನಿಂದ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡ,ಕೊನೆಗೂ ಚಿತ್ರದ ಶೂಟಿಂಗ್ ಮುಗಿಸಿದೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ನಟ ಸುದೀಪ್, “ತುಂಬ ಸುದೀರ್ಘವಾದ ಶೆಡ್ನೂಲ್ ಇಂದು ಮುಕ್ತಾಯವಾಯಿತು, ಇದೊಂದು ಅದ್ಭುತ ಅನುಭವ’ ಎಂದಿದ್ದಾರೆ. ಅಲ್ಲದೆ “ಫ್ಯಾಂಟಮ್’ ಚಿತ್ರೀಕರಣದ ಬಗ್ಗೆ ಬರೆದುಕೊಂಡಿರುವ ಸುದೀಪ್, “ಹೈದರಾಬಾದ್‌ನಲ್ಲಿ ಸುದೀರ್ಘ ಶೆಡ್ನೂಲ್ ಈಗ ತಾನೆ ಮುಕ್ತಾಯವಾಗಿದೆ. ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ.ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪೃಥ್ವಿ ಅಂಬರ್ ಹೊಸ ಕನಸು
ಇನ್ನು “ಫ್ಯಾಂಟಮ್’ ಹೈದರಾಬಾದ್ ಚಿತ್ರೀಕರಣದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, “ಇಡೀ ತಂಡಕ್ಕೆ ಇದೊಂದು ವಿಶೇಷ ಅನುಭವ ನೀಡಿದ ಶೂಟಿಂಗ್ ಆಗಿತ್ತು. ನಮ್ಮ ಮುಂದೆ ಸಾಕಷ್ಟು ಚಾಲೆಂಜ್ ಇತ್ತು. ನಮ್ಮ ಐಡಿಯಾದಲ್ಲಿ ಕಾಂಪ್ರಮೈಸ್ ಇಲ್ಲದೆ ಶೂಟಿಂಗ್ ಮಾಡಬೇಕು ಅಂದುಕೊಂಡಿದ್ದೆವು. ಅದರಂತೆ ಮಾಡಿ ಮುಗಿಸಿದ್ದೇವೆ. ಈಗಾಗಲೇ ಸುಮಾರು90ಕ್ಕೂ ಹೆಚ್ಚು ದಿನಗಳಕಾಲ ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡಿದ್ದೇವೆ. ಈ ಮೂಲಕ ಶೇಕಡಾ75 ರಷ್ಟು ಚಿತ್ರೀಕರಣ ಮುಗಿದಿದೆ. ಬಾಕಿಯಿರುವ ಚಿತ್ರದ ಭಾಗವನ್ನು ದಕ್ಷಿಣ ಕನ್ನಡ ಅಥವಾ ಕೇರಳದಲ್ಲಿ ಚಿತ್ರೀಕರಿಸುವ ಯೋಚನೆಯಿದೆ’ ಎಂದಿದ್ದಾರೆ.
ಇನ್ನು “ಫ್ಯಾಂಟಮ್’ ಚಿತ್ರದಲ್ಲಿಕಿಚ್ಚ ಸುದೀಪ್ ವಿಕ್ರಾಂತ್ ರೋಣ ಎನ್ನುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಸದ್ಯಕೊನೆಯ ಹಂತದ ಚಿತ್ರೀಕರಣದಲ್ಲಿರುವ “ಫ್ಯಾಂಟಮ್’ ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.