Advertisement
ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿ ಸೋಂಕು ಅಮೆರಿಕಾದಲ್ಲಿ ಪತ್ತೆಯಾದ ಆಲ್ಫಾ ರೂಪಾಂತರಿ ಸೋಂಕಿಗಿಂತ ತೀವ್ರತೆ ಹೆಚ್ಚು ಎಂದು ವೈದ್ಯಕೀಯ ವರದಿ ತಿಳಿಸಿದೆ. ಆದರೇ, ಡೆಲ್ಟಾ ರೂಪಾಂತರಿ ಸೋಂಕಿನ ವಿರುದ್ಧ ರಷ್ಯಾ ಮೂಲದ ಫೈಜರ್ ಹಾಗೂ ಆಸ್ಟ್ರಾಜೆನಿಕಾ ಲಸಿಕೆಗಳು ಪರಿಣಾಮಕಾರಿ ಎಂದು ಲಾನ್ಸೆಟ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ.
Related Articles
Advertisement
ಡೆಲ್ಟಾ ರೂಪಾಂತರಿ ವಿರುದ್ಧ ಶೇ. 92ರಷ್ಟು ಪರಿಣಾಮಕಾರಿ ಫೈಜರ್ :
ಅಮೆರಿಕಾದಲ್ಲಿ ಪತ್ತೆಯಾದ ಆಲ್ಫಾ ಕೋವಿಡ್ ರೂಪಾಂತರಿ ಸೋಂಕಿನ ವಿರುದ್ಧ ರಷ್ಯಾದ ಫೈಜರ್ ಲಸಿಕೆ ಶೇಕಡಾ 73 ರಷ್ಟ ಪರಿಣಾಮಕಾರಿಯಾಗಿದ್ದು, ಹಾಗೂ ಭಾರತದಲ್ಲಿ ಪತ್ತೆಯಾದ ಡೆಲ್ಟಾ ಕೋವಿಡ್ ರೂಪಾಂತರಿ ಸೋಂಕಿನ ವಿರುದ್ಧ ಶೇಕಡಾ 92 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಇನ್ನು, ಆಸ್ಟ್ರಾಜೆನಿಕಾ ಲಸಿಕೆ ಅಮೆರಿಕಾದಲ್ಲಿ ಕಾಣಿಸಿಕೊಂಡ ಆಲ್ಫಾ ಸೋಂಕಿನ ವಿರುದ್ಧ ಶೇಕಡಾ 73 ರಷ್ಟು ಹಾಗೂ ಭಾರತದಲ್ಲಿ ಪತ್ತೆಯಾದ ಡೆಲ್ಟಾ ಸೋಂಕಿನ ವಿರುದ್ಧ ಶೇಕಡಾ 60 ರಷ್ಟು ಪರಿಣಾಮಕಾರಿಯಾಗಿದೆ. ಆಸ್ಟ್ರಾಜೆನಿಕಾ ಲಸಿಕೆಯ ಎರಡು ಡೋಸ್ ಗಳು ಡೆಲ್ಟಾ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕೂಡ ತಿಳಿಸಿದೆ.
ಆಲ್ಫಾ ರೂಪಾಂತರಿ ಸೋಂಕಿಗೆ ಒಳಗಾದವರಿಗಿಂತ ಹೆಚ್ಚು ಡೆಲ್ಟಾ ಸೋಂಕಿಗೆ ಒಳಗಾದವರು ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಡೆಲ್ಟಾ ಸೋಂಕು ಆಲ್ಫಾ ಸೋಂಕಿಗಿಂತ ಅಪಾಯಕಾರಿಯಾಗಿದ್ದು ಎಚ್ಚರಿಕೆ ಅಗತ್ಯವೆಂದೂ ಕೂಡ ಸಂಶೋಧಕರು ಎಚ್ಚರಿಸಿದ್ದಾರೆ.
ಲಸಿಕೆಗಳ ಮಧ್ಯೆ ಹೋಲಿಕೆ ಸಲ್ಲದು :
ಈ ಎರಡೂ ಲಸಿಕೆಗಳು ಭಾರತದಲ್ಲಿ ಪತ್ತೆಯಾದ ಡೆಲ್ಟಾ ಸೋಂಕಿನ ವಿರುದ್ದ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದ್ದಲ್ಲದೇ, ಲಸಿಕೆಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ, ಆದರೇ, ಬಿಕ್ಕಟ್ಟನನು ನಿಯಂತ್ರಣ ಮಾಡುವಲ್ಲಿ ಶೀಘ್ರವಾಗಿ ಕಾರ್ಯೋನ್ಮುಖರಾಗಬೇಕಾದ ಸಂದರ್ಭದಲ್ಲಿ ಜಗತ್ತು ಇರುವ ಕಾರಣದಿಂದಾಗಿ ಲಸಿಕೆಗಳ ಸಾಮರ್ಥ್ಯ ಹಾಗೂ ಪರಿಣಾಮಕಾರಿತ್ವದ ಬಗ್ಗೆ ನಾವು ಅಧ‍್ಯಯನ ನಡೆಸಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ