Advertisement

ಪಿಎಫ್ಐ 2ನೇ ಹಂತದ ನಾಯಕರು ಸಕ್ರಿಯ ಹೊಸ ಹೆಸರಿನಲ್ಲಿ ಮತ್ತೆ ಮುಖ್ಯವಾಹಿನಿಗೆ ಬರಲು ಸಿದ್ಧತೆ

10:45 PM Feb 24, 2023 | Team Udayavani |

ಬೆಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ನಿಷೇಧಿಸಿದ್ದರೂ ಅದರ ಎರಡನೇ ಹಂತದ ನಾಯಕರು ಈಗಲೂ ಸಕ್ರಿಯವಾಗಿದ್ದು, ಹೊಸ ಮಾದರಿ ಅಥವಾ ಹೊಸ ಸಂಘಟನೆ ಹೆಸರಿನಲ್ಲಿ ಮತ್ತೆ ಮುಖ್ಯವಾಹಿನಿಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Advertisement

ಸಂಘಟನೆ ನಿಷೇಧದ ಘೋಷಣೆ ಹೊರಬೀಳುತ್ತಿದ್ದಂತೆ ಎರಡನೇ ಹಂತದ ನಾಯಕರನ್ನು ಉದ್ದೇಶಪೂರ್ವಕವಾಗಿ ಭೂಗತಗೊಳಿಸಲಾಗಿತ್ತು. ಅಂತಹ ನಾಯಕರು, ಈಗಲೂ ತಮ್ಮ ಸಂಘಟನ ಕಾರ್ಯ ಮುಂದುವರಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರ ರೂಪಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಕೇಂದ್ರ ಗುಪ್ತಚರ ಹಾಗೂ ಇತರ ತನಿಖಾ ಸಂಸ್ಥೆಗಳು ಎಲ್ಲ ರಾಜ್ಯ ಗುಪ್ತಚರ ವಿಭಾಗಗಳಿಗೆ ಅಂತಹ ವ್ಯಕ್ತಿಗಳ ಮೇಲೆ ನಿಗಾ ಇರಿಸುವಂತೆ ಸೂಚಿಸಿದೆ.

ಆರೇಳು ತಿಂಗಳ ಹಿಂದೆಯೇ ನಿಷೇಧದ ನಿರೀಕ್ಷೆ ಹೊಂದಿದ್ದ ಸಂಘಟನೆಯ ಮುಖ್ಯಸ್ಥರು, ಆಗಲೇ 2ನೇ ಹಂತದ ನಾಯಕರನ್ನು ಸಂಘಟನೆಯಿಂದ ಉಚ್ಛಾಟಿಸುವ ನಾಟಕವಾಡಿ ಭೂಗತಗೊಳಿಸಿದ್ದರು. ಈಗ ಈ ನಾಯಕರೇ ಮತ್ತೂಮ್ಮೆ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತೂಂದು ಸಂಘಟನೆ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೋಮು ಸಂಘರ್ಷ ಸೃಷ್ಟಿಗೆ ಸಿದ್ಧತೆ
ಸಂಘ ಟನೆ ನಿಷೇಧದಿಂದಾಗಿ ಅತೃಪ್ತಿ ಗೊಂಡಿರುವ ಕಾರ್ಯಕರ್ತರು ಮುಂಬ ರುವ ಎಲ್ಲ ರಾಜ್ಯ ಗಳ ವಿಧಾನಸಭೆ ಮತ್ತು ಲೋಕ ಸಭೆ ಚುನಾ ವಣೆ ವೇಳೆ ಕೋಮು ಸಂಘ ರ್ಷಕ್ಕೆ ಯೋಜನೆ ರೂಪಿಸಿದ್ದಾರೆ. ಅಧಿಕೃತವಾಗಿ ಪಿಎಫ್ಐ ಸಂಘಟನೆ ಎಂದು ಹೇಳಿಕೊಳ್ಳದಿದ್ದರೂ ಅದರ ಸಿದ್ಧಾಂತಗಳನ್ನು ಅನುಸರಿಸುವ, ಪ್ರಚಾರ ಮಾಡುವ ಕಾರ್ಯಕರ್ತರನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಂತಹ ಕಾರ್ಯಕರ್ತರು ಅಥವಾ ನಾಯಕರನ್ನು ಪತ್ತೆ ಹಚ್ಚುವುದು ಸವಾಲಾಗಿದೆ. ಅದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯ ಸಂಗ್ರಹಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಮಾದರಿಯ ಸಂಘಟನೆ?
ಭೂಗತ ನಾಯಕರನ್ನು ಸಂಘಟನೆಯಿಂದ ಉಚ್ಛಾಟಿಸುವ ನಾಟಕ ಮಾಡಲಾಗಿತ್ತು. ಜತೆಗೆ ಕೆಲವು ನಾಯಕರನ್ನು ಸಂಘಟನೆಯ ಮುಖ್ಯವಾಹಿನಿಯಲ್ಲಿ ಪರಿಚಯಿಸದೆ, ಸಂಘಟನ ಕಾರ್ಯಗಳನ್ನು ವಹಿಸಿತ್ತು. ಅಂತಹ ನಾಯಕರು, ಸಂಘಟನೆಯನ್ನು ಹೊಸ ಮಾದರಿ ಅಥವಾ ಹೊಸ ಹೆಸರಿನಲ್ಲಿ ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ಉಚ್ಛಾಟಿತ ಹಾಗೂ ಭೂಗತ ನಾಯಕರ ಜತೆ ಈಗಲೂ ಸಂಪರ್ಕದಲ್ಲಿದ್ದಾರೆ. ಸಮುದಾಯದ ಯುವಕರನ್ನು ತೀವ್ರಗಾಮಿಗಳಂತೆ ಪರಿವರ್ತಿಸುತ್ತಿದ್ದಾರೆ. ಜತೆಗೆ ಸಂಘಟನೆ ಅಂಗ ಸಂಸ್ಥೆಗಳ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಹೊಸ ಸಂಘಟನೆ ಸ್ಥಾಪಿಸುವ ಚರ್ಚೆ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ನಿಷೇಧಿತ ಉಗ್ರ ಸಂಘಟನೆ ಕಾರ್ಯಕರ್ತರ ಜತೆ ಸಂಪರ್ಕ ಹಾಗೂ ವಿದೇಶಿ ದೇಣಿಗೆ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಶೋಧ ಮುಂದುವರಿಕೆ
ನಿಷೇಧಿತ ಪಿಎಫ್ಐ ಸಂಘಟನೆಯ ಒಂದು ಹಂತದ ಮುಖಂಡರನ್ನು ಬಂಧಿಸಲಾಗಿದೆ. ಆದರೆ ಅದರ ಅಂಗಸಂಸ್ಥೆಗಳ ಕಾರ್ಯಕರ್ತರು ಹಾಗೂ ಎರಡನೇ ಹಂತದ ನಾಯಕರ ಪತ್ತೆ ಕಾರ್ಯ ಈಗಲೂ ನಡೆಯುತ್ತಿದೆ. ಸ್ಥಳೀಯ ಪೊಲೀಸರು, ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರ ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ಮೂಲಗಳು ತಿಳಿಸಿವೆ.

– ಮೋಹನ್‌ ಭದ್ರಾವತಿ

 

Advertisement

Udayavani is now on Telegram. Click here to join our channel and stay updated with the latest news.

Next