Advertisement
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಮೇಲೆ ಡೀಲರ್‌ಗಳಿಗೆ ನೀಡುತ್ತಿರುವ ಕಮಿಷನ್ ಅನ್ನು ತೈಲ ಕಂಪೆನಿಗಳು ಏರಿಕೆ ಮಾಡಿದ್ದು, ಇದರ ಹೊರೆಯನ್ನು ಗ್ರಾಹಕರ ತಲೆಗೆ ಹಾಕಿವೆ. ಆ.1ರಿಂದಲೇ ಇದು ಜಾರಿಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1 ರೂ., ಡೀಸೆಲ್ ಮೇಲೆ 0.72 ಪೈಸೆಯಷ್ಟು ಹೆಚ್ಚುವರಿಯಾಗಿ ಗ್ರಾಹಕರು ತೆರಬೇಕಾಗಿದೆ. ಈವರೆಗೆ ಡೀಲರ್‌ಗಳು ಪ್ರತಿ ಲೀ. ಪೆಟ್ರೋಲ್‌ಗೆ 2.55 ರೂ. ಮತ್ತು ಡೀಸೆಲ್ ಮೇಲೆ 1.65 ರೂ. ಕಮಿಷನ್ ಪಡೆಯುತ್ತಿದ್ದರು.
ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ದರವನ್ನು 2 ರೂ. ಹೆಚ್ಚಳ ಮಾಡಲಾಗಿದೆ. ಇನ್ನು ಪ್ರತಿ ತಿಂಗಳೂ ಎಲ್‌ಪಿಜಿ ಸಿಲಿಂಡರ್ ದರವನ್ನು 4 ರೂ.ಗಳಂತೆ ಏರಿಕೆ ಮಾಡಿ, ಮುಂದಿನ ಮಾರ್ಚ್ ವೇಳೆಗೆ ಸಬ್ಸಿಡಿಯನ್ನು ಸಂಪೂರ್ಣ ರದ್ದು ಮಾಡುವುದಾಗಿ ಕೇಂದ್ರ ಸರಕಾರ ಘೋಷಿಸಿದ ಮಾರನೇ ದಿನವೇ ದರ ಏರಿಸಲಾಗಿದೆ. ಅದರಂತೆ, ದಿಲ್ಲಿಯಲ್ಲಿ ಮಂಗಳವಾರದಿಂದ 14.2 ಕೆ.ಜಿ. ಸಿಲಿಂಡರ್ ದರ 479.77 ರೂ. ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ.