Advertisement
ವಾರದಲ್ಲಿ ಒಂದು ದಿನ ಪೆಟ್ರೋಲ್, ಡೀಸೆಲ್ ಅನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ದೇಶ ಕಚ್ಚಾ ತೈಲದ ಆಮದನ್ನು ತಗ್ಗಿಸಬಹುದು. ಈ ಮೂಲಕ ದೇಶಕ್ಕೆ ಉಳಿತಾಯ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ “ಮನ್ ಕಿ ಬಾತ್’ನಲ್ಲಿ ಹೇಳಿದ್ದಾರೆಯೇ ಹೊರತು, ವಾರದಲ್ಲಿ ಒಂದು ದಿನ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಲು ಅಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ.
ಇನ್ನೊಂದೆಡೆ ದೇಶದಲ್ಲಿ ಶೇ.80ರಷ್ಟು (53,224) ಪೆಟ್ರೋಲ್ ಪಂಪ್‌ಗ್ಳನ್ನು ಹೊಂದಿರುವ ಇಂಡಿಯನ್ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್, ಪಂಪ್ ಮುಚ್ಚುವ ಪ್ರಕ್ರಿಯೆಯಲ್ಲಿ ತಾನಿಲ್ಲ ಎಂದಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ಕರ್ನಾಟಕ (ಬೆಂಗಳೂರು ಸುತ್ತ), ಮಹಾರಾಷ್ಟ್ರ (ಮುಂಬೈ ಸುತ್ತ) ರಾಜ್ಯಗಳಲ್ಲಿ ಮೇ 14ರಿಂದ ಭಾನುವಾರಗಳಂದು ಪೆಟ್ರೋಲ್ ಪಂಪ್‌ಗ್ಳಿಗೆ ರಜೆ ನೀಡಲು ಅನುಮತಿ ನೀಡುವಂತೆ ಭಾರತದ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟ ಕೋರಿತ್ತು. ಆದರೆ ಕರ್ನಾಟಕ ಡೀಲರ್‌ಗಳೂ ಇದಕ್ಕೆ ಅಸಮ್ಮತಿ ಸೂಚಿಸಿದ್ದರು.