ಹೊಸದಿಲ್ಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪೂರ್ವ ದೆಹಲಿ ಅಭ್ಯರ್ಥಿಯಾಗಿರುವ ಆತಿಶಿ ಮರ್ಲೆನಾ ತನ್ನ ಕೊನೆಯ ಹೆಸರನ್ನು ಕೈಬಿಟ್ಟಿದ್ದಾರೆ. ಹೆಸರು ಕ್ರಿಶ್ಚಿಯನ್ ರೀತಿ ಇರುವುದರಿಂದ, ಬಿಜೆಪಿ ಕಾರ್ಯಕರ್ತರು ಈಕೆಯನ್ನು ಕ್ರಿಶ್ಚಿಯನ್ ಎಂಬುದಾಗಿ ಪ್ರಚಾರ ಮಾಡುತ್ತಿದ್ದರೆ. ಹೀಗಾಗಿ ಕೊನೆಯ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ. ಆದರೆ ಕೊನೆಯ ಹೆಸರನ್ನು ಕೈಬಿಡುವಂತೆ ಪಕ್ಷದಿಂದ ಯಾವುದೇ ಸೂಚನೆ ನೀಡಿಲ್ಲ ಎಂದು ಎಎಪಿ ಹೇಳಿಕೊಂಡಿದೆ. ಈಗ ಆತಿಶಿ ಕೊನೆಯ ಹೆಸರು ಯಾವ ಪೋಸ್ಟರುಗಳು, ಬ್ಯಾನರು ಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ ಟ್ವಿಟರ್‌ನಲ್ಲೂ ಅತಿಶಿ ಮರ್ಲೆನಾ ಎಂಬ ಹೆಸರನ್ನು ತೆಗೆದು ಆತಿಶಿ ಎಎಪಿ ಎಂದು ಬರೆದುಕೊಂಡಿದ್ದಾರೆ. ಆತಿಶಿ ತಂದೆ ದಿಲ್ಲಿ ವಿವಿ ಪ್ರೊಫೆಸರ್ ಆಗಿದ್ದು, ಮಾರ್ಕ್ಸ್ ಮತ್ತು ಲೆನಿನ್ ಹೆಸರನ್ನು ಸಂಯೋಜಿಸಿ ಮರ್ಲೆನಾ ಎಂದು ಇಟ್ಟಿದ್ದರು.