Advertisement

ಗೌರವಧನ ಹೆಚ್ಚಿಸಲು ಮನವಿ

04:45 PM Mar 11, 2022 | Shwetha M |

ವಿಜಯಪುರ: ಗ್ರಾಪಂ ಸದಸ್ಯರಿಗೆ ಕನಿಷ್ಟ 10 ಸಾವಿರ ಮಾಸಿಕ ಗೌರವಧನ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

Advertisement

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯರಿಗೆ ವಿಶೇಷವಾಗಿ ಗ್ರಾಪಂ ಸದಸ್ಯರುಗಳಿಗೆ ನೀಡುವ ಗೌರವಧನ ಹೆಚ್ಚಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದ್ದು, ಈ ಕುರಿತಂತೆ ಸತತವಾಗಿ ನಾನು ಸಂಬಂಧಿಸಿದ ಮಂತ್ರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇನೆ. ಸದ್ಯ ಗ್ರಾಪಂ ಅಧ್ಯಕ್ಷರಿಗೆ 3 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ಹಾಗೂ ಸದಸ್ಯರಿಗೆ ಒಂದು ಸಾವಿರ ಗೌರವಧನ ನೀಡುತ್ತಿರುವುದು ಈಗಿನ ದಿನಗಳಲ್ಲಿ ಏತಕ್ಕೂ ಸಾಲುವುದಿಲ್ಲ. ಈ ಕುರಿತಂತೆ ನಾನು ವಿಧಾನ ಪರಿಷತ್‌ ಒಳಗೆ-ಹೊರಗೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಗ್ರಾಪಂ ಸದಸ್ಯರಿಗೆ 10 ಸಾವಿರ ರೂ. ಕನಿಷ್ಟ ಮಾಸಿಕ ಗೌರವಧನ ನೀಡಬೇಕು. ಕಚೇರಿ ಕಾರ್ಯ ನಿಮಿತ್ತ ಜಿಲ್ಲಾ- ತಾಲೂಕು ಕೇಂದ್ರಗಳಿಗೆ ಸಂಚರಿಸಲು ಗ್ರಾಪಂ ಸದಸ್ಯರಿಗೆ ಉಚಿತ ಬಸ್‌ ಪಾಸ್‌ ನೀಡಬೇಕು. ಗ್ರಾಪಂ ಸದಸ್ಯರು ನಿವೃತ್ತಿ ಹೊಂದಿದ ನಂತರ ಸೂಕ್ತ ಪಿಂಚಣಿ ಸೌಕರ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.

ತಾವುಗಳು ವಿಶೇಷ ಮುತುವರ್ಜಿ ವಹಿಸಿ ರಾಜ್ಯದ 96 ಸಾವಿರ ಗ್ರಾಪಂ ಸದಸ್ಯರುಗಳ ಮಾಸಿಕ ಗೌರವಧನ 10 ಸಾವಿರಕ್ಕೆ ಹೆಚ್ಚಿಸುವುದು, ಉಚಿತ ಬಸ್‌ ಪಾಸ್‌ ಒದಗಿಸುವುದು ಹಾಗೂ ಪಿಂಚಣಿ ನೀಡುವುದು ಈ ಮೂರು ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಸುನೀಲಗೌಡ ಮನವಿ ಮಾಡಿದರು. ಈ ವೇಳೆ ಸಚಿವ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next