Advertisement

ಕಿವೀಸ್‌ ಬ್ಯಾಟಿಂಗ್‌ ಕೋಚ್‌ ಪೀಟರ್‌ ಫ‌ುಲ್ಟನ್‌ ರಾಜೀನಾಮೆ

10:42 PM Jul 02, 2020 | Sriram |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಕೋಚ್‌ ಪೀಟರ್‌ ಫ‌ುಲ್ಟನ್‌ ರಾಜೀನಾಮೆ ನೀಡಿದ್ದಾರೆ. ಅವರಿನ್ನು ಕ್ಯಾಂಟರ್‌ಬರಿ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ.

Advertisement

ನ್ಯೂಜಿಲ್ಯಾಂಡ್‌ ಪರ 23 ಟೆಸ್ಟ್‌ ಮತ್ತು 49 ಏಕದಿನ ಪಂದ್ಯಗಳನ್ನು ಆಡಿದ್ದ ಪೀಟರ್‌ ಫ‌ುಲ್ಟನ್‌ ಕಳೆದ ವರ್ಷದ ಆಗಸ್ಟ್‌ನಲ್ಲಿ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದರು.

“ಮತ್ತೆ ನ್ಯೂಜಿಲ್ಯಾಂಡ್‌ ರಾಷ್ಟ್ರೀಯ ತಂಡದಲ್ಲಿ ಬೇರೊಂದು ಜವಾಬ್ದಾರಿಯೊಂದಿಗೆ ಕಾಣಿಸಿಕೊಂಡದ್ದು ನನ್ನ ಸೌಭಾಗ್ಯ.

ಇದೊಂದು ಮಹಾನ್‌ ಗೌರವ. ಆದರೆ ಕ್ಯಾಂಟರ್‌ಬರಿಯ ಆಹ್ವಾನವನ್ನು ತಿರಸ್ಕರಿಸುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಫ‌ುಲ್ಟನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next