Advertisement

ಸರ್ಕಸ್‌ಗಳಲ್ಲಿ ಪ್ರಾಣಿಗಳ ಬಳಕೆ ನಿಷೇಧಕ್ಕೆ ಪೆಟಾ ಮನವಿ

05:12 PM Dec 24, 2018 | Team Udayavani |

ಹೊಸದಿಲ್ಲಿ : ಸರ್ಕಸ್‌ಗಳಲ್ಲಿ  ಪ್ರಾಣಿ ಬಳಕೆಯನ್ನು ನಿಷೇಧಿಸುವ ಕೇಂದ್ರ ಸರಕಾರದ ಪ್ರಸ್ತಾವವನ್ನು ಬೆಂಬಲಿಸಿ ಪ್ರಾಣಿ ಹಕ್ಕುಗಳ ಪೆಟಾ ಸಂಘಟನೆಯು ಕೇಂದ್ರ ಪರಿಸರ ಸಚಿವಾಲಯಕ್ಕೆ ಇಂದು ಸೋಮವಾರ ಮನವಿ ಸಲ್ಲಿಸಿದೆ.

Advertisement

ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸೆಲೆಬ್ರಿಟಿಗಳು ಸೇರಿದಂತೆ ಸುಮಾರು 8,000 ಮಂದಿ ಈ ಮನವಿಗೆ ಸಹಿಹಾಕಿದ್ದಾರೆ ಎಂದು ಪೆಟಾ ಹೇಳಿದೆ.

ಸರ್ಕಸ್‌ಗಳಲ್ಲಿ ಮತ್ತು  ಚಲಿಸುವ ಮನೋರಂಜನಾ ಸೌಕರ್ಯಗಳಲ್ಲಿ ಪ್ರಾಣಿಗಳ ಬಳಕೆ, ನಿರ್ವಹಣೆ, ಪ್ರದರ್ಶನವನ್ನು ನಿಷೇಧಿಸುವ ಪ್ರಸ್ತಾವವನ್ನು  ಕೇಂದ್ರ ಸರಕಾರ ಈಚೆಗೆ ಮುಂದಿಟ್ಟಿತ್ತು. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರಗತಿಪರ ಚಿಂತಕರು ಈ ಪ್ರಸ್ತಾವವನ್ನು ಪ್ರಶಂಸಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next