Advertisement

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

03:02 PM Oct 09, 2024 | Team Udayavani |

ಮುಂಬಯಿ: ಬಿಗ್‌ ಬಾಸ್‌ ಹಿಂದಿ-18 (Bigg Boss 18) ಆರಂಭವಾಗಿ ಕೆಲ ದಿನಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಸಲ್ಮಾನ್‌ ಖಾನ್‌ (Salman Khan) ಅವರು ಶೋಗೆ ‘ಪೆಟಾʼ (PETA) ಸಂಸ್ಥೆಯಿಂದ ಪತ್ರವೊಂದು ಬಂದಿದೆ.

Advertisement

ಈ ಬಾರಿ ಹಿಂದಿ ಬಿಗ್‌ ಬಾಸ್‌ನಲ್ಲಿ ಮನರಂಜನಾ, ಕಿರುತೆರೆ, ಸಾಮಾಜಿಕ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಕೆಲ ವಿವಾದದಿಂದ ಸುದ್ದಿಯಾಗಿರುವ ಒಟ್ಟು 18 ಮಂದಿ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ದಿನಗಳಲ್ಲೇ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಆದರೆ ಈ ಬಾರಿ ಬಿಗ್‌ ಬಾಸ್‌ನಲ್ಲಿ ಎಲ್ಲರ ಗಮನ ಸೆಳದಿರುವುದು ʼಮ್ಯಾಕ್ಸ್‌ʼ.

ಇದನ್ನೂ ಓದಿ: Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

ಮ್ಯಾಕ್ಸ್‌ ಎಂದರೆ ಸೆಲೆಬ್ರಿಟಿ ಅಲ್ಲ. ಬದಲಾಗಿ ಮ್ಯಾಕ್ಸ್‌ ಎನ್ನುವುದು ಒಂದು ಕತ್ತೆಯ (Donkey) ಹೆಸರು. ಹೌದು ಈ ಬಾರಿ ಬಿಗ್‌ ಬಾಸ್‌ ಮನೆಗೆ 19ನೇ ಸ್ಪರ್ಧಿಯಾಗಿ ಕತ್ತೆ ಎಂಟ್ರಿ ಪಡೆದುಕೊಂಡಿದೆ. ವಕೀಲ ಗುಣರತ್ನ ಅವರೊಂದಿಗೆ ʼಮ್ಯಾಕ್ಸ್‌ʼ ಬಿಗ್‌ ಬಾಸ್‌ ಮನೆಗೆ ಹೋಗಿದೆ.

Advertisement

18 ಮಂದಿ ಬಿಗ್‌ ಬಾಸ್‌ ಸ್ಪರ್ಧಿಗಳು ಒಂದು ಕಡೆಯಿದ್ದರೆ, ʼಮ್ಯಾಕ್ಸ್‌ʼ ತನ್ನ ಪಾಡಿಗೆ ತಾನು ಆಹಾರವನ್ನು ಸೇವಿಸುತ್ತಾ ಒಂದು ಕಡೆ ನಿಂತುಕೊಂಡಿದೆ. ಬಿಗ್‌ ಬಾಸ್‌ ಮನೆಗೆ ಪ್ರಾಣಿಯೊಂದು ಪ್ರವೇಶ ಪಡೆದಿರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಾಣಿಗಳ ಹಕ್ಕುಗಳ ರಕ್ಷಣಾ ವೇದಿಕೆ ‘ಪೆಟಾʼ ಆಯೋಜಕರಿಗೆ ಪತ್ರ ಬರೆದಿದೆ.

ʼಗಧರಾಜ್ʼ (ಮ್ಯಾಕ್ಸ್) ಎಂಬ ಹೆಸರಿನ ಕತ್ತೆ ಕೂಡ ಬಿಗ್ ಬಾಸ್ 18ರ ಭಾಗವಾಗಿದೆ. ಅವರಿಗೆ ಗಾರ್ಡನ್ ಏರಿಯಾದಲ್ಲಿ ಜಾಗವನ್ನು ನೀಡಲಾಗಿದೆ ಮತ್ತು ಅದನ್ನು ನೋಡಿಕೊಳ್ಳಲು ಹೌಸ್‌ಮೇಟ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಗ್‌ ಬಾಸ್‌ ನಲ್ಲಿ ಹೇಳಲಾಗಿದೆ.

ಬಿಗ್‌ ಭಾಸ್‌ ಮನೆಯಲ್ಲಿ ಕತ್ತೆ ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ʼಪೆಟಾʼ ವಾಹಿನಿಗೆ ಪತ್ರ ಬರೆದಿದೆ.

ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ನಿಲ್ಲಿಸಿ. ಪ್ರಾಣಿಯನ್ನು ಈ ರೀತಿ ಒಂದೇ ಜಾಗದಲ್ಲಿ ಕಟ್ಟಿ ಇಡುವುದರಿಂದ ಅವು ಒತ್ತಡಕ್ಕೆ ಒಳಗಾಗುತ್ತವೆ. ಬಿಗ್ ಬಾಸ್ ಒಂದು ಲಘುವಾದ ಮನರಂಜನೆಯಾಗಿದೆ. ಆದರೆ ಶೋ ಸೆಟ್‌ನಲ್ಲಿ ಪ್ರಾಣಿಗಳನ್ನು ಬಳಸುವುದು ನಗುವ ವಿಷಯವಲ್ಲ. ಕತ್ತೆಗಳು ಬೆಳಕು ಹಾಗೂ ಶಬ್ದ, ಗಲಾಟೆಯಿಂದ ಹೆದರುತ್ತವೆ. ಪ್ರಾಣಿಗಳು ಸೆಟ್‌ ನಲ್ಲಿ ಇಡುವ ಪ್ರದರ್ಶಕಗಳಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಕತ್ತೆಯನ್ನು ಹೊಂದಿರುವ ವಕೀಲ ಗುಣರತ್ನ ಹಾಗೂ ವಯಾಕಾಮ್ 18 (ಚಾನೆಲ್ ಕಲರ್ಸ್ ಮಾಲೀಕತ್ವದ ನೆಟ್ವರ್ಕ್) ಮತ್ತು ಬನಿಜಯ್ ಏಷ್ಯಾ (ಪ್ರೊಡಕ್ಷನ್ ಹೌಸ್) ಗೆ ಪತ್ರವನ್ನು ಕಳುಹಿಸಲಾಗಿದೆ.

ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಪ್ರಾಣಿಗಳಿರುವುದು ಇದೇ ಮೊದಲಲ್ಲ. ಹಿಂದಿನ ಋತುಗಳಲ್ಲಿ ಮನೆಯವರು ತಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ನೋಡಿಕೊಳ್ಳಲು ನಾಯಿ, ಗಿಳಿ ಮತ್ತು ಮೀನುಗಳನ್ನು ಸಹ ಕಳುಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next