Advertisement

World Rabies Day 2024: ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿವಳಿಕೆ ಕೊರತೆ!

04:13 PM Sep 28, 2024 | ಕಾವ್ಯಶ್ರೀ |

ನಾಯಿ ಕಡಿತದಿಂದ ರೇಬೀಸ್ ಹರಡುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ರೇಬೀಸ್ ನಿಂದಾಗಿ ದೇಶದಲ್ಲಿ ಪ್ರತಿ ವರ್ಷ ಸುಮಾರು 20 ಸಾವಿರ ಜನರು ಸಾಯುತ್ತಾರೆ ಎಂದು ವರದಿ ಇದೆ. ವಿಶ್ವ ರೇಬೀಸ್ ದಿನವನ್ನು ಮೊದಲ ಬಾರಿಗೆ 2007 ರಲ್ಲಿ ಪ್ರಾರಂಭಿಸಲಾಯಿತು.

Advertisement

ರೇಬೀಸ್‌ನ ಹೆಚ್ಚಿನ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಅದರಲ್ಲೂ ದೇಶದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೇಬೀಸ್‌ನಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ.

ರೇಬೀಸ್ ರೋಗದ ಬಗ್ಗೆ ಜನರಲ್ಲಿ  ಜಾಗೃತಿಯ ಕೊರತೆ ಇರುವುದರಿಂದ ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ಜನರಲ್ಲಿ ಅರಿವು ಮೂಡಿಸಲು ‘ವಿಶ್ವ ರೇಬೀಸ್ ದಿನ’ವನ್ನು ಆಚರಿಸಲಾಗುತ್ತದೆ.

ರೇಬೀಸ್ ರೋಗದ ಲಕ್ಷಣಗಳು ಮತ್ತು ಈ ರೋಗವನ್ನು ತಡೆಗಟ್ಟಲು ಏನು ಮಾಡಬೇಕು ಹಾಗೂ ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ:

Advertisement

ವಿಶ್ವ ರೇಬೀಸ್ ದಿನ 2024: ಥೀಮ್

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 2024 ರ ವಿಶ್ವ ರೇಬೀಸ್ ದಿನದ ಥೀಮ್ ‘ಬ್ರೇಕಿಂಗ್ ರೇಬೀಸ್ ಬೌಂಡರೀಸ್ʼ (Breaking Rabies Boundaries) ಎಂಬುದು. ಈ ಥೀಮ್ ಅನ್ನು ವಿವರವಾಗಿ ಹೇಳಬೇಕೆಂದರೆ, ರೇಬೀಸ್ ವಿರುದ್ಧದ ಹೋರಾಟದಲ್ಲಿ ಪ್ರಗತಿಯನ್ನು ಇನ್ನಷ್ಟು ವಿಸ್ತಾರಗೊಳಿಸುವುದು ಮತ್ತು ಪ್ರಸ್ತುತ ಸ್ಥಿತಿಯನ್ನು ಮೀರಿ ರೇಬೀಸ್‌ ತಡೆಗಟ್ಟುವಿಕೆ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವುದು. ಲಸಿಕೆಗಳು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಂಪನ್ಮೂಲಗಳ ಪ್ರವೇಶಕ್ಕೆ ಅಡ್ಡಿಯಾಗುವ ಅಡೆತಡೆಗಳನ್ನು ಮುರಿಯಲು ಜಾಗತಿಕ ಬದ್ಧತೆಗೆ ಇದು ಕರೆ ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಮತ್ತು ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ರೇಬೀಸ್ ಕುರಿತಾದ ಜಾಗೃತಿ ಅಗತ್ಯ.

ರೇಬೀಸ್ ರೋಗ ಹೇಗೆ ಹರಡುತ್ತದೆ?

ಹೆಚ್ಚಿನ ಜನರು ರೇಬೀಸ್ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ. ಅದೇನೆಂದರೆ, ರೇಬೀಸ್ ನಾಯಿ ಕಡಿತದಿಂದ ಮಾತ್ರ ಉಂಟಾಗುತ್ತದೆ ಎಂಬುದು. ಆದರೆ ಅದು ನಿಜವಲ್ಲ. ಈ ರೋಗವು ಇತರ ಅನೇಕ ಪ್ರಾಣಿಗಳ ಕಡಿತದಿಂದ ಕೂಡ ಉಂಟಾಗುತ್ತದೆ. ನಾಯಿಯ ಲಾಲಾರಸದಲ್ಲಿ ಲಸ್ಸಾ ಎಂಬ ವೈರಸ್ ಕಂಡುಬರುತ್ತದೆ. ಇದು ರೇಬೀಸ್ ರೋಗವನ್ನು ಹರಡುತ್ತದೆ. ನಾಯಿಯು ವ್ಯಕ್ತಿಯನ್ನು ಕಚ್ಚಿದಾಗ, ನಂತರ ವ್ಯಕ್ತಿಯ ದೇಹದಲ್ಲಿ ರೇಬೀಸ್ ಹರಡುತ್ತದೆ. ನಾಯಿ ಕಚ್ಚಿದ 24 ಗಂಟೆಯೊಳಗೆ ಆ್ಯಂಟಿ ರೇಬೀಸ್ ಲಸಿಕೆ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ.

ರೇಬೀಸ್ ರೋಗ ಯಾವೆಲ್ಲಾ ಪ್ರಾಣಿಗಳಿಂದ ಹರಡುತ್ತದೆ:

ನಾಯಿ ಕಡಿತದಿಂದ ಮಾತ್ರ ರೇಬೀಸ್ ಹರಡುತ್ತದೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ನಾಯಿ, ಬೆಕ್ಕು, ಕೋತಿ, ಬಾವಲಿ, ನರಿ, ಮುಂಗುಸಿ ಮತ್ತು ನರಿ ಮುಂತಾದ ಪ್ರಾಣಿಗಳಲ್ಲೂ ರೇಬೀಸ್ ವೈರಸ್ ಕಂಡುಬರುತ್ತದೆ. ಈ ಪ್ರಾಣಿಗಳಲ್ಲಿ ಯಾವುದಾದರೂ ನಿಮಗೆ ಕಚ್ಚಿದರೆ, ನೀವು ತಕ್ಷಣ ಆ್ಯಂಟಿ ರೇಬೀಸ್ ಲಸಿಕೆಯನ್ನು ಪಡೆಯಬೇಕು. ಏಕೆಂದರೆ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಆಪತ್ತು ಬರುವ ಸಾಧ್ಯತೆ ಇದೆ.

ರೇಬೀಸ್‌ನ ಲಕ್ಷಣಗಳು:

ಜ್ವರ, ತೀವ್ರ ತಲೆನೋವು, ನಿದ್ರೆಯ ಕೊರತೆ

ಪ್ರಾಣಿಗಳ ಕಡಿತದ ಸಂದರ್ಭದಲ್ಲಿ ಏನು ಮಾಡಬೇಕು?

ದೇಹದ ಯಾವುದೇ ಭಾಗಕ್ಕೆ ಪ್ರಾಣಿ ಕಚ್ಚಿದರೆ, ಆ ಭಾಗವನ್ನು ಸಾಬೂನಿನಿಂದ ಕೆಲ ನಿಮಿಷಗಳ ಕಾಲ ತೊಳೆಯಿರಿ. ಆ ನಂತರ 24 ಗಂಟೆಯೊಳಗೆ ವೈದ್ಯರಿಂದ ಆ್ಯಂಟಿ ರೇಬೀಸ್ ಲಸಿಕೆ ಪಡೆಯಬೇಕು.

ನೀವು ನಾಯಿ ಅಥವಾ ಬೆಕ್ಕನ್ನು ಸಾಕುತ್ತಿದ್ದರೆ, ಅವುಗಳಿಗೆ ಪ್ರಾಣಿಗಳಿಗೆ ನೀಡುವ ರೇಬೀಸ್ ಲಸಿಕೆಯನ್ನು ನೀಡಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next