Advertisement

ಸಾಕು ಶ್ವಾನಗಳ ಪರವಾನಗಿ ಮತ್ತೆ ನೆನೆಗುದಿಗೆ

12:46 AM Apr 27, 2019 | Lakshmi GovindaRaju |

ಬೆಂಗಳೂರು: ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಗಿ ನೀಡುವ ಬಿಬಿಎಂಪಿ ಪ್ರಸ್ತಾಪ ಮತ್ತೆ ನೆನೆಗುದಿಗೆ ಬೀಳುವಂತಾಗಿದೆ.

Advertisement

ನಗರದಲ್ಲಿರುವ ಸಾಕು ನಾಯಿಗಳ ನಿಖರವಾದ ಮಾಹಿತಿ ಹಾಗೂ ನಾಯಿಗಳಿಗೆ ರೇಬಿಸ್‌ ಲಸಿಕೆ ಹಾಕಿಸಿರುವ ಮಾಹಿತಿ ಸಂಗ್ರಹಿಸುವ ಉದ್ದೇಶ‌ದಿಂದ ಸಾಕು ನಾಯಿಗಳಿಗೆ ಪರವಾನಗಿಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು.

ವಿರೋಧ ವ್ಯಕ್ತವಾದ ಹಿನ್ನೆಲೆ, ನ್ಯಾಯಾಲಯದ ಮೊರೆ ಹೋದ ಪರಿಣಾಮ ಆದೇಶ ಹಿಂಪಡೆಯಲಾಗಿತ್ತು. ಇದೀಗ ಹೊಸದಾಗಿ ನಿಯಮಾವಳಿ ರೂಪಿಸಲು ಪಾಲಿಕೆಗೆ ಕಳುಹಿಸಲಾಗಿದೆ. ಹೀಗಾಗಿ ಮತ್ತಷ್ಟು ವಿಳಂಬವಾಗಲಿದೆ.

ನಾವು ಪರವಾನಗಿ ಪಡೆಯಲು ಸಿದ್ಧವಿದ್ದೇವೆ. ಆದರೆ, ಇಷ್ಟೇ ನಾಯಿಗಳನ್ನು ಸಾಕಬೇಕು ಎಂದು ಹೇಳಲು ನೀವು ಯಾರು ಎಂಬುದು ಪ್ರಾಣಿ ಪ್ರಿಯರ ವಾದವಾಗಿತ್ತು.

ಪಾಲಿಕೆ ರೂಪಿಸಿದ ನಿಯಮಗಳೇನು?: ಫ್ಲ್ಯಾಟ್‌ಗಳಲ್ಲಿ ವಾಸಿಸುವವರು ಒಂದು ನಾಯಿ ಹಾಗೂ ಮನೆಗಳಲ್ಲಿರುವವರು ಗರಿಷ್ಠ ಮೂರು ನಾಯಿ ಸಾಕಲು ಅವಕಾಶವಿದೆ. ಹೆಚ್ಚು ನಾಯಿ ಸಾಕಿದರೆ ಪಾಲಿಕೆಯಿಂದ ನೋಟಿಸ್‌ ನೀಡಲಾಗುತ್ತದೆ. ಇದಕ್ಕೆ ಉತ್ತರ ನೀಡಬೇಕು ಇಲ್ಲದಿದ್ದಲ್ಲಿ, ದಂಡ ಹಾಕಲಾಗುತ್ತದೆ ಎಂಬ ಷರತ್ತುಗಳಿವೆ.

Advertisement

ಜತೆಗೆ ನಾಯಿಗಳನ್ನು ಸಾಕಲು ವಾರ್ಷಿಕ ಪಾಲಿಕೆಗೆ 110 ರೂ. ಪರವಾನಗಿ ಶುಲ್ಕ ಪಾವತಿಸಬೇಕು. ಜತೆಗೆ ತಪ್ಪದೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಈ ನಿಯಮ ಉಲ್ಲಂ ಸಿದವರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಜತೆಗೆ ನಾಯಿಗಳನ್ನು ವಶಕ್ಕೆ ಪಡೆಯುವ ನಿಯಮಗಳಿದ್ದವು.

ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಕಡತವು ವಾಪಸ್‌ ಬಂದಿದ್ದು, ಪ್ರಾಣಿ ಪ್ರಿಯ ಜತೆ ಚರ್ಚಿಸಿದ ಬಳಿಕ ಮತ್ತೆ ಕೌನ್ಸಿಲ್‌ ಸಭೆಯ ಮುಂದೆ ವಿಷಯ ಮಂಡಿಸಲಾಗುವುದು. ಕೌನ್ಸಿಲ್‌ ನಿರ್ಣಯದ ಬಳಿಕ ಮುಂದಿನ ತೀರ್ಮಾನ.
-ಡಾ.ಆನಂದ್‌, ಜಂಟಿ ಆಯುಕ್ತರು (ಪಶು ಪಾಲನಾ ವಿಭಾಗ)

Advertisement

Udayavani is now on Telegram. Click here to join our channel and stay updated with the latest news.

Next