Advertisement
ಕಳೆದ ಕೆಲ ವರ್ಷಗಳ ಹಿಂದೆ ತೆರೆಕಂಡ ತೆಲುಗಿನ “ಪುಷ್ಪ’ ಸಿನಿಮಾ ಮಾದರಿಯಲ್ಲೇ ರಾಜ್ಯದಲ್ಲಿ ಟಿಂಬರ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಕಾಡಿಗೆ ಅಕ್ರಮವಾಗಿ ನುಗ್ಗುವ ದಂಧೆಕೋರರು ಶ್ರೀಗಂಧ, ರಕ್ತಚಂದನ, ಬೀಟೆ, ಸಾಗವಾನಿ, ತೇಗ, ಬಿಳಿ ಮರ, ಮಹೋಗಾನಿ, ಬಿದಿರಿನಂತಹ ಬೆಲೆ ಬಾಳುವ ಮರಗಳನ್ನು ಕಡಿದು ಕಳ್ಳಸಾಗಣೆ ಮೂಲಕ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಸಾಗಿಸಿ ಕೋಟ್ಯಂತರ ರೂ.ಗಳಿಸುತ್ತಿದ್ದಾರೆ. ಇದು ಕೆಳಹಂತದ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದರೂ ಗ್ಯಾಂಗ್‌ನ ಸೂತ್ರದಾರರು ಕೈ ಬೆಚ್ಚಗೆ ಮಾಡುವ ಹಿನ್ನೆಲೆಯಲ್ಲಿ ದಂಧೆಕೋರರತ್ತ ಸುಳಿವುದಿಲ್ಲ. ಇತ್ತ ಮರಗಳ್ಳರ ಗ್ಯಾಂಗ್ ನಿರ್ಭೀತಿಯಿಂದ ಅಕ್ರಮವಾಗಿ ಮರಗಳ ಸಾಗಾಟ ಮಾಡುತ್ತವೆ. ದಂಧೆಕೋರರು ಮರ ಕಡಿದ ಜಾಗದ ಕುರುಹು ಸಿಗದಂತೆ ಇಡೀ ಕಾಡಿಗೇ ಬೆಂಕಿ ಹಚ್ಚುತ್ತಾರೆ. ದಂಧೆಕೋರರು ವಾರ್ಷಿಕವಾಗಿ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದಾರೆ.
Related Articles
2022-23ರಲ್ಲಿ (ಕಳೆದ ಒಂದು ವರ್ಷ) ಕಾಡಿಗೆ ಹಾನಿಯಾಗಿರುವ 189 ಪ್ರಕರಣ ದಾಖಲಾಗಿವೆ. 404.16 ಹೆಕ್ಟೆರ್ ಪ್ರದೇಶಗಳಿಗೆ ಹಾನಿಯಾಗಿವೆ. ರಾಜ್ಯದಲ್ಲಿರುವ 43,382 ಚ.ಕೀ.ಮೀ ಅರಣ್ಯ ಪ್ರದೇಶಗಳಲ್ಲಿ 10,892 ಚ.ಕೀ.ಮೀ ವಿಸ್ತೀರ್ಣ ರಕ್ಷಿತ ಪ್ರದೇಶವಾಗಿರುತ್ತದೆ. ಈ ಪೈಕಿ 5 ರಾಷ್ಟ್ರೀಯ ಉದ್ಯಾನವನ, 36 ಅಭಯಾರಣ್ಯ, 17 ಸಂರಕ್ಷಿತ ಮೀಸಲು ಹಾಗೂ 1 ಸಮುದಾಯ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ. ಭಾರತದ ಶೇ.25ರಷ್ಟು ಆನೆ ಸಂತತಿ ಹಾಗೂ ಶೇ.18 ರಷ್ಟು ಹುಲಿ ಸಂತತಿ ಹೊಂದಿದೆ. ಶೇ.54ರಷ್ಟು ಅರಣ್ಯಗಳು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿವೆ. ರಾಜ್ಯದ ಶೇ.25 ಅರಣ್ಯ ಪ್ರದೇಶ ವನ್ಯಜೀವಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.
Advertisement
ಟಿಂಬರ್ ಮಾಫಿಯಾದಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಹಲವು ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆಯು ಇನ್ನಷ್ಟು ಕಾರ್ಯಾಚರಣೆ ನಡೆಸಿ ಇಂತಹ ಅಕ್ರಮ ತಡೆಗಟ್ಟಲು ಪಣ ತೊಡಲಿದೆ.-ಜಾವೇದ್ ಅಖ್ತರ್, ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ.