Advertisement

ಆಹಾರದಿಂದಲೇ ವ್ಯಕ್ತಿತ್ವ ನಿರ್ಮಾಣ: ಡಾ|ಜೋಸೆಫ್

01:20 AM Jul 11, 2022 | Team Udayavani |

ಉಡುಪಿ: ನಾವು ತಿನ್ನುವ ಆಹಾರದಿಂದಲೇ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿ ಸಾತ್ವಿಕ, ರಾಜಸ, ತಾಮಸಿಕ ಎಂಬ ವರ್ಗೀಕರಣ ರೂಪಿಸಿಹೇಳಿದ್ದಾನೆ. ಜಗತ್ತಿನ ಇತರ ಯಾವುದೇ ಧರ್ಮಗಳೂ, ಮನಃಶಾಸ್ತ್ರಜ್ಞರೂ ಇಂತಹ ಸ್ಪಷ್ಟತೆ ನೀಡಿಲ್ಲ ಎಂದು ಪ್ರಸಿದ್ಧ ಪ್ರವಚನಕಾರ ಪುದುಚೇರಿಯ ಋಷಿಧರ್ಮ ಪ್ರತಿಷ್ಠಾನದ ಅಧ್ಯಕ್ಷ ಡಾ| ಡಿ.ಎ. ಜೋಸೆಫ್ ಹೇಳಿದರು.

Advertisement

ಅದಮಾರು ಮಠ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣಮಠದಲ್ಲಿ ನಡೆದ “ವಿಶ್ವಾರ್ಪಣಂ’ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ರವಿವಾರ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಅವರು “ವ್ಯಕ್ತಿತ್ವ ವಿಕಸನ’ ವಿಷಯದಲ್ಲಿ ಮಾತನಾಡಿದರು.

ಕೆಲವು ಆಹಾರಗಳು ಆರೋಗ್ಯಕ್ಕೆ ಒಳ್ಳೆದಿರಬಹುದು, ಆದರೆ ಅವು ಆಧ್ಯಾತ್ಮಿಕ ಸಾಧನೆಗೆ ಪೂರಕವಾಗಲಾರವು. ಉದಾಹರಣೆಗೆ ನಿನ್ನೆಯ ಅನ್ನ ಇಂದು ಆರೋಗ್ಯಕ್ಕೆ ಒಳ್ಳೆಯದೆ, ಆದರೆ ಆಧ್ಯಾತ್ಮಿಕ ಸಾಧನೆಗೆ ಉತ್ತಮವಲ್ಲ. ನಿಮ್ಮ ಆಹಾರವೇ ನಿಮ್ಮನ್ನು ನಿರ್ಧರಿಸುತ್ತದೆ. ಸಸ್ಯಾಹಾರ, ಮಾಂಸಾಹಾರದಲ್ಲಿಯೂ ಇದೇ ನೀತಿ ಎಂದರು.

ದೇಹದಲ್ಲಿ ಮೇಲ್ಭಾಗ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಅದರಲ್ಲೂ ಮುಖ ಭಾಗ, ಮುಖದಲ್ಲಿಯೂ ಮೂಗು, ಮೂಗಿಗಿಂತ ಕಣ್ಣು ವ್ಯಕ್ತಿತ್ವವನ್ನು ಸೂಚಿಸುತ್ತದೆ. ಸ್ವಾಮಿ ವಿವೇಕಾನಂದ, ಸುಭಾಶ್ಚಂದ್ರ ಬೋಸ್‌ ಅಂತಹವರ ಕಣ್ಣುಗಳು ಇದನ್ನು ಸೂಚಿಸುತ್ತಿದ್ದವು. ಗೀತೆ ಒಂದು ವ್ಯಕ್ತಿತ್ವ ವಿಕಸನಕ್ಕೆ ಯೋಗ್ಯ ಗ್ರಂಥ. ಅರ್ಜುನ ಖನ್ನತೆಗೊಳಗಾದ ಸಂದರ್ಭ ಆತನ ವ್ಯಕ್ತಿತ್ವವನ್ನು ವಿಕಸನ

ಗೊಳಿಸಿದವ ಶ್ರೀಕೃಷ್ಣ. ಎಲ್ಲವನ್ನು ಬಿಟ್ಟು ನನಗೆ ಶರಣಾಗು ಎಂಬ ಆತನ ಮಾತನ್ನು ರಾಮಾನುಜಾಚಾರ್ಯ, ಮಧ್ವಾಚಾರ್ಯರು ಸಿದ್ಧಾಂತಗಳಲ್ಲಿ ಬಳಸಿಕೊಂಡಿದ್ದಾರೆ ಎಂದರು.

Advertisement

ನಿದ್ರೆ, ಸ್ನಾನ, ಆಹಾರ ಸೇವನೆ ಹೀಗೆ ಆಚಾರಗಳೂ ವ್ಯಕ್ತಿತ್ವವನ್ನು ನಿರ್ದೇಶಿಸುತ್ತವೆ.  ಮನಬಂದಂತೆ ಮಾಡಿದರೆ ನಷ್ಟವಾಗುತ್ತದೆ. ಸ್ನಾನವೆಂದರೆ ಪವಿತ್ರ ಶರೀರ,ವಿವಿಧ ಅಂಗಗಳ ದೇವತಾಂಶಗಳಿಗೆಅಭಿಷೇಕ ಮಾಡುವುದು ಎಂದರ್ಥ ಎಂದು ವಿಶ್ಲೇಷಿಸಿದರು.

ಹಿಂದೂ ಧರ್ಮದಲ್ಲಿ ಯುಗಾದಿ, ಏಕಾದಶಿ ಇತ್ಯಾದಿ ಆಚರಣೆಗಳ ಕುರಿತು ಭಿನ್ನತೆ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಇಲ್ಲಿ ದಿನಾಂಕ, ದಿನಗಳಿಗಿಂತಲೂ ಉದ್ದೇಶ ಮುಖ್ಯ. ಯುಗಾದಿ ಚಾಂದ್ರ, ಸೌರಮಾನ ಗಣಿತದ ಪ್ರಕಾರವಿದೆ. ಏಕಾದಶಿ ಉಪವಾಸ ಬಂದಿರುವುದೇ ಎಂದೂ ರಜೆ ಸಿಗದ ಹೊಟ್ಟೆಗೆ ರಜೆ ಕೊಡಬೇಕು, ತನ್ಮೂಲಕ ಆರೋಗ್ಯ ಪ್ರಾಪ್ತಿಯಾಗುತ್ತದೆ. ಇದೇ ಮುಖ್ಯ ಉದ್ದೇಶ ಎಂದರು.

ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶ್ರೀಕೃಷ್ಣಸೇವಾ ಬಳಗದ ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿ ಪ್ರೊ| ನಂದನ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಪಿಪಿಸಿ ನಿವೃತ್ತ ಪ್ರಾಂಶುಪಾಲ ಡಾ| ಬಿ. ಜಗದೀಶ ಶೆಟ್ಟಿ ವಂದಿಸಿದರು.

ಅಲ್ಪ-ದೀರ್ಘ‌ಶ್ವಾಸದ ಲಕ್ಷಣ
ಸ್ವಾಮಿ ವಿವೇಕಾನಂದರು ರಾತ್ರಿ ಮಲಗಿರುವಾಗ ಶ್ವಾಸೋಚ್ಛಾ$Ìಸವನ್ನು ಗಮನಿಸಿ ರಾಮಕೃಷ್ಣ ಪರಮಹಂಸರು ದೀರ್ಘ‌ಶ್ವಾಸದಿಂದ ಆಯುಷ್ಯ ವೃದ್ಧಿಯಾಗುತ್ತದೆ. ನಿಮ್ಮದು ಹೃಸ್ವ ಶ್ವಾಸವಿದೆ ಎಂದರು. ಕಡಿಮೆ ಆಯುಷ್ಯವಿದ್ದರೆ ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ವಿವೇಕಾನಂದರು ಹೇಳಿದರು. ಹೀಗೆಯೇ ಆಯಿತು. ಇದು ದೈವ ಸಂಕಲ್ಪವಿದ್ದಿರಬಹುದು. ನೀವು ಮಲಗುವಾಗ ನಿಮ್ಮ ಶ್ವಾಸೋಚ್ಛಾ$Ìಸ ಹೇಗಿದೆ ಎಂದು ಪರೀಕ್ಷಿಸಿಕೊಳ್ಳಿ ಎಂದು ಜೋಸೆಫ್ ಸಲಹೆ ನೀಡಿದರು.

ನಾನು ಹತ್ತು ನಿಮಿಷಗಳಲ್ಲಿ ಹಣವಂತರಾಗಬಹುದು ಎಂದು ವೀಡಿಯೋ ತುಣುಕನ್ನು ಹಾಕಿದೆ. ಆ ಶೀರ್ಷಿಕೆ ನೋಡಿದೊಡನೆ ಲಕ್ಷ ಜನರು ವೀಕ್ಷಿಸಿದರು. ಅವರಿಗೆ ಕುತೂಹಲ. ಮಾತೃದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂಬಂತೆ ಈ ಮೂವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅದರಲ್ಲಿ ತಿಳಿಸಿದ್ದೆ. ಎಷ್ಟೋ ಜನರು ಇದನ್ನು ಅನುಸರಿಸಿ ಇದರ ಮಹತ್ವವನ್ನು  ನನಗೆ ತಿಳಿಸಿದರು.
– ಡಿ.ಎ.ಜೋಸೆಫ್, ಅಧ್ಯಕ್ಷರು, ಋಷಿಧರ್ಮ ಪ್ರತಿಷ್ಠಾನ, ಪುದುಚೇರಿ.

Advertisement

Udayavani is now on Telegram. Click here to join our channel and stay updated with the latest news.

Next