Advertisement

ವೈಯಕ್ತಿಕ ಹಣಕಾಸು; ನಿರ್ವಹಣೆಗೆ ಗಮನ ಕೊಡಿ

12:28 PM Aug 29, 2018 | |

. ದೈನಂದಿನ ವ್ಯವಾಹರದಿಂದ ಹಣಕಾಸು ನಿರ್ವಹಣೆಯನ್ನು ಅರಿತಿರುತ್ತೇವೆ. ಹೀಗಾಗಿ ಇದನ್ನು ಪಠ್ಯವಾಗಿ ಕಲಿಯುವ ಅಗತ್ಯ ಏನಿದೆ? 
ದೈನಂದಿನ ಹಣಕಾಸು ನಿರ್ವಹಣೆಗೂ, ಕಾರ್ಪೊರೇಟ್‌ ಹಣಕಾಸು ನಿರ್ವಹಣೆಗೂ ತುಂಬಾ ವ್ಯತ್ಯಾಸವಿದೆ. ವೈಯಕ್ತಿಕ ಹಾಗೂ ಸಣ್ಣ ವ್ಯಾಪಾರಸ್ಥರ ಹಣಕಾಸು ನಿರ್ವಹಣೆಯು ಕಾರ್ಪೊರೇಟ್‌ ಹಣಕಾಸು ನಿರ್ವಹಣೆಗೆ ಹೋಲಿಸಿದರೆ ಸರಳವಾಗಿರುತ್ತವೆ. ಕಾರ್ಪೊರೇಟ್‌ ಹಣಕಾಸು ವ್ಯವಹಾರ ತುಂಬಾ ಕ್ಲಿಷ್ಟಕರ. ಈ ವ್ಯವಹಾರವನ್ನು ನಿರ್ವಹಿಸಲು ವಿಶೇಷ ಪರಿಣತಿ ಅಗತ್ಯವಿದೆ. ಆದ್ದರಿಂದ ಇವನ್ನು ಪಠ್ಯದ ಮೂಲಕ ಕ್ರಮಬದ್ಧವಾಗಿ ಕಲಿಯುವುದು ಅಗತ್ಯ.

Advertisement

. ಕೊಳ್ಳುಬಾಕ ಸಂಸ್ಕೃತಿಯಲ್ಲಿ ನಾವಿರುವಾಗ ಸಮರ್ಪಕವಾಗಿ ಹಣಕಾಸು ನಿರ್ವಹಣೆ ಮಾಡುವುದು ಹೇಗೆ?
ಎಲ್ಲವೂ ಇಂದು ವ್ಯಾಪಾರೀಕರಣದ ಪ್ರಭಾವಕ್ಕೊಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆ ಸವಾಲೇ ಸರಿ. ಹಣಕಾಸು ನಿರ್ವಹಣೆಯಲ್ಲಿ ಒಂದು ಸಮೀಕರಣ ಇದೆ. ಅದೆಂದರೆ ಸೋರ್ಸ್‌= ಇನ್‌ ಕಂ- ಎಕ್ಸ್‌ಪೆನ್ಸ್‌ ಇದನ್ನು ಬದಲಾಯಿಸಿ, ಎಕ್ಸ್‌ಪೆನ್ಸ್‌= ಇನ್‌ಕಂ- ಸೇವಿಂಗ್ಸ್‌ ಎಂದು ಮಾಡಿಕೊಳ್ಳುವ ಅಗತ್ಯವಿದೆ. ಬರುವ ಆದಾಯದಲ್ಲಿ ಖರ್ಚುಗಳನ್ನು ಕಳೆದ ಅನಂತರ ಉಳಿಸುತ್ತೇನೆ ಎನ್ನುವ ಬದಲು ಆದಾಯದಲ್ಲಿ ಮೊದಲು ಉಳಿತಾಯಕ್ಕೆ ಹಣವನ್ನು ಮೀಸಲಿಟ್ಟು, ಉಳಿಕೆಯನ್ನು ಖರ್ಚು ಮಾಡುತ್ತೇನೆ ಎನ್ನುವುದು ಜಾಣತನ. 

.ಜಿಎಸ್‌ಟಿ ಅನುಷ್ಠಾನದಿಂದ ಆರ್ಥಿಕ ನಿರ್ವಹಣೆ ಮೇಲೆ ಬೀರುವ ಪರಿಣಾಮಗಳೇನು?
ಆರ್ಥಿಕ ನಿರ್ವಹಣೆಯ ಸ್ವರೂಪ ಬದಲಾಗಿದೆ. ಮೊದಲು ಇದು ಅರ್ಥ ವಾಗದ ಪದ್ಧತಿ ಎಂದೆನ್ನಿಸಿತಾದರೂ, ಅದರಿಂದ ಅನೇಕ ಅನುಕೂಲಗಳಾಗಿವೆ. ಜಿಎಸ್‌ಟಿಯ ಮೂಲ ಉದ್ದೇಶವೂ ನಿಚ್ಚಳವಾಗಿರುವುದರಿಂದ ದೇಶದ ಆರ್ಥಿಕತೆ ಹಾಗೂ ಕಂಪೆನಿಗಳ ಸ್ವಯಂ ಆರ್ಥಿಕ ನಿರ್ವಹಣೆಯಲ್ಲಿಯೂ ಸಕಾರಾತ್ಮಕ ಪರಿಣಾಮ ಬೀರಲಿದೆ.

. ಫೈನಾನ್ಶಿಯಲ್‌ ಮ್ಯಾನೇಜ್‌ ಮೆಂಟ್‌ಗೆ ಆನ್‌ ಲೈನ್‌ ವ್ಯವಹಾರಗಳು ಹೇಗೆ ಪೂರಕ?
ಆನ್‌ಲೈನ್‌ ವ್ಯವಹಾರಗಳು ಬಹುಪಾಲು ಕಾರ್ಯಗಳನ್ನು ಸರಳಗೊಳಿಸಿವೆ. ಇಂದು ಎಲ್ಲ ವ್ಯವಹಾರಗಳು ಕಂಪ್ಯೂಟರಿನ ಮೂಲಕವೇ ನಡೆಯುತ್ತಿವೆ. ಆನ್‌ಲೈನ್‌ ವ್ಯವಹಾರಗಳು ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌ಗೆ ತುಂಬಾ ಪೂರಕ. 

.ವೈಯಕ್ತಿಕ ಹಣಕಾಸು ನಿರ್ವಹಣೆಗೆ ಯಾವ ರೀತಿ ಯೋಜನೆ ರೂಪಿಸಿಕೊಳ್ಳಬಹುದು?
ಪ್ರತಿ ತಿಂಗಳು ಆದಾಯ ವೆಚ್ಚದ ಬಜೆಟ್‌ ಮಾಡಿಕೊಂಡು ಅದರಂತೆ ಸರಿದೂಗಿಸಲು ಪ್ರಯತ್ನ ಪಡುವುದೇ ನಮಗಿರುವ ಮಾರ್ಗ. ನಾವು ಯಾವ ಯಾವ ವೆಚ್ಚಗಳಿಗೆ ಎಷ್ಟು ಪ್ರಾಮುಖ್ಯ ನೀಡಬೇಕು, ಅನಿರೀಕ್ಷಿತವಾಗಿ ಬರುವ ಸಂಕಷ್ಟಗಳಿಗೆ ಎಷ್ಟು ಮೀಸಲು ಇಡಬೇಕು, ಯಾವ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಸರಿಯಾದ ಹಿಡಿತ ಇದ್ದರೆ ಮಾತ್ರ ವೈಯಕ್ತಿಕ ಹಣಕಾಸು ನಿರ್ವಹಣೆ ಸಾಧ್ಯ.

Advertisement

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next