Advertisement
ಆದರೆ ಬರೆಯಲು, ಓದಲು ಕೂರಿಸಲು ಹರಸಾಹಸ ಪಡಬೇಕಾಗುತ್ತದೆ! ಶಾಲೆಯಲ್ಲಿರುವ ಓರ್ವ ಟೀಚರ್, “ಇವನ ಅತಿಯಾದ ತಂಟೆ, ಯಾರ ಮಾತನ್ನೂ ಕೇಳದೇ ಇರುವುದು ನೋಡಿದರೆ, ಇವನಿಗೆ ಅತಿ ಚಟುವಟಿಕೆಯ ಕಾಯಿಲೆ ಇದೆ ಅಂತ ತೋರುತ್ತದೆ. ಡಾಕ್ಟ್ರಿಗೆ ಒಮ್ಮೆ ತೋರಿಸಿ’ ಅಂತಲೂ ಸೂಚಿಸಿದ್ದಾರೆ! ಅದನ್ನು ಕೇಳಿ ಇವರಿಗೆ ಇನ್ನಷ್ಟು ಗಾಬರಿಯಾಗಿದೆ! ಈ ರೀತಿ ತಂಟೆ-ಪೋಕರಿತನವನ್ನು ಸಹಜ ಬೆಳವಣಿಗೆಯ ಭಾಗ ಎಂದು ಬಗೆದು ಸುಮ್ಮನೆ ತಾಳ್ಮೆ ವಹಿಸಬೇಕೇ? ಇಲ್ಲಾ ಕಾಯಿಲೆ ಅಂತ ಪರಿಗಣಿಸಿ ಚಿಕಿತ್ಸೆ ಕೊಡಿಸಬೇಕೇ? ದಯವಿಟ್ಟು ಸಲಹೆ ನೀಡಿ.– ರಮೀಲಾ, ಬೆಳ್ತಂಗಡಿ
Related Articles
Advertisement
ಎರಡನೆಯದು, ಅತಿಚಟುವಟಿಕೆಯ ಗುಣಲಕ್ಷಣಗಳು. ಇದರಲ್ಲಿ ಕೈ-ಕಾಲು-ಮೈಯನ್ನು ಸ್ಥಿರವಾಗಿ ಇಡಲಾಗದೆ, ಸದಾಕಾಲ ಅಲ್ಲಾಡುತ್ತ, ಕುಣಿಯುತ್ತ, ಜಿಗಿಯುತ್ತ ಇರುವುದು; ಕೂರಿಸಿದ ಜಾಗದಿಂದ ಪದೇ ಪದೆ ನೆಪ ಹೇಳಿಕೊಂಡು ಎದ್ದು ಓಡಾಡುವುದು, ಅತಿಯಾಗಿ ಅಲ್ಲಿಂದಲ್ಲಿಗೆ ಓಡಾಡುವುದು, ಹತ್ತಿ ಇಳಿದು ಮಾಡುವುದು; ಮೌನವಾಗಿ ಆಡಲು ಅಥವಾ ಓದಲು ಆಗದೇ ಇರುವುದು; ಸದಾ ಕಾಲ ಸ್ವಿಚ್ ಆನ್ ಆದವರಂತೆ ಚಲಿಸುತ್ತಲೇ ಇರುವುದು, ಅನಗತ್ಯವಾಗಿ ವಸ್ತುಗಳನ್ನು ಮುಟ್ಟುವುದು, ಬಳಸುವುದು; ಇತ್ಯಾದಿ-ಅತಿಚಟುವಟಿಕೆಯ ಗುಣಲಕ್ಷಣಗಳು ತೋರುತ್ತವೆ.
ಇದರಿಂದ ಮನೆಯಲ್ಲಿ, ಕ್ಲಾಸಿನಲ್ಲಿ ಬೇರೆಯವರಿಗೆ ಬಹಳಷ್ಟು ಕಷ್ಟವೂ ಆಗುತ್ತದೆ.ಮೂರನೆಯ ಮುಖ್ಯ ಗುಣಲಕ್ಷಣ ಪ್ರಚೋದಕತೆ ಅಥವಾ ಥಟ್ಟಂತ ಪ್ರತಿಕ್ರಿಯೆ ನೀಡುವ ಸ್ವಭಾವ. ಉದಾಹರಣೆಗೆ, ಯೋಚಿಸದೇ ಉತ್ತರಿಸುವುದು, ಮಾತಾಡುವುದು, ಮಾತಾಡುತ್ತಾ ಹೋಗುವುದು, ತನ್ನ ಸರದಿಗಾಗಿ ಕಾಯಲಿಕ್ಕೆ ಆಗದೇ ಇರುವುದು, ಬೇರೆಯವರ ಕೆಲಸ ಅಥವಾ ಮಾತಿನಲ್ಲಿ ನಡುವೆ ಬರುವುದು… ಇತ್ಯಾದಿ. ಈ ರೀತಿಯ ತೊಂದರೆಯಾದಾಗ, ವೈದ್ಯರಲ್ಲಿ ಇದನ್ನು ನಿಯಂತ್ರಿಸಲು ಕೆಲವು ನಿರ್ದಿಷ್ಟ ಔಷಧಿಗಳು ಇರುತ್ತವೆ. ಅವರ ಸೂಚನೆಯಂತೆಯೇ ಇವುಗಳನ್ನು ತೆಗೆದುಕೊಳ್ಳಬೇಕು. ಔಷಧಿಯಲ್ಲದೆ ಬೇರೆ ರೀತಿ ಸ್ವಭಾವ ತಿದ್ದುವ ಕ್ರಮಗಳನ್ನೂ ಅಳವಡಿಸಿ ಪ್ರಯತ್ನಿಸಬೇಕಾಗುತ್ತದೆ. ವೈಯಕ್ತಿಕ ಹಾಗೂ ಕುಟುಂಬದವರಿಗೆ ಕಾಯಿಲೆ ಬಗ್ಗೆ ಕೂಲಂಕಷವಾಗಿ ತಿಳಿಸಿ ಹೇಳಿಕೊಡಲಾಗುತ್ತದೆ. ಸ್ವಭಾವ ತಿದ್ದುವ ಸಮಾಲೋಚಕರ ಚಿಕಿತ್ಸೆಯಲ್ಲಿ ಸ್ಪಷ್ಪ ನಿರೀಕ್ಷಣೆಗಳನ್ನಿಟ್ಟು, ನಿಯಮಗಳನ್ನಿಡುವ ಪದ್ಧತಿ, ಕೆಲಸಗಳನ್ನು ಚಿಕ್ಕ ಸ್ಪಷ್ಟ ತುಂಡುಗಳಾಗಿ ವಿಭಜಿಸಿ ಮಾಡಿಸುವ ತಂತ್ರ, ಸ್ವಭಾವಕ್ಕೆ ತಕ್ಕಂತೆ ಒಳ್ಳೆಯ ಅಥವಾ ಹಿತಕರ ಸಂಭಾವನೆ ಸಿಗುವಂತೆ ಮಾಡುವ ವಿಧಾನ; ಯಾರೊಡನೆಯೂ ಸಂಪರ್ಕಿಸದಂತೆ, ಮೌನವಾಗಿ, ನಿರ್ದಿಷ್ಟ ಕಾಲಾವಧಿಗೆ ಮಗುವನ್ನು ಬಹಿಷ್ಕರಿಸುವ ಟೈಮ್ ಔಟ್ ಪ್ರಕ್ರಿಯೆ- ಮಗು ಚೇಷ್ಟೆ ಮಾಡಿದಾಗ; ತಮ್ಮ ಸಹಪಾಠಿಗಳೊಡನೆ, ಬೇರೆ ಮಕ್ಕಳೊಡನೆ, ಶಿಕ್ಷಕರು-ಪೋಷಕರೊಡನೆ ಈ ರೀತಿಯ ಮಕ್ಕಳು ಹೇಗೆ ವ್ಯವಹರಿಸಬೇಕು ಎಂಬುದನ್ನು ದೃಶ್ಯ ನಾಟಕದ ಮೂಲಕ ಅವರಿಗೆ ಮಾಡಿ-ತೋರಿಸಿ, ಮನದಟ್ಟು ಮಾಡುವಿಕೆ; ಶಿಕ್ಷಕರಿಗೆ, ಪೋಷಕರಿಗೆ, ಹಾಗೂ ಶಾಲೆಯಲ್ಲಿ ಇದರ ಕುರಿತಾಗಿ ವಿಶೇಷ ಮಾಹಿತಿ ನೀಡಿ ತರಬೇತಿ ನೀಡುವಿಕೆ… ಮುಂತಾದವು. ಹೀಗೆ ನಾನಾ ವಿಧಿ-ವಿಧಾನಗಳನ್ನು ಪ್ರಯತ್ನಿಸಿ ನೋಡಿದಾಗ ಮಕ್ಕಳಲ್ಲಿ ಕಂಡು ಬರುವ ಈ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ದೊರಕುತ್ತದೆ. ಇಲ್ಲಿ ಮಕ್ಕಳ- ಪೋಷಕರ ಇಬ್ಬರ ಪ್ರಯತ್ನವೂ ಅಗತ್ಯ. — ಡಾ. ಅರುಣಾ ಯಡಿಯಾಳ್