Advertisement

ವಾಜಪೇಯಿ ನಂತರ ನನ್ನ ಮೇಲೆ  ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಜಾರ್ಜ್‌ ಫೆರ್ನಾಂಡಿಸ್:‌ಗಡ್ಕರಿ

10:42 AM Feb 07, 2024 | Team Udayavani |

ಮುಂಬೈ: ಅವಕಾಶವಾದಿ ರಾಜಕಾರಣಿಗಳು ಆಡಳಿತಾರೂಢ ಪಕ್ಷದೊಂದಿಗೆ ಸಂಬಂಧ ಬೆಳೆಸುವ ಬೆಳವಣಿಗೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಇಂತಹ ಸಿದ್ಧಾಂತದ ಅವಸಾನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದರು.

Advertisement

ಇದನ್ನೂ ಓದಿ:Chicago: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಅಟ್ಟಾಡಿಸಿ ಹಲ್ಲೆ… ಸಹಾಯ ಕೋರಿದ ಪತ್ನಿ

ತಮ್ಮ ಸಿದ್ಧಾಂತಗಳಿಗೆ ಕಟಿ ಬದ್ಧರಾಗಿರುವ ಮುಖಂಡರು ಇದ್ದರು ಕೂಡಾ ಅಂತಹವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂದು ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾನು ಯಾವಾಗಲೂ ಹಾಸ್ಯವಾಗಿ ಹೇಳುತ್ತಿರುತ್ತೇನೆ, ಅಧಿಕಾರದಲ್ಲಿ ಯಾವುದೇ ಸರ್ಕಾರವಿರಲಿ, ಒಂದು ವಿಷಯ ಮಾತ್ರ ಸತ್ಯ, ಅದೇನೆಂದರೆ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರಿಗೆ ಗೌರವ ಸಿಗುವುದಿಲ್ಲ. ಅದೇ ರೀತಿ ಯಾರು ತಪ್ಪು ಮಾಡುತ್ತಾರೋ ಅಂತಹವರಿಗೆ ಯಾವಾಗಲೂ ಶಿಕ್ಷೆಯೂ ಆಗುವುದಿಲ್ಲ” ಎಂದು ಗಡ್ಕರಿ ಯಾರ ಹೆಸರನ್ನು ಉಲ್ಲೇಖಿಸದೇ ಚಾಟಿ ಬೀಸಿದ್ದಾರೆ.

ಗಡ್ಕರಿ ಅವರು ಲೋಕಮಾತ್‌ ಮೀಡಿಯಾ ಗ್ರೂಪ್‌ ಆಯೋಜಿಸಿದ್ದ, ಸಂಸದರ ಅಭಿವೃದ್ಧಿ ಕುರಿತ ಕೊಡುಗೆಗಳಿಗಾಗಿ ಕೊಡ ಮಾಡುವ ಪ್ರಶಸ್ತಿ ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

Advertisement

ನಮ್ಮ ಚರ್ಚೆ ಮತ್ತು ಸಂವಾದಗಳಲ್ಲಿ, ಭಿನ್ನಾಭಿಪ್ರಾಯಗಳು ನಮ್ಮ ಸಮಸ್ಯೆಯಲ್ಲ. ನಮ್ಮ ಸಮಸ್ಯೆ ವಿಚಾರಗಳ ಕೊರತೆಯಾಗಿದೆ ಎಂದು ಗಡ್ಕರಿ ವಿಶ್ಲೇಷಿಸಿದರು. ತಮ್ಮ ಸಿದ್ಧಾಂತದ ಆಧಾರದ ಮೇಲೆ ದೃಢವಾಗಿ ನಿಲ್ಲುವ ಮುಖಂಡರಿದ್ದಾರೆ. ಆದರೆ ಅಂತಹವರ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯದ ಸಿದ್ಧಾಂತದ ಅವನತಿ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಗಡ್ಕರಿ ಹೇಳಿದರು.

ಬಲಪಂಥೀಯರಾಗಿರಲಿ, ಎಡಪಂಥೀಯರಾಗಿರಲಿ, ನಮಗೆ ತಿಳಿದಿರುವ ಕೆಲವು ಅವಕಾಶವಾದಿಗಳು ಹೀಗೆ ಬರೆಯುತ್ತಾರೆ. ಮತ್ತು ಎಲ್ಲರೂ ಆಡಳಿತಾರೂಢ ಪಕ್ಷದೊಂದಿಗೆ ಕೈಜೋಡಿಸಲು ಬಯಸುತ್ತಾರೆ ಎಂದು ಗಡ್ಕರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾರತ ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳಲ್ಲಿ ಹೇಳುವುದಾದರೆ, ಭಾರತ ಪ್ರಜಾಪ್ರಭುತ್ವದ ತಾಯಿಯಾಗಿದೆ. ಇದು ನಮ್ಮ ವಿಶೇಷತೆಯಾಗಿದೆ. ನಮ್ಮ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಜಗತ್ತಿನ ಉಳಿದ ದೇಶಕ್ಕಿಂತ ಭಿನ್ನವಾಗಿದೆ.

“ ಪ್ರಚಾರ ಮತ್ತು ಜನಪ್ರಿಯತೆ ಬೇಕು. ಆದರೆ ಆಯಾಯ ಕ್ಷೇತ್ರಗಳಲ್ಲಿನ ಮತದಾರರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಅವರು ಸಂಸತ್ತಿನಲ್ಲಿ ಮಾತನಾಡುವುದು ಹೆಚ್ಚು ಮುಖ್ಯವಾಗಲಿದೆ. ಈ ಸಂದರ್ಭದಲ್ಲಿ ಆರ್‌ ಜೆಡಿ ವರಿಷ್ಠ ಲಾಲುಪ್ರಸಾದ್‌ ಯಾದವ್‌ ಅವರನ್ನು ಶ್ಲಾಘಿಸಿದ ಗಡ್ಕರಿ, ನಾನು ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರ ನಡವಳಿಕೆ, ಸರಳತೆ ಮತ್ತು ವ್ಯಕ್ತಿತ್ವದ ಬಗ್ಗೆ ಅವರಿಂದ ಬಹಳಷ್ಟು ಕಲಿತಿದ್ದೇನೆ. ಅಟಲ್‌ ಬಿಹಾರಿ ವಾಜಪೇಯಿ ಅವರ ನಂತರ ನಾನು ಅತೀ ಹೆಚ್ಚು ಪ್ರಭಾವಿತನಾದದ್ದು ಜಾರ್ಜ್‌ ಫೆರ್ನಾಂಡಿಸ್‌ ಅವರ ವ್ಯಕ್ತಿತ್ವದಿಂದ ಎಂಬುದಾಗಿ ಹೇಳಿದರು”.

Advertisement

Udayavani is now on Telegram. Click here to join our channel and stay updated with the latest news.

Next