Advertisement

Gujarat ಪ್ರವಾಹ; ಬೃಹತ್ ಮೊಸಳೆ ರಕ್ಷಿಸಿ ಸ್ಕೂಟರ್‌ನಲ್ಲೇ ಸಾಗಾಟ!!: ವಿಡಿಯೋ

08:38 PM Sep 01, 2024 | Team Udayavani |

ವಡೋದರ:ಗುಜರಾತ್‌ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭೀಕರ ಪ್ರವಾಹದ ನಂತರ ಮೊಸಳೆಗಳು ಮನೆಗಳ ಮಹಡಿಗಳಲ್ಲಿ ಆಶ್ರಯ ಪಡೆದ ಸುದ್ದಿ ವರದಿಯಾಗಿತ್ತು. ವಡೋದರದಲ್ಲಿ ಸುಮಾರು 40 ಮೊಸಳೆಗಳನ್ನು ವಸತಿ ಪ್ರದೇಶಗಳಿಂದ ರಕ್ಷಿಸಲಾಗಿದೆ.

Advertisement

ಕೆಲವು ಎನ್‌ಜಿಒಗಳ ಸಹಾಯದಿಂದ ರಕ್ಷಣ ತಂಡಗಳು ಹಾವು, ನಾಗರಹಾವು, ಸುಮಾರು 40 ಕೆಜಿ ತೂಕದ ಐದು ದೊಡ್ಡ ಆಮೆಗಳು ಮತ್ತು ಮುಳ್ಳುಹಂದಿ ಸೇರಿದಂತೆ 40 ಮೊಸಳೆಗಳು ಮತ್ತು 75 ಇತರ ಪ್ರಾಣಿಗಳನ್ನು ರಕ್ಷಿಸಿವೆ ಅರಣ್ಯ ಇಲಾಖೆ ತಿಳಿಸಿದೆ.

ರಕ್ಷಣ ಕಾರ್ಯಾಚರಣೆಯ ಬಳಿಕ ಇಬ್ಬರು ಸ್ಕೂಟರ್‌ನಲ್ಲಿ ಮೊಸಳೆಯನ್ನು ಅರಣ್ಯ ಇಲಾಖೆ ಕಚೇರಿಗೆ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಸ್ಕೂಟರ್ ಸವಾರಿ ಮಾಡುತ್ತಿದ್ದರೆ, ಹಿಂಬದಿ ಸವಾರ ಮೊಸಳೆಯನ್ನು ಅಡ್ಡಲಾಗಿ ಹಿಡಿದು ಕುಳಿತಿದ್ದಾನೆ. !!

Advertisement

Udayavani is now on Telegram. Click here to join our channel and stay updated with the latest news.

Next