Advertisement

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

12:05 AM Mar 28, 2024 | Team Udayavani |

ಉಡುಪಿ, ಮಾ. 27: ಪೆರ್ಣಂಕಿಲ ಶ್ರೀ ಮಹಾ ಲಿಂಗೇಶ್ವರ ಶ್ರೀ ಮಹಾಗಣಪತಿ ದೇಗುಲದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಬುಧವಾರ ನೆರವೇರಿದವು.

Advertisement

ಪುಣ್ಯಾಹವಾಚನ, ಗಣಪತಿ ಯಾಗ, ಶ್ರೀ ಮಹಾಲಿಂಗೇಶ್ವರ ಸಾನ್ನಿಧ್ಯದಲ್ಲಿ ತತ್ವಹೋಮ, ವಿಶೇಷ ಶಾಂತಿ ಹೋಮ, ರುದ್ರಯಾಗ, ತತ್ವಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಭದ್ರಕ ಮಂಡಲ ಪೂಜೆ, ಶ್ರೀ ಮಹಾಲಿಂಗೇಶ್ವರ ದೇವರಿಗೆ ಪಂಚವಿಂಶತಿ ದ್ರವ್ಯಾತ್ಮಕ ಏಕೋತ್ತರ ಸಹಸ್ರ ಕಲಶಾಭಿಷೇಕ, ಅಧಿವಾಸ ಹೋಮಗಳು, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ| ಹರಿದಾಸ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಪೇಜಾವರ ಮಠದ ದಿವಾನ ಎಂ. ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್‌, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್‌ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮಗಳು
ಮಾ. 28ರ ಬೆಳಗ್ಗೆ 108 ಕಾಯಿ ಗಣಪತಿ ಹೋಮ, ಅಷ್ಟದ್ರವ್ಯ ಮಹಾಗಣಪತಿ ಯಾಗ, ಶ್ರೀ ಮಹಾಲಿಂಗೇಶ್ವರ ದೇವರಿಗೆ ಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಅವಸ್ರುತ ಬಲಿ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಅಂಕುರ ಬಲಿ, ಅಂಕುರಾ ರೋಹಣ, ರಂಗಪೂಜೆ, ಉತ್ಸವ ಬಲಿ, ನಾಗದೇವರ ಸಾನ್ನಿಧ್ಯದಲ್ಲಿ ಪ್ರಸನ್ನ ಪೂಜೆ, ಹಾಲಿಟ್ಟು ಸೇವೆ, ನಾಗಮಂಡಲೋತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next