Advertisement
ಸೋಮವಾರ ಪೆರ್ಮುದೆ ಗ್ರಾ.ಪಂ. ಸಭಾಭವನದಲ್ಲಿ ನಡೆದ ಪೆರ್ಮುದೆ ಗ್ರಾ.ಪಂ. ನ ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮಗಳ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ಮಹಿಳಾ ಸಶಕ್ತೀಕರಣಕ್ಕೆ ದುಡಿದ ಹಾಗೂ ಸಾಧನೆ ಮಾಡಿದ ಮಹಿಳೆಯರನ್ನು ಸಮ್ಮಾನಿಸಿ ಗೌರವಿಸಬೇಕು. ಇದು ಇತರರಿಗೆ ಮಾದರಿಯಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದನ್ನು ಮಾಡುತ್ತಿಲ್ಲ ಎಂದು ಸಭೆಯಲ್ಲಿ ಗ್ರಾಮಸ್ಥರ ಇಲಾಖೆಯನ್ನು ತರಾಟೆ ತೆಗೆದುಕೊಂಡರು.
ನೋಂದಣಿ ಅಗತ್ಯಶಿಕ್ಷಣ ಇಲಾಖೆ ಅಧಿಕಾರಿ ಲಕ್ಷ್ಮೀ ಅವರು ಇಲಾಖಾ ಮಾಹಿತಿ ನೀಡಿ, ಸರಕಾರಿ ಸೌಲಭ್ಯಗಳನ್ನು ಪಡೆಯಲು ಹೆಸರು, ಜನನಪ್ರಮಾಣ ಪತ್ರ, ಆಧಾರ್ ಕಾರ್ಡ್,ಬ್ಯಾಂಕ್ ಖಾತೆ ನಂಬ್ರನ್ನು ಒಂದೇ ತರನಾದ ಹೆಸರಿನಲ್ಲಿರುವಂತೆ ನೋಂದಣಿ ಮಾಡಿ. ಇಲ್ಲದಿದ್ದಲ್ಲಿ ಸೌಲಭ್ಯ ಪಡೆಯಲು ಕಷ್ಟವಾಗುತ್ತದೆ ಹೇಳಿದರು. ಪೆರ್ಮುದೆಯಲ್ಲಿ 392 ವಸತಿ ರಹಿತರಿದ್ದಾರೆ. ಸರಕಾರಿ ಜಾಗ ಭೂಸ್ವಾಧೀನದಲ್ಲಿ ಹೋಗಿದೆ. ಮನೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರಿಂದ ಮನವಿ ಬಂತು. ಇದಕ್ಕೆ ಉತ್ತರಿಸಿದ ಪಿಡಿಒ ಶೈಲಜಾ ಈಗಾಗಲೇ ಸರ್ವೆ ನಂಬ್ರ 127/1ರಲ್ಲಿ ಜಾಗ ಇದ್ದು ಅದು ಜಿಲ್ಲಾಧಿಕಾರಿಯವರು ನ್ಯಾಯಾಲಯದಲ್ಲಿದೆ. ಸದ್ಯದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು. ಅಮೃತ ಗ್ರಾಮೀಣ ವಸತಿ ಯೋಜನೆಯಲ್ಲಿ ವಸತಿ ನಿವೇಶನಗಳನ್ನು ನೀಡಲಾಗುವುದು ಎಂದರು. ಮೆಸ್ಕಾಂ ಇಲಾಖೆ ಸಹಾಯಕ ಎಂಜಿನಿಯರ್ ಅರುಣ್ ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿ, ಪೆರ್ಮುದೆ ಪದವು, ಕೆನರಾ ಬ್ಯಾಂಕ್ , ಕ್ರಾಸ್ ಪದವುನಲ್ಲಿ ಟಿಸಿ ಅಳವಡಿಸಲಾಗಿದೆ. 6 ಲಕ್ಷ ರೂ. ವೆಚ್ಚದಲ್ಲಿ ಹಳೆ ತಂತಿಯ ಬದಲು ಹೊಸ ತಂತಿಯನ್ನು ಅಳವಡಿಸಲಾಗಿದೆ. 3ಅಪಾಯಕಾರಿ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ ಎಂದರು. ಶೇ. 100 ಲಸಿಕೆ ಗುರಿ
ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶರತ್ ಕುಮಾರ್ ಮಾತನಾಡಿ, ಈಗಾಗಲೇ ಕುತ್ತೆತ್ತೂರು ಗ್ರಾಮದಲ್ಲಿ ಶೇ. 96 ಲಸಿಕೆಯನ್ನು ನೀಡಲಾಗಿದೆ. ಮನೆಮನೆಗೆ ಹೋಗಿ ಲಸಿಕೆ ನೀಡಲಾಗಿತ್ತು. ಶೇ. 100ರ ಗುರಿ ನಮ್ಮದು .ವಯಸ್ಕರು ಲಸಿಕೆ ತೆಗೆದುಕೊಳ್ಳಲು ಹಿಂಜರಿಕೆ ಮಾಡುತ್ತಿದ್ದಾರೆ ಎಂದರು. ಕೃಷಿ ಇಲಾಖಾಧಿಕಾರಿ ಬಶೀರ್ ಮಾತನಾಡಿ, ನರೇಗಾ ಯೋಜನೆ ಯಡಿಯಲ್ಲಿ ಪೆರ್ಮುದೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ 30 ಎರೆಹುಳ ತೊಟ್ಟಿಯನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದ ಲಾಗಿದೆ. ಅಲ್ಪ ಅಳದ ಬಾವಿಗೆ ನರೇಗಾ ಯೋಜನೆಯಡಿಯಲ್ಲಿ ಅವಕಾಶ ಇದೆ. ತುಂತುರು ನೀರಾವರಿ ಯೋಜನೆಯಡಿ 49 ಅರ್ಜಿಗಳು ಬಂದಿದೆ ಎಂದು ಹೇಳಿದರು. ಗ್ರಾ.ಪಂ. ಉಪಾಧ್ಯಕ್ಷ ಲೀನಾ ಡಿ’ಸೋಜಾ ಹಾಗೂ ಸದಸ್ಯರು, ಕಾರ್ಯ ದರ್ಶಿ ನಾಗೇಶ್ ಸುವರ್ಣ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.ಸಭೆಯನ್ನು ಪಿಡಿಒ ಶೈಲಜಾ ಅವರು ನಿರ್ವಹಿಸಿದರು. ಶೇ.60 ಕಾಮಗಾರಿ ಪೂರ್ಣ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯವಾಹಕ ಎಂಜಿನಿಯರ್ ನರೇಂದ್ರ ಸಭೆಯಲ್ಲಿ ಮಾಹಿತಿ ನೀಡಡಿ, ಮನೆಮನೆಗೆ ನಳ್ಳಿ ನೀರು ಸಂಪರ್ಕವನ್ನು ನೀಡುವ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಈಗಾಗಲೇ ಟ್ಯಾಂಕ್‌ಗಳು ನಿರ್ಮಾಣ ವಾಗುತ್ತಿವೆ. ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮದಲ್ಲಿ 660 ಮತ್ತು 312 ಮನೆಗಳ ನಳ್ಳಿನೀರಿನ ಸಂಪರ್ಕ ಬಾಕಿ ಇವೆ. ಪ್ರತೀ ಸಂಪರ್ಕಕ್ಕೆ ಮೀಟರ್‌ನ್ನು ಅಳವಡಿಸಲಾಗುವುದು. ಈಗಾಗಲೇ ಶೇ.60 ಕಾಮಗಾರಿ ಪೂರ್ಣಗೊಂಡಿದೆ ಎಂದರು. ಸಹಕಾರ ಅಗತ್ಯ
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಅಂಚನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರ, ಗ್ರಾ.ಪಂ. ಸದಸ್ಯರ ಸಹಕಾರ ಹಾಗೂ ಪಿಡಿಒ ಹಾಗೂ ಸಿಬಂದಿ ಸೇವಾ ಕಾರ್ಯ ದಿಂದ ಪೆರ್ಮುದೆ ಗ್ರಾ.ಪಂ. ಅಭಿ ವೃದ್ಧಿಗೆ ಕಾರಣವಾಗಿದೆ. ಮುಂದೆಯೂ ಸಹಕಾರ ನೀಡಿ ಸಹಕರಿಸಬೇಕು ಎಂದರು.