Advertisement

ವಿಮಾನದಲ್ಲಿ ಡ್ರೋನ್‌ ಒಯ್ಯಲು ಅನುಮತಿ

01:10 AM Oct 19, 2021 | Team Udayavani |

ಹೊಸದಿಲ್ಲಿ: ಇನ್ನುಮುಂದೆ ದೇಶೀಯ ವಿಮಾನ ಯಾನಿಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಡ್ರೋನ್‌ಗಳನ್ನು ತಮ್ಮೊಡನೆ ಒಯ್ಯಬಹುದು.

Advertisement

ಬ್ಯಾಟರಿ ರಹಿತವಾದ ಡ್ರೋನ್‌ಗಳನ್ನು ಚೆಕ್‌-ಇನ್‌ ಬ್ಯಾಗ್‌ಗಳಲ್ಲಿ ಮತ್ತು ನಿರ್ದಿಷ್ಟ ವ್ಯಾಟ್‌ ಸಾಮರ್ಥ್ಯದ ವರೆಗಿನ ಬ್ಯಾಟರಿಗಳನ್ನು ಕ್ಯಾಬಿನ್‌ ಬ್ಯಾಗ್‌ನಲ್ಲಿ ಇರಿಸಿ ಕೊಂಡೊಯ್ಯಲು ಅನುಮತಿ ನೀಡಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಡ್ರೋನ್‌ ಒಯ್ಯಲು ಅನುಮತಿ ಇದ್ದರೂ ಪ್ರಯಾಣಿಸುವ ದೇಶದ ಡ್ರೋನ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯ.

ಜತೆಗೆ, ಪ್ರಯಾಣಿಕರು ತಮ್ಮ ಬಳಿ ಡ್ರೋನ್‌ ಇರುವ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗೆ ನೀಡುವುದು ಕಡ್ಡಾಯ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next