Advertisement
ಅಲ್ಲದೆ ಪೇಪರ್ ಮೌಲ್ಡ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿದ ಮೂರ್ತಿಗೆ ನಿಷೇಧವಿದ್ದು, ಮಣ್ಣಿನ ಮತ್ತು ಸೀಸ ಮುಕ್ತ ಬಣ್ಣವಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಬಲವಂತವಾಗಿ ಚಂದಾ ವಸೂಲಿ ನಿಷೇಧಿಸಲಾಗಿದೆ. ಹಾಗೆ ಮಾಡಿದರೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Related Articles
Advertisement
ನಿಗದಿ ಪಡಿಸಿದ ಸ್ಥಳದಲ್ಲೇ ಗಣೇಶ ವಿಸರ್ಜನೆ: ಗಣೇಶ ವಿಸರ್ಜನೆಯನ್ನು ಬಾವಿ, ಕೆರೆ, ನದಿಯಲ್ಲಿ ಮಾಡದೆ ಸಿಂಟೆಕ್ಸ್, ಬಕೆಟ್‌ನಲ್ಲಿ ವಿಸರ್ಜಿಸಿ ಗಣೇಶ ಪೂರ್ಣವಾಗಿ ಕರಗಿದ ನಂತರ ಗಿಡಗಳಿಗೆ ಕರಗಿದ ನೀರನ್ನು ಹಾಕುವುದು ಅಥವಾ ಮಹಾನಗರ ಪಾಲಿಕೆಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿಸರ್ಜನೆ ಮಾಡುವುದು. ಪಶ್ಚಿಮ ವಾಹಿನಿ ಮತ್ತು ಕೆರೆಗಳಲ್ಲಿ ಗಣೇಶ ವಿಸರ್ಜನೆ ಮಾಡುವವರು ಸುರಕ್ಷತೆಯ ದೃಷ್ಟಿಯಿಂದ ಸೂರ್ಯ ಮುಳುಗುವ ಮುಂಚಿತವಾಗಿ ವಿಸರ್ಜನೆ ಮಾಡುವುದು.
ಗಣೇಶ ಪ್ರತಿಷ್ಠಾಪನೆ ಮಾಡುವವರು ಲಾಟರಿ, ಪ್ರವೇಶ ಶುಲ್ಕ ಅಥವಾ ಇನ್ನಿತರೆ ಯಾವುದೇ ಬಹುಮಾನದ ಯೋಜನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ವ್ಯವಸ್ಥಾಪಕರು ಸ್ವಯಂ ಸೇವಕರನ್ನು ನೇಮಿಸಿಕೊಂಡು, ಅವರಿಗೆ ಗುರುತಿನ ಚೀಟಿ ನೀಡಿ, ಪ್ರತಿಷ್ಠಾಪನ ಸ್ಥಳ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನೆ ಸ್ಥಳದ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡುವುದು.
ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ನುರಿತ ಈಜುಗಾರರು ಇರುವಂತೆ ವ್ಯವಸ್ಥೆ ಮಾಡಿಕೊಂಡು ಅಹಿತಕರ ಘಟನೆಗೆ ಅವಕಾಶವಾಗದಂತೆ ನೋಡಿಕೊಳ್ಳುವುದು ಎಂದು ಹೇಳಿದ್ದಾರೆ. ಪ್ರತಿಷ್ಠಾಪನೆ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಿ ಯಾವುದೇ ರೀತಿಯ ಬೆಂಕಿ ಆಕಸ್ಮಿಕಗಳು ನಡೆಯದಂತೆ ನೋಡಿಕೊಳ್ಳುವುದು ಹಾಗೂ ಬೆಂಕಿ ನಂದಿಸುವ ಉಪಕರಣಗಳಾದ ನೀರು, ಮರಳು ಮತ್ತು ಇತರೆ ಬೆಂಕಿ ನಂದಿಸುವ ಉಪಕರಣಗಳನ್ನು ಇಟ್ಟುಕೊಳ್ಳುವುದು.
ಕಂಟ್ರೋಲ್ ರೂಂಗೆ ಮಾಹಿತಿ ನೀಡಿ: ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣಪತಿ, ಪೇಪರ್ ಮೌಲ್ಡ್, ಮತ್ತು ಸೀಸದಿಂದ ತಯಾರಿಸಿದ ಗಣಪತಿ ಮಾರಾಟ ಮತ್ತು ಪ್ರತಿಷ್ಠಾಪನೆ ಮಾಡುವುದು ಕಂಡು ಬಂದಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವುದು.
ನಿಬಂಧನೆಗಳನ್ನು ಉಲ್ಲಂ ಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 100, 2418139, 2418339 ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.