ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ಶಾಶ್ವತ ಕುಡಿವ ನೀರಿನ ಯೋಜನೆ ಜಾರಿಗೊಳಿಸಲು ನಿರ್ಧರಿಸಿದ್ದು, ಯೋಜನೆ ತಯಾರಾದರೆ ಮುಖ್ಯಮಂತ್ರಿಗಳಿಂದ ಅನುದಾನ ಪಡೆದು ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಜನಜೀವನ್ ಯೋಜನೆ, ಗ್ರಾಮೀಣ ಕುಡಿಯುವ ನೀರು, ನಗರ ನೀರು ಸರಬರಾಜು ಮಂಡಳಿ ವತಿಯಿಂದ ಕೈಗೊಂಡಿರುವ ಯೋಜನೆಗಳ ಕುರಿತು ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ವಿಧಾನ ಸಭಾಕ್ಷೇತ್ರಗಳಿಗೆ ಶಾಶ್ವತ ಕುಡಿವ ನೀರು ಪೂರೈಸಲು ಯೋಜನೆ ತಯಾರಿಸುವಂತೆ ಸೂಚಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳೇ ಉಂಡುವಾಡಿ ಯೋಜನೆ ಜಾರಿಯಲಿದ್ದು, ಈವರೆಗೆ ಸುಮಾರು50 ಗ್ರಾಮಕ್ಕೆ ಈ ಯೋಜನೆ ನೀಡಲಾಗಿತ್ತು. ಈಗ ಮತ್ತೆ 20 ಗ್ರಾಮ ಸೇರಿಸಿ ವಿಸ್ತರಿಸಲು ಉದ್ದೇಶಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಗಳಿಗೆ ಸಂಪೂರ್ಣವಾಗಿ ಶಾಶ್ವತ ಕುಡಿವ ನೀರು ಪೂರೈಸಲು ಹಳೇ ಉಂಡುವಾಡಿ ಯೋಜನೆ ಕೈಗೊಂಡಿದ್ದು, 360 ಕೋಟಿ ಮೀಸಲಿಡಲಾಗಿದೆ. ಈ ಪೈಕಿ 50 ಕೋಟಿ ಯನ್ನು ಈಗಾಗಲೇ ಭೂ ಸ್ವಾಧೀನಕ್ಕೆ ವಹಿಯಿಸಲಾಗಿದೆ. ಟೆಂಡರ್ ಆರಂಭವಾಗಿದ್ದು, ಹಣಕಾಸು ಇಲಾಖೆಗೆ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದರು.
ಮೇಳಾಪುರ, ಹೊಂಗಳ್ಳಿ2,3ನೇ ಹಂತದಿಂದ ಹೆಚ್ಚುವರಿ ನೀರು ತರಲು ಪೈಪ್‌ಲೈನ್ ಅಳವಡಿಸು ವುದು, ಇತರೆ ಕಾಮಗಾರಿ ನಡೆಸಲಾಗುತ್ತಿದೆ. ಹೆಚ್ಚುವರಿ ನೀರು ಬಂದರೆ ರೂಪಾನಗರ, ರಾಜರಾ ಜೇಶ್ವರಿ ನಗರಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಸರಸ್ವತಿಪುರಂ,ಜೆ.ಪಿ.ನಗರ, ಆಲನಹಳ್ಳಿ ಭಾಗಕ್ಕೆ ಸಮಸ್ಯೆ ಇಲ್ಲದಂತೆ ನೀರು ಪೂರೈಸಬಹುದು. ಪ್ರಸ್ತುತ 150 ಕೋಟಿಯನ್ನು ಅಮೃತ್ ಯೋಜನೆ ಯಡಿ ಕೊಟ್ಟಿರುವುದರಿಂದ 3-4 ತಿಂಗಳಲ್ಲಿ ಕಾಮ ಗಾರಿ ಆರಂಭವಾಗಲಿದೆ ಎಂದರು.
ಹುಣಸೂರು ನಗರದಲ್ಲಿ ಕುಡಿಯುವ ನೀರು, ಒಳ ಚರಂಡಿ ಯನ್ನು ಜಲಮಂಡಳಿಯಿಂದ ಆರಂಭಿಸಲಾಗು ವುದು. ಲಕ್ಷ್ಮಣ ತೀರ್ಥ ನದಿಗೆ ಕಲುಷಿತ ನೀರು ಹೋಗದಂತೆ ತಡೆಯಲಾಗುವುದು. ಕ್ಷೇತ್ರ ವ್ಯಾಪ್ತಿಯ 300 ಗ್ರಾಮಕ್ಕೆ ಕಬಿನಿ ನೀರು ತರಲಾಗುವುದು. ಪಿರಿಯಾಪಟ್ಟಣದ59 ಗ್ರಾಮಕ್ಕೆ ಹಾಡ್ಯ ದಿಂದ ನೀರು ಪೂರೈಸಲಾಗುತ್ತಿದೆ. ಇನ್ನು 224 ಗ್ರಾಮಕ್ಕೆ200ಕೋಟಿರೂ.ವೆಚ್ಚದಲ್ಲಿ ಮುತ್ತಿನ ಮುಳಸೋಗೆಯಿಂದ ನೀರು ತರಲಾಗುತ್ತಿದೆ. ಈಸಂಬಂಧ ಶೀಘ್ರ ಪ್ರಸ್ತಾವನೆ ಸಲ್ಲಿಸುವಂತೆ ಜಲ ಮಂಡಳಿ, ಗ್ರಾಮೀಣ ಕುಡಿವ ನೀರು, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಪಂ ಸಿಇಒ ಭಾರತಿ, ಜಲಮಂಡಳಿ ಮುಖ್ಯ ಎಂಜಿನಿಯರ್ ಸಿದ್ದಪ್ಪನಾಯ್ಕ, ಹುಣಸೂರು ಇಇ ಪ್ರಭು, ವಾಣಿವಿಲಾಸ ನೀರು ಸರಬರಾಜು ಕಾರ್ಯಾ ಗಾರದ ಇಇ ಆಸೀಫ ಇದ್ದರು.