ದಾವಣಗೆರೆ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮಾನವೀಯತೆ ಆಧಾರದಲ್ಲಿ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ ಮಾಡಬೇಕು ಎಂದು ರಾಜ್ಯಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಚ್. ಕೊಟ್ರೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ಎರಡು ದಶಕಗಳಿಂದ ಅತಿ ಕಡಿಮೆಗೌರವಧನದೊಂದಿಗೆ ಕೆಲಸ ಮಾಡುತ್ತಿರುವ
ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ ಮಾಡುವ ಮೂಲಕ ರಾಜ್ಯ ಸರ್ಕಾರ ಸಾವಿರಾರು ಕುಟುಂಬ ಹಿತ ಕಾಯಬೇಕು ಎಂದು ಮನವಿ ಮಾಡಿದರು. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ 14,183 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಅನೇಕರು ನಿವೃತ್ತಅಂಚಿನಲ್ಲಿ ಬಂದು ವಯೋಮಿತಿ ಮೀರಿದ, ಮೀರುತ್ತಿರುವ ಆತಂಕದಲ್ಲಿ ಇದ್ದಾರೆ.
ಕೋವಿಡ್‌ನಿಂದ 24 ಜನರು ಮೃತಪಟ್ಟಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವಿಧಾನ ಪರಿಷತ್‌ಸದಸ್ಯ ಕಲಾಪದಲ್ಲಿ ಆಯನೂರು ಮಂಜುನಾಥ್‌ನಡೆಸಿದ ಹೋರಾಟದ ಫಲವಾಗಿ ಸ್ಪಂದಿಸಿದ ಸರ್ಕಾರ 5 ತಿಂಗಳ ಗೌರವ ಧನ ಬಿಡುಗಡೆ ಮಾಡಿದೆ. ಬಾಕಿ ಉಳಿದಿರುವ ಶೇ.50 ರಷ್ಟು ಅತಿಥಿ ಉಪನ್ಯಾಸಕರನ್ನ ತುಂಬಿಕೊಳ್ಳಲ್ಲಿಕ್ಕೆ ಆದೇಶ ಮಾಡಿರುವುದನ್ನ ಸಮಿತಿ ಸ್ವಾಗತಿಸುತ್ತಿದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರನ್ನ ಮಾ.31ಕ್ಕೆ ಬಿಡುಗಡೆಗೊಳಿಸದೆ ಪ್ರಸಕ್ತ ಶೈಕ್ಷಣಿಕ ವರ್ಷದವರೆಗೆ ಮುಂದುವರಿಸಬೇಕು. ಕಾಯಂ ಅಧ್ಯಾಪಕರ ನಿಯೋಜನೆ, ವರ್ಗಾವಣೆ, ಕಾರ್ಯಭಾರ ಕಡಿತದಿಂದ ಹೊರಗುಳಿದ ಅತಿಥಿ ಉಪನ್ಯಾಸಕರನ್ನ ರಾಜ್ಯದ ಯಾವುದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇವಾ ಜ್ಯೇಷ್ಠತೆಯಆಧಾರದ ಮೇಲೆ ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಪಿ.ಸಿ. ಸಿದ್ದಮ್ಮ ಮಾತನಾಡಿ, ರಾಜ್ಯ ಸರ್ಕಾರ ಮಹಿಳಾ ಅತಿಥಿ ಉಪನ್ಯಾಸಕರ ಬಗ್ಗೆ ಗಮನ ಹರಿಸಬೇಕು. ಹೆರಿಗೆಗಾಗಿ ರಜೆ ತೆಗೆದುಕೊಂಡಲ್ಲಿ ಗೌರವಧನ ಕಡಿತ ಮಾಡಲಾಗುತ್ತದೆ. ಮಹಿಳಾ ಅತಿಥಿಉಪನ್ಯಾಸಕರಿಗೆ 6 ತಿಂಗಳ ಪ್ರಸೂತಿ ರಜೆ, ಆರೋಗ್ಯ ವಿಮೆ, ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಿಕೊಡಬೇಕುಎಂದು ಒತ್ತಾಯಿಸಿದರು. ಸಮಿತಿ ಜಿಲ್ಲಾ ಅಧ್ಯಕ್ಷಡಾ|ಜಿ.ಟಿ. ಮಲ್ಲಿಕಾರ್ಜುನ್, ಎಚ್. ನಿಂಗಪ್ಪ,ಎ.ಆರ್. ಸತೀಶ್, ಎಂ.ಕೆ. ಶೀತಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.