Advertisement

ಜಿ+3 ಮಾದರಿಯ ವಸತಿ ಸಂಕೀರ್ಣ: ಜಿಲ್ಲಾಧಿಕಾರಿ

10:10 AM Oct 14, 2018 | |

ಉಳ್ಳಾಲ: ಕಡಲ್ಕೊರೆತ ಸಂತ್ರಸ್ತರಿಗೆ ಶಾಶ್ವತ ಪರಿಹಾರವಾಗಿ ಆರು ತಿಂಗಳೊಳಗೆ ಎರಡು ಬೆಡ್‌ ರೂಂಗಳ ಜಿ+3 ಮಾದರಿಯ ವಸತಿ ಸಂಕೀರ್ಣ ನಿರ್ಮಿಸಿ ಕೊಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

Advertisement

ಶನಿವಾರ ಚಂಡಮಾರುತದಿಂದ ಹಾನಿಗೊಳಗಾದ ಕಿಲೆರಿಯಾನಗರ, ಉಚ್ಚಿಲ ಸಮುದ್ರ ತೀರದ ಪ್ರದೇಶಗಳಿಗೆ ಭೇಟಿ ನೀಡಿದರು.ಸಂತ್ರಸ್ತ ಹಲವು ಕುಟುಂಬದ ಪಟ್ಟಿಯನ್ನು ತಯಾರಿಸಲಾಗಿದೆ. ಅವರಿಗಾಗಿ ಜಿಲ್ಲೆಯ ಕಣ್ಣೂರು ಅಥವಾ ಒಂಭತ್ತುಕೆರೆ ಭಾಗದಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ಕೊಡುವ ಯೋಜನೆ ರೂಪಿಸಲಾಗಿದೆ. ಎರಡು ಸ್ಥಳಗಳನ್ನು  ಇಂದು ಸರ್ವೇ ಮಾಡಲಾಗಿದೆ.  ಜೂನ್‌ ತಿಂಗಳ ಒಳಗೆ ಮನೆ ಹಸ್ತಾಂತರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲಿಯವರೆಗೂ  ತಾಳ್ಮೆಯಿಂದ, ಅಪಾಯಕಾರಿ ಸ್ಥಳದಿಂದ ಹೊರಗೆ ಇರುವಂತೆ ಸೂಚಿಸಿದರು. ಉಳಿದಂತೆ ಸಮುದ್ರ ತೀರದಲ್ಲಿ ನಡೆಯುತ್ತಿರುವ ಬಮ್ಸ್‌ì ಮತ್ತು ರೀಫ್‌ ಅಳವಡಿಸುವ ಕಾಮಗಾರಿ ಮುಂದುವರಿಯಲಿದೆ ಎಂದರು.
ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅ. 11ರಂದು ಮಂಗಳೂರು ವಿಧಾನಸಭಾ ಕ್ಷೇತ್ರ ಜೆಡಿಎಸ್‌ ಮುಖಂಡರು ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಬಿ.ಎಂ. ಫಾರೂಕ್‌ ನೇತೃತ್ವದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಉಳ್ಳಾಲ ಕಡಲ್ಕೊರೆತ ಬಗ್ಗೆ ಮನವಿ ಸಲ್ಲಿಸಿ ಕೂಡಲೇ ಸಂತ್ರಸ್ತರಿಗೆ ಶಾಶ್ವತ ಪರಿಹಾರವಾಗಿ ವಸತಿಯನ್ನು ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಕೂಡಲೇ ಸ್ಪಂದಿಸಿ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಜನರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತಿದೆ ಎಂದು ಜೆಡಿಎಸ್‌ ಮುಖಂಡ ಯು.ಎಚ್‌. ಫಾರುಕ್‌ ತಿಳಿಸಿದ್ದಾರೆ.

ಜೆಡಿಎಸ್‌ ಮುಖಂಡ ನಝೀರ್‌ ಉಳ್ಳಾಲ, ಮುಸ್ತಾಫ ಎವರೆಸ್ಟ್‌, ಅಶ್ರಫ್‌ ಬಾವಾ ಕೋಡಿ,  ಹಮೀದ್‌
ಉಳ್ಳಾಲ,  ನಗರಸಭೆ ಸದಸ್ಯರುಗಳಾದ ಮಹಮ್ಮದ್‌ ಬಶೀರ್‌ ಕೈಕೋ, ಯು.ಎಂ. ಜಬ್ಟಾರ್‌, ಮಹಮ್ಮದ್‌ ಮುಕ್ಕಚ್ಚೇರಿ, ತಹಶೀಲ್ದಾರ್‌ ಗುರುಪ್ರಸಾದ್‌,  ಉಳ್ಳಾಲ ನಗರಸಭೆ ಪೌರಾಯುಕ್ತ ವಾಣಿ ವಿ. ಆಳ್ವ, ಕಂದಾಯ ನಿರೀಕ್ಷಕ ಸ್ಟೀಫನ್‌,  ಗ್ರಾಮ ಲೆಕ್ಕಿಗ ಪ್ರಮೋದ್‌ ಕುಮಾರ್‌, ಸಹಾಯಕ ನವನೀತ್‌  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next