ತರಬೇತಿಯ, ಪ್ರೊಬೆಷನರಿ ನೌಕರರ ವಜಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶನಿವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಎಂಟಿಸಿ ವ್ಯಾಪ್ತಿಯಲ್ಲಿ 55 ವರ್ಷ ಮೇಲ್ಪಟ್ಟ ನೌಕರರು ಫಿಟೆ°ಸ್ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿದ್ದು, ಎ. 12ರ ಗಡುವು ವಿಧಿಸಲಾಗಿದೆ. ಮುಂದೆ ಖಾಯಂ ನೌಕರರ ವಜಾಕ್ಕೆ ಕೈಹಾಕುವ ಸಾಧ್ಯತೆ ಇದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.
Advertisement
ಏನಿದು ತೆಲಂಗಾಣ ಮಾದರಿ?ತೆಲಂಗಾಣದಲ್ಲಿ ಸುಮಾರು 52 ದಿನ ಸಾರಿಗೆ ನೌಕರರ ಹೋರಾಟ ನಡೆದಿತ್ತು. ಅಂತಿಮವಾಗಿ ಸರಕಾರ ಏಕಕಾಲದಲ್ಲಿ ಸಾವಿರಾರು ಸಾರಿಗೆ ನೌಕರರನ್ನು ವಜಾಗೊಳಿಸಿತು. ಕೊನೆಗೆ ನೌಕರರೇ ಸಂಧಾನಕ್ಕೆ ಬಂದು, ಕರ್ತವ್ಯಕ್ಕೆ ಹಾಜರಾದರು. ಆದರೆ ಬೇಡಿಕೆಗಳು ಈಡೇರಲಿಲ್ಲ.
ಕೆಎಸ್ಸಾರ್ಟಿಸಿ ಪದವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಇಂಥ ಕ್ರಮಕ್ಕೆ ಅವಕಾಶ ಇದೆ. ನೌಕರರ ಕೂಟದ ಹಠಮಾರಿ ಧೋರಣೆ ಮುಂದುವರಿದರೆ, ಖಾಯಂ ನೌಕರರ ವಜಾ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ “ಉದಯವಾಣಿ’ಗೆ ತಿಳಿಸಿದ್ದಾರೆ. ನೌಕರರು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ರಾಜ್ಯ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
Related Articles
ಕೆಎಸ್ಸಾರ್ಟಿಸಿ ವ್ಯಾಪ್ತಿಯಲ್ಲಿ ಮತ್ತೆ 88 ನೌಕರರನ್ನು ವರ್ಗಾಯಿಸಲಾಗಿದೆ. ಬಿಎಂಟಿಸಿಯಲ್ಲಿ ಶನಿವಾರ 118 ನೌಕರರನ್ನು ವಜಾಗೊಳಿಸಲಾಗಿದೆ. ವಜಾ ಗೊಂಡವರ ಒಟ್ಟು ಸಂಖ್ಯೆ 334ಕ್ಕೆ ಏರಿದೆ.
Advertisement