Advertisement

ಅತಿಥಿ ಉಪನ್ಯಾಸಕರ ಕಾಯಂಗೆ ಆಗ್ರಹ

10:52 AM Dec 25, 2021 | Team Udayavani |

ಅಫಜಲಪುರ: ರಾಜ್ಯದಲ್ಲಿ ಸುದೀರ್ಘ‌ ವರ್ಷಗಳ ಕಾಲ ಯಾವುದೇ ಭದ್ರತೆಯಿಲ್ಲದೇ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಅಫಜಲಪುರ, ಕರಜಗಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರು ತಹಶೀಲ್ದಾರ್‌ ನಾಗಮ್ಮ ಕೆ. ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ನಂತರ ಅಫಜಲಪುರ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಡಾ| ಸಂಗಣ್ಣ ಸಿಂಗೆ, ಡಾ| ಸುರೇಖಾ ಮಾತನಾಡಿ, ರಾಜ್ಯದ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಜೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಕನಿಷ್ಟ ವೇತನ ಪಡೆದು ಸೇವೆಸಲ್ಲಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕರಜಗಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ| ಗುಂಡಪ್ಪ ಸಿಂಗೆ ಮಾತನಾಡಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರು ಸರ್ಕಾರಗಳು ನೀಡುತ್ತಿರುವ ಭರವಸೆಗಳನ್ನು ನಂಬಿಕೊಂಡು ಹಲವು ವರ್ಷಗಳಿಂದ ಯಾವುದೇ ಭದ್ರತೆಯಿಲ್ಲದೆ ಸೇವೆಸಲ್ಲಿಸುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಈ ಹಿಂದೆ ಶಿಕ್ಷಣ ಸಚಿವ ಗೋವಿಂದೇಗೌಡ ಕೈಗೊಂಡ ಐತಿಹಾಸಿಕ ಕ್ರಮವನ್ನು ತಾವು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ತಾಲೂಕು ಅತಿಥಿ ಉಪನ್ಯಾಸಕ ಸಂಘದ ಅದ್ಯಕ್ಷ ವೈಜನಾಥ ಭಾವಿ ತಹಶೀಲ್ದಾರ್‌ ನಾಗಮ್ಮ ಕೆ.ಗೆ ಮನವಿ ಪತ್ರ ಸಲ್ಲಿಸಿದರು. ಅತಿಥಿ ಉಪನ್ಯಾಸಕರಾದ ಬಾಬುರಾವ್‌ ಮಲ್ಲೇಶಿ, ಗೌರಿಶಂಕರ ಬೂರೆ, ಸುರೇಶ ಮುಗಳಿ, ಪ್ರೇಮಲತಾ ಕಲ್ಲೂರ, ಅಭೀಷೇಕ ಸಂಗೊಳ್ಳಿ, ಅಮೋಘಸಿದ್ಧ ಪೂಜಾರಿ, ಪವನಕುಮಾರ ನೈಕೊಡಿ, ಗೌತಮ ಸಕ್ಕರಗಿ, ಸಂತೋಷ ಡಾಂಗೆ, ಭೀಮಶಾಗೌಡ, ಚಂದ್ರಕಾಂತ ಚವಾಣ, ಬಜರಂಗ ಶಂಕರ, ಸಂದೀಪ ಪಾರಗೊಂಡ, ಬಸವರಾಜೇಶ್ವರಿ, ಡಾ| ಶಾಮಲಾ, ಉತ್ತಮ ಚವಾಣ, ಕೃಷ್ಣಪ್ಪ ಸಿಂಗೆ, ಸಂತೋಷ ಬಡಿಗೇರ, ಉಮೇಶ ಎನ್‌., ಶ್ವೇತಾ ಗಜಕೋಶ, ತಳವಾರ ನಾಗೇಶ, ನಾಗಭೂಷಣ ಟಿ., ಡಾ| ರಾಜೇಶ ಆಲಮೇಲಕರ್‌, ರಮೇಶ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next