Advertisement

ಪರ್ಫ್ಯೂಮ್‌ ಫ್ರೀ

06:00 AM Jul 27, 2018 | |

ಅನೇಕರಿಗೆ ಸುಗಂಧದ್ರವ್ಯವೇ ಬ್ಯೂಟಿಯ ಬಂಡವಾಳ. ಪರ್ಫ್ಯೂಮ್‌ ಪೂಸಿಕೊಳ್ಳದೇ, ಹೊರಗೆ ಕಾಲೇ ಇಡುವುದಿಲ್ಲ. ಹೋದಲ್ಲಿ, ಬಂದಲ್ಲಿ ನಮ್ಮದೇ ಹವಾ ಎನ್ನುವಂತೆ, ತಮ್ಮ ಓಡಾಟಕ್ಕೊಂದು ಸಿಗ್ನೇಚರ್‌ ರೀತಿ ಪರ್ಫ್ಯೂಮ್‌ ಅನ್ನು ಬಳಸುವ “ಬಳ್ಳಿ’ಗಳೇ ಎಲ್ಲೆಡೆ ಕಾಣಸಿಗುತ್ತಾರೆ. ಒಮ್ಮೆ ಸುಳಿದಾಡಿದರೆ ಸಾಕು; ಪಕ್ಕದಲ್ಲಿದ್ದವರ ತಲೆ “ಗಿರ್ರೆ’ನ್ನುವಂತೆ ಮಾಡುವ ಈ ಸುಗಂಧದ್ರವ್ಯಗಳ ಮೋಹಕ ಪರಿಮಳವೂ ಅನೇಕ ಸಲ ಕಿರಿಕಿರಿ ಸೃಷ್ಟಿಸುವುದಿದೆ. ಆ ಪರ್ಫ್ಯೂಮ್‌, ತಮ್ಮ ಚರ್ಮಕ್ಕೆ ಎಷ್ಟೆಲ್ಲ ಹಾನಿ ಮಾಡುತ್ತಿದೆ ಎನ್ನುವ ಸಂಗತಿಯನ್ನೂ ಮರೆತು, ಅವರು ಮಿಂಚುತ್ತಿರುತ್ತಾರೆ. ಅಷ್ಟಕ್ಕೂ, ಲಲನೆಯರಿಗೆ ಘಮ್ಮೆನ್ನಲು ಪರ್ಫ್ಯೂಮೇ ಬೇಕಂತಲೂ ಇಲ್ಲ. “ಪರ್ಫ್ಯೂಮ್‌ ಫ್ರೀ’ ಎನ್ನುವ ಪರಿಕಲ್ಪನೆಯಲ್ಲೂ ಮಿಂಚಬಹುದು ಎಂಬುದು ನಿಮಗೆ ಗೊತ್ತೇ? ಪಪ್ಯೂìಮ್‌ ಪೂಸಿಕೊಂಡರೆ ಹೆಚ್ಚೆಂದರೆ, ನಾಲ್ಕೈದು ತಾಸು ಮಾತ್ರ ಅದರ ಪರಿಮಳವಷ್ಟೇ. ಆದರೆ, ಅದನ್ನು ಪೂಸಿಕೊಳ್ಳದೆಯೂ ದಿನಪೂರ್ತಿ ಪರಿಮಳಯುಕ್ತವಾಗಿರಬಹುದು. ಅದು ಹೇಗೆ ಗೊತ್ತೇ?

Advertisement

ಸೋಪ್‌ ಮತ್ತು ಗುಲಾಬಿ ದಳ
ಸ್ನಾನಕ್ಕೆ 30 ನಿಮಿಷ ಮೊದಲು ನೀರಿನಲ್ಲಿ ಗುಲಾಬಿ ದಳಗಳನ್ನು ನೆನೆಹಾಕಿ, ನಂತರ ಆ ನೀರಿನಿಂದ ಸ್ನಾನ ಮಾಡಿ. ಮಾಮೂಲಿ ಮೈಸೋಪ್‌ಗಿಂತ, ಗಾಢ ಪರಿಮಳಯುಕ್ತ ಸೋಪ್‌ ಅನ್ನು ಬಳಸಿ. ಇವೆರಡರ ಕಾಂಬಿನೇಷನ್‌ ನಿಮ್ಮ  ದೇಹವನ್ನು ಹೆಚ್ಚು ಹೊತ್ತು ಸುಗಂಧದಲ್ಲಿ ಮೀಯುವಂತೆ ಮಾಡುತ್ತದೆ.

ಲೋಶನ್‌ ಅಥವಾ ಮಾಯಿಶ್ಚರೈಸರ್‌
ಲೋಶನ್‌ ಇಲ್ಲವೇ ಮಾಯಿಶ್ಚರೈಸರ್‌ ಕೂಡ ಸುಗಂಧದ್ರವ್ಯಕ್ಕೆ ಪರ್ಯಾಯ ವಸ್ತುಗಳೇ ಆಗಿವೆ. ಆದರೆ, ಹಾಗೆ ಪರಿಮಳ ನೀಡುವ ಎಲ್ಲ ಲೋಶನ್‌ಗಳೂ ನಿಮ್ಮ ಚರ್ಮಕ್ಕೆ ಆಗಿಬರುತ್ತವೆ ಎಂದು ಹೇಳಲಾಗದು. ನಿಮ್ಮ ಚರ್ಮದ ಗುಣಕ್ಕೆ ಹೊಂದಿಕೊಳ್ಳುವಂಥ ಪರಿಮಳಯುಕ್ತ ಲೋಶನ್‌ಗೆ ಆದ್ಯತೆ ನೀಡಿ.

ನೈಲ್‌ ಪಾಲಿಶ್‌
 ಕೈಬೆರಳಲ್ಲೂ ಹೂವಿನ ಪರಿಮಳವನ್ನು ಹುದುಗಿಸಬಹುದು. ಇಂಥ ಪರಿಮಳದ ಮ್ಯಾಜಿಕ್‌ ಅನ್ನು ಸೃಷ್ಟಿಸಬಲ್ಲಂಥ ಸುಗಂಧಯುಕ್ತ ನೈಲ್‌ಪಾಲಿಶ್‌ಗಳು ಈಗ ಟ್ರೆಂಡ್‌ ಆಗಿವೆ. ಮೈಗೆ ಸುಗಂಧ ಪೂಸಿಕೊಂಡಂತೆ ಅನುಮಾನ ಹುಟ್ಟಿಸಬಲ್ಲ ಇವು 20ಕ್ಕೂ ಅಧಿಕ ಪರಿಮಳಗಳಲ್ಲಿ ಲಭ್ಯ.

ಟೋನರ್‌ಗಳು
 ಟೋನರ್‌ಗಳನ್ನು ಮುಖಕ್ಕೆ ಮಾತ್ರವೇ ಹಚ್ಚಿಕೊಳ್ಳಬಹುದಾ ದರೂ, ಪರ್ಫ್ಯೂಮ್‌ಗಿಂತ ಇವು ಉತ್ತಮ. ಇವುಗಳ ಪರಿಮಳವು ಮೂಗಿಗೆ ರಾಚುವುದೂ ಇಲ್ಲ. ನಿತ್ಯವೂ ಕಚೇರಿಯಲ್ಲಿ ದುಡಿಯುವವರು, ದಿನಕ್ಕೊಂದು ಟೋನರ್‌ಗಳನ್ನು ಹಚ್ಚಿಕೊಂಡು ಸಂಭ್ರಮಿಸಬಹುದು. ಈಗ ಬಗೆಬಗೆಯ ಟೋನರ್‌ಗಳೂ ಮಾರುಕಟ್ಟೆಯಲ್ಲಿವೆ.

Advertisement

ಹೇರ್‌ಸ್ಪ್ರೇ 
 ಶ್ಯಾಂಪೂ ಇಲ್ಲವೇ ಕಂಡೀಶನರ್‌ಗಳನ್ನೂ ಪರ್ಫ್ಯೂಮ್‌ ಬದಲಿಗೆ ಬಳಸಬಹುದು. ಆದರೆ, ಇವನ್ನು ನಿತ್ಯವೂ ಬಳಸಲಾಗುವುದಿಲ್ಲ ಎಂಬುದೇ ಒಂದು ಚಿಂತೆ. ಇವುಗಳ ಬದಲಿಗೆ ತಲೆಕೂದಲಿಗೆ ಪರಿಮಳಯುಕ್ತ ಹೇರ್‌ಸ್ಪ್ರೆàಗಳನ್ನು ಉಪಯೋಗಿಸಬಹುದು. ಇವುಗಳ ಪರಿಮಳವು ಅತ್ಯಂತ ಮಧುರ.

Advertisement

Udayavani is now on Telegram. Click here to join our channel and stay updated with the latest news.

Next