Advertisement

23ರಿಂದ ವಿಬಿಜೆ ಆಭರಣ ಸಂಗ್ರಹಗಳ ಪ್ರದರ್ಶನ

12:06 PM Jan 17, 2018 | Team Udayavani |

ಬೆಂಗಳೂರು: ಪಾರಂಪರಿಕ ಆಭರಣಗಳ ಜನಪ್ರಿಯ ಬ್ರಾಂಡ್‌ ಆಗಿರುವ ವುಮ್ಮುದಿ ಬಂಗಾರು ಜ್ಯುವೆಲರ್ (ವಿಬಿಜೆ) ಇದೇ ಜ.23 ಮತ್ತು 24ರಂದು ತನ್ನ ವಿಶಿಷ್ಟ ಆಭರಣ ಸಂಗ್ರಹಗಳ ಪ್ರದರ್ಶನ ಹಮ್ಮಿಕೊಂಡಿದೆ.

Advertisement

ನಗರದ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಪ್ರದರ್ಶನ ನಡೆಯಲಿದ್ದು, ನಿತ್ಯ ಬಳಕೆ ಆಭರಣಗಳು, ವಿವಾಹ ಮತ್ತಿತರ ಸಂದರ್ಭಗಳಲ್ಲಿ ಧರಿಸಬಹುದಾದ ವಿಶೇಷ ವಿನ್ಯಾಸದ ಆಭರಗಳ ಶ್ರೇಷ್ಠ ಸಂಗ್ರಹಗಳನ್ನು ಬೆಂಗಳೂರಿನ ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ವಿಬಿಜೆ ಸಂಸ್ಥೆಯ ದಲಿಯಾ, ಕಿರಿಗಾಮಿ ಮತ್ತು ನವರತ್ನ ಆಭರಣಗಳ ಸಂಗ್ರಹಗಳು ಪ್ರದರ್ಶನದಲ್ಲಿ ಗಮನಸೆಳೆಯಲಿವೆ ಎಂದು ವಿಬಿಜೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next