Advertisement

ನಗರದಲ್ಲಿ ಪ್ರಪಂಚದ ವಿಸ್ಮಯಗಳ ಪ್ರದರ್ಶನ

11:18 AM Aug 20, 2017 | |

ಬೆಂಗಳೂರು: ವಿವಿಧ ವಿನ್ಯಾಸದ 8 ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆಗಳು, ಮೈಸೂರು ಅರಸರ ವಂಶ ಇತಿಹಾಸ ಹಾಗೂ ದಸರಾ ವೈಶಿಷ್ಟತೆ, ಬ್ರಿಟಿಷ್‌ ಆಳ್ವಿಕೆಯ ಭಾರತದಲ್ಲಿ ಚಲಾವಣೆಯಲ್ಲಿದ್ದ ಕರೆನ್ಸಿ ಸೇರಿದಂತೆ ಹತ್ತಾರು ವಿಸ್ಮಯ ಅಂಶಗಳನ್ನು ಒಳಗೊಂಡಿರುವ “ವಿಸ್ಮಯ ಪ್ರಪಂಚ’ ವಸ್ತು ಪ್ರದರ್ಶನ ರಾಜಧಾನಿಯಲ್ಲಿ ಪ್ರಾರಂಭಗೊಂಡಿದೆ. 

Advertisement

ಜೆ.ದಶರಥ ಸಿಂಗ್‌ ಅವರು ಸಂಗ್ರಹಿಸಿರುವ ವಿನೂತನ ಹಾಗೂ ವೈವಿಧ್ಯಮಯ ವಸ್ತುಗಳ ಪ್ರದರ್ಶನ ಆರ್‌.ಟಿ.ನಗರದ ತರಳಬಾಳು ಕೇಂದ್ರದಲ್ಲಿ  ಆರಂಭಗೊಂಡಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶನಿವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿಸ್ಮಯ ಪ್ರಪಂಚ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ದೇಶ ಸುತ್ತಿ, ಕೋಶ ಓದುವುದರಿಂದ ಪರಿಪೂರ್ಣತೆ ಪಡೆಯುತ್ತೇವೆ.

ಈ ವಿಸ್ಮಯ ಪ್ರಪಂಚದಲ್ಲಿ ಪ್ರಾಚೀನತೆಯಿಂದ ಹಿಡದು, ಆಧುನಿಕ ಪ್ರಪಂಚದ ವರೆಗೂ ಬಹುತೇಕ ಎಲ್ಲ ಘಟನಾವಳಿಗಳನ್ನು ಸಂಗ್ರಹಿಸಲಾಗಿದೆ. ಧಾನ್ಯ, ಆಧಾತ್ಮಕ ಮಾಡುವುದರಿಂದ ಏಕಾಗ್ರತೆ ಸಿಗುವಂತೆ ಜಗತ್ತಿನ ಹೊಸ ಆವಿಷ್ಕಾರ, ವೈಜ್ಞಾನಿಕ ಬದಲಾವಣೆಗಳನ್ನು ಈ ಪ್ರದರ್ಶನ ಮೂಲಕವೇ ತಿಳಿದುಕೊಳ್ಳಬಹುದು ಎಂದರು.

ವಿಸ್ಮಯ ಪ್ರಪಂಚದಲ್ಲಿ ಏನಿದೆ?: ವಿವಿಧ ಮಾದರಿಯ 8 ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆ, ಪ್ರಾಚೀನ ಕಾಲದ ಕತ್ತಿ, ಖಡ್ಗ, ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು, ಸಿಗರೇಟ್‌ಪೆಟ್ಟಿಗೆ, ಪಿಂಗಾಣಿ ಗೊಂಬೆಗಳು, ಮೊದಲ ಮಹಾಚುನಾವಣೆಯಲ್ಲಿ ಬಳಿಸಿದ ಮತ ಪೆಟ್ಟಿಗೆ, ಪುರಾತನ ಕಾಲದ ಟಾರ್ಚು, ಹಿತ್ತಾಳೆ ತಕ್ಕಡಿ ಮೊದಲಾದ ವಸ್ತುಗಳು ಆಕರ್ಷಣೀಯವಾಗಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ ಆಯ್ಕೆಯ ಮಾಹಿತಿ, ಇಂದಿರಾಗಾಂಧಿ, ವಾಜಪೇಯಿ, ದೇವೇಗೌಡ, ಲಾಲ ಬಹದ್ಧೂರ್‌ ಶಾಸಿŒ, ರಾಜೀವ್‌ ಗಾಂಧಿ, ಮೊರಾರ್ಜಿ ದೇಸಾಯಿ, ಲಾಲು ಪ್ರಸಾದ್‌ ಯಾದವ್‌, ಸಂಜಯ ಗಾಂಧಿ ಸೇರಿದಂತೆ ಭಾತರದ ನಾಯಕರ ಅಪರೂಪದ ಚಿತ್ರಗಳು, ಕರ್ನಾಟಕದ ಮುಖ್ಯಮಂತ್ರಿಗಳ, ಜ್ಞಾನಪೀಠ ಪ್ರಶಸ್ತಿ ವಿಜೇತರ ಮಾಹಿತಿ ಸಂಗ್ರಹ ಇಲ್ಲಿದೆ.

Advertisement

ಪ್ರಪಂಚದಲ್ಲಿ ಮೊದಲು ಕಂಡು ಹಿಡಿದ ಉಪಕರಣಗಳಾದ ರೇಡಿಯೋ, ಫೋನ್‌, ಕಂಪ್ಯೂಟರ್‌, ಮೋಟರ್‌ ಸೈಕಲ್‌, ಬೈಸೈಕಲ್‌, ಟಿ.ವಿ., ಮೊಬೈಲ್‌ ಜತೆಗೆ  ವಿಶ್ವದ ಮೊದಲ ರಸ್ತೆ ಅಪಘಾತದ ಚಿತ್ರಗಳು,  ಬ್ರಿಟಿಷ್‌ ಆಳ್ವಿಕೆಯ ಭಾರತದಲ್ಲಿ ಚಾಲ್ತಿಯಲ್ಲಿದ್ದ ಕರೆನ್ಸಿಗಳು, ದೇಶ ವಿದೇಶದ ನೋಟು, ನಾಣ್ಯಗಳು,  ವಿವಿಧ ಪತ್ರಿಕೆಯಲ್ಲಿ ಬಂದಿರುವ ವಿಸ್ಮಯಕಾರಿ ಘಟನೆಗಳ ಸಂಗ್ರಹ, ಮಾನವನ ಅಪೂರ್ವ ಸಂತತಿಗಳಾದ ಅಜ್ಜನಂತಿರುವ ನವಜಾತ ಶಿಶು,

ಅಲ್ಪಾಯುಷಿ ಮತ್ಸ್ಯ ಶಿಶು, ನಾನಾ ಪ್ರಭೇದದ ಪ್ರಾಣಿ, ಪಕ್ಷಿಗಳು, ಸಸ್ತನಿ, ಪ್ರಾಣಿಗಳ ವೈವಿದ್ಯತೆ, ವಿವಿಧ ಹಣ್ಣುಗಳ ಸಮಗ್ರ ಚಿತ್ರಣ ಸೇರಿದಂತೆ ಪತ್ರಿಕೆಯಲ್ಲಿ ಬಂದಿರುವ ವಿವಿಧ ವಿಸ್ಮಯಕಾರಿ ಮಾಹಿತಿಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ರಿಂದ ಸಂಜೆ 7ರ ತನಕ ಆಗಸ್ಟ್‌ 21ರವರೆಗೂ ಪ್ರದರ್ಶನ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next