Advertisement
ಐಎಲ್‌ಐ, ಸಾರಿ ಪ್ರಕರಣಗಳಿಗೆ ಸಂಬಂಧಿಸಿ ಮನೆ ಮನೆ ಸಮೀಕ್ಷೆ ಕುರಿತು ಕಂದಾಯ, ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ತಾಪಂ ಸಭಾಂಗಣದಲ್ಲಿಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಮೀಕ್ಷೆ ವೇಳೆ ಯಾವುದೇ ಮನೆ ಅಥವಾ ಮನೆಯ ಸದಸ್ಯ ಸಮೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಬೇಕು. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಹಾಗೂ ನಗರಸಭೆಯ ಆರೋಗ್ಯ ನಿರೀಕ್ಷಕರು ಸರ್ವೇಯಲ್ಲಿ ಭಾಗವಹಿಸಲಿದ್ದಾರೆ. ನಗರದಲ್ಲಿ ಒಟ್ಟು 36 ವಾರ್ಡ್‌ಗಳಿದ್ದು, 27,609 ಮನೆಗಳಿವೆ. 1,61,161 ಜನಸಂಖ್ಯೆ ಇದೆ. ಈ ಸಮೀಕ್ಷಾ ಕಾರ್ಯಕ್ಕೆ ಮೂರು ಇಲಾಖೆಗಳಿಂದ ತಲಾ 35
ಸಿಬ್ಬಂದಿಯಂತೆ ಒಟ್ಟು 105 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮೂರು ಜನ ತಂಡ ಮಾಡಿಕೊಂಡು ಸಮೀಕ್ಷೆ ಕಾರ್ಯ ನಡೆಸಬೇಕೆಂದು ಸೂಚಿಸಿದರು.
ಒಳಗಾಗಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮೂರು ಇಲಾಖೆಗಳಿಂದ ತಲಾ ಒಬ್ಬೊಬ್ಬರಂತೆ ಮೂರು ಜನರ ತಂಡ ಮಾಡಿ ಸರ್ವೆ ಕಾರ್ಯ ನಡೆಸಲಾಗುವುದು. ಪ್ರತಿ ಮೂರು ಜನರ ತಂಡ ಪ್ರತಿದಿನ 90 ಮನೆಗಳ ಸರ್ವೇ ಮಾಡಬೇಕು
ಎಂದು ತಿಳಿಸಿದರು. ಸರ್ವೇ ಮಾಡುವ ಮನೆಯ ಸದಸ್ಯರ ದೇಹದ ಉಷ್ಣಾಂಶವನ್ನು ಪರಿಶೀಲಿಸಬೇಕು. 38 ಡಿಗ್ರಿಗಿಂತ ಅಧಿಕ ಇದ್ದರೆ ಅದನ್ನು ಜ್ವರ ಎಂದು ಪರಿಗಣಿಸಬೇಕು. ಹತ್ತು ದಿನಗಳಿಂದ ಕೆಮ್ಮು,
ನೆಗಡಿ ಇದ್ದಲ್ಲಿ ಅಂತಹ ಸದಸ್ಯರ ಹೆಸರುಗಳನ್ನು ಐಎಲ್‌ಐ ಪ್ರಕರಣಗಳೆಂದು ನಮೂದಿಸಬೇಕು. ಇದಕ್ಕಿಂತ ತೀವ್ರ ಪ್ರಮಾಣದ ಜ್ವರ, ಶೀತ, ಕೆಮ್ಮು ಇದ್ದಲ್ಲಿ ಅದನ್ನು ಸಾರಿ (ಎಸ್‌ಎಆರ್‌ಐ) ಎಂದು ಪರಿಗಣಿಸಬೇಕು. ಅಂತಹ ವ್ಯಕ್ತಿಗಳಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಬೇಕು ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆಯ
ಶರಣಬಸವೇಶ್ವರ, ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಮತ್ತಿತರರು ಇದ್ದರು.