Advertisement

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ: ಹರಿಶೇಖರನ್‌

04:30 PM Feb 23, 2021 | Team Udayavani |

ಧಾರವಾಡ: ಪೊಲೀಸ್‌ ಪ್ರಶಿಕ್ಷಣಾರ್ಥಿಗಳುತರಬೇತಿ ನಂತರದ ತಮ್ಮ ಸೇವಾವಧಿಯಲ್ಲಿ ವೃತ್ತಿಗೆ ಪೂರ್ವದಲ್ಲಿ ಸ್ವೀಕರಿಸಿದ ಪ್ರತಿಜ್ಞೆಗೆ ಬದ್ಧರಾಗಿ ಮತ್ತು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಪೊಲೀಸ್‌ ಇಲಾಖೆ ತರಬೇತಿ ವಿಭಾಗದ ಪೊಲೀಸ್‌ ಮಹಾನಿರೀಕ್ಷಕ ಪಿ. ಹರಿಶೇಖರನ್‌ ಹೇಳಿದರು.

Advertisement

ಇಲ್ಲಿನ ಪೊಲೀಸ್‌ ತರಬೇತಿ ಶಾಲೆಯಲ್ಲಿ 6ನೇ ತಂಡದ ಪ್ರಶಿಕ್ಷಣಾರ್ಥಿ ನಾಗರಿಕ ಪೊಲೀಸ್‌ ಪೇದೆಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಇಲಾಖೆಕಾರ್ಯಕ್ರಮ, ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಜನರ ಸಹಭಾಗಿತ್ವ, ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿಕಾರ್ಯ ನಿರ್ವಹಿಸಬಹುದು. ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಗ್ರಾಮವಾಸ್ತವ್ಯದಲ್ಲಿಪಾಲ್ಗೊಂಡು ಜನರಿಗೆ ಸುರಕ್ಷತೆ, ಶಾಂತಿ,ಸುವ್ಯವಸ್ಥೆ ಭಾವನೆ ಮೂಡಿಸಿ ಅವರು ಸಹಭಾಗಿತ್ವ ನೀಡುವಂತೆ ಪ್ರೇರೇಪಿಸಬೇಕು ಎಂದರು.

ಪ್ರಶಿಕ್ಷಣಾರ್ಥಿಗಳು ಉತ್ತಮವಾಗಿ ಪಥಸಂಚಲನ ಪ್ರದರ್ಶಿಸಿದ್ದಕ್ಕೆ ಪ್ರಶಿಕ್ಷಣಾರ್ಥಿಗಳ ತರಬೇತಿದಾರರಿಗೆ 10,000ರೂ. ಬಹುಮಾನ ಘೋಷಿಸಿದರು.ಹು-ಧಾ ಪೊಲೀಸ್‌ ಆಯುಕ್ತ ಲಾಬುರಾಮ್‌, ಎಸ್ಪಿ ಪಿ. ಕೃಷ್ಣಕಾಂತ, ರಾಜ್ಯದ ವಿವಿಧ ಪೊಲೀಸ್‌ ತರಬೇತಿಶಾಲೆಗಳ ಪ್ರಾಂಶುಪಾಲರು, ಅಧಿಕಾರಿಗಳುಪಾಲ್ಗೊಂಡಿದ್ದರು. ಪೊಲೀಸ್‌ ತರಬೇತಿಶಾಲೆಯ ಪ್ರಾಂಶುಪಾಲ ಎನ್‌.ಬಿ. ಜಾಧವ ಸ್ವಾಗತಿಸಿ, ವರದಿ ವಾಚನ ಮಾಡಿದರು.

ಪಥಸಂಚಲನದಲ್ಲಿ ವಿವಿಧ ತಂಡಗಳ ನೇತೃತ್ವವನ್ನು ಪ್ರಶಿಕ್ಷಣಾರ್ಥಿಗಳಾದ ಪಂಚಾಕ್ಷರಿಸಿದ್ದನಗೌಡ ಪಾಟೀಲ, ಶಬ್ಬೀರ ಎಂ, ಪ್ರದೀಪ ಕೆ., ಮಧುಚಂದ್ರ ಧಾರವಾಡ, ನಾಗರಾಜ ಕೆ. ಬರಡಿ, ನಾಗೇಂದ್ರಕುಮಾರ ಎನ್‌., ಯಲ್ಲಪ್ಪ ತೋಳಮಟ್ಟ, ಆನಂದ ವಿ.ವಿ.,ಆಕರ್ಷ ಎಂ.ಎಸ್‌., ಮಾರ್ತಾ.ಡಪ್ಪ, ಮಾಟ್ನರ್‌ ಅನಿಲಕುಮಾರ, ಪರಶಿವಮೂರ್ತಿಬಿ. ವಹಿಸಿದ್ದರು. ಎನ್‌.ಎ. ಮುತ್ತಣ್ಣ ಸ್ಮಾರಕ ಪೊಲೀಸ್‌ ಮಕ್ಕಳ ವಸತಿ ಶಾಲೆಯ ಪ್ರಾಚಾರ್ಯ ಡಾ| ವೈ.ಪಿ. ಕಲ್ಲನಗೌಡರ ನಿರೂಪಿಸಿದರು. ಪೊಲೀಸ್‌ ಇನ್ಸ್‌ಪೆಕ್ಟರ್‌ ಡಾ| ಗಿರೀಶ ಭೋಜನ್ನವರ ವಂದಿಸಿದರು.

341 ಪ್ರಶಿಕ್ಷಣಾರ್ಥಿಗಳು :

Advertisement

ನಾಗರಿಕ ಪೊಲೀಸ್‌ ಪೇದೆಗಳ ನಿರ್ಗಮನ ಪಥ ಸಂಚಲನದಲ್ಲಿ 341 ಪ್ರಶಿಕ್ಷಣಾರ್ಥಿಗಳಿದ್ದರು. ಪರೇಡ್‌ ಕಮಾಂಡರ್‌ ರಂಜಿತಕುಮಾರ ಹಾಗೂ ನವೀನಕುಮಾರ ಚವ್ಹಾಣ ನೇತೃತ್ವದಲ್ಲಿ ಅತಿಥಿಗಳಿಗೆ ವಿವಿಧ ತಂಡಗಳಿಂದ ಗೌರವ ಸಲ್ಲಿಸಲಾಯಿತು. ಒಳಾಂಗಣ ವಿಭಾಗದಲ್ಲಿ ಪರಶಿವಮೂರ್ತಿ ಬಿ.,ವೀರೇಂದ್ರ ಶಿಪರಮಟ್ಟಿ, ಆನಂದ ಬಹುಮಾನ ಪಡೆದರು. ಹೊರಾಂಗಣ ವಿಭಾಗದಲ್ಲಿ ರಂಜಿತಕುಮಾರ, ದಸ್ತಗೀರ, ನರಸಪ್ಪ ಬಹುಮಾನ ಪಡೆದರು.ಫೈರಿಂಗ್‌ ವಿಭಾಗದಲ್ಲಿ ಎಸ್‌. ನದಾಫ್‌, ರμàಕ್‌ ನದಾಫ್‌, ಸುರೇಶ ಜಿ., ಮೊಹಮ್ಮದ ಎಜಾಜ್‌ ಬಹುಮಾನ ಪಡೆದರು. ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ರಂಜಿತಕುಮಾರ ಬಹುಮಾನ ಪಡೆದರು.

ಅನೇಕ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಕರ್ತವ್ಯದಲ್ಲಿದ್ದಾಗ ತಮ್ಮ ಜವಾಬ್ದಾರಿ, ಅಧಿಕಾರಗಳು ಅರ್ಥವಾಗುವುದಿಲ್ಲ. ಹಲವಾರು ರೀತಿಯ ಸವಾಲುಗಳಿದ್ದರೂ ಅಪ್ರಮುಖವಾದವುಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಲಾಖೆಯ ಆಶಯ, ಉದ್ದೇಶಗಳಿಗೆ ಆದ್ಯತೆ ನೀಡಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ಪಿ. ಹರಿಶೇಖರನ್‌, ರಾಜ್ಯ ಪೊಲೀಸ್‌ ಇಲಾಖೆ ತರಬೇತಿ ವಿಭಾಗದ ಪೊಲೀಸ್‌ ಮಹಾನಿರೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next