Advertisement
ರಾಜ್ಯದಲ್ಲೇ ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲೆಗಳು ಎನ್ನುವ ಹೆಗ್ಗಳಿಕೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇದೆ. ನಗರ ಪ್ರದೇಶದ ಕೊಳೆ ಗೇರಿ, ಗ್ರಾಮೀಣ ಹಿಂದುಳಿದ ಭಾಗ ಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಲೋಕಶಿಕ್ಷಣ ನಿರ್ದೇ ಶನಾಲಯದಿಂದ ಹಲವು ಯೋಜನೆಗಳನ್ನು ಕಾಲಕಾಲಕ್ಕೆ ರೂಪಿಸಿ, ಅನುಷ್ಠಾನ ಮಾಡಲಾಗುತ್ತಿದೆ. ಕೊರೊನಾದಿಂದ ಸಾಕ್ಷರ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ.
Related Articles
Advertisement
ಸ್ತ್ರೀ ಶಕ್ತಿ, ಸ್ವಸಹಾಯ ಸಂಘದ ಸದಸ್ಯರಿಗೂ ಅಕ್ಷರಾಭ್ಯಾಸ ಗ್ರಾ.ಪಂ.ಗಳ ಅನಕ್ಷರಸ್ಥ ಸದಸ್ಯರಿಗೆ ಅಕ್ಷರ ಕಲಿಸುವ ಕಾರ್ಯ ಈಗಾಗಲೇ ನಡೆದಿದೆ. ಸದ್ಯ ಸ್ತ್ರೀ ಶಕ್ತಿ ಸಂಘ, ಸ್ವ-ಸಹಾಯ ಸಂಘ, ಸಹಕಾರಿ ಸಂಘಗಳ ಸದಸ್ಯರಾದ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಕಾರ್ಯ ನಡೆಯುತ್ತಿದೆ. ನಿರ್ದೇಶನಾಲಯದಿಂದ ಈ ಎಲ್ಲ ಸಂಘಗಳಿಗೂ ಸುತ್ತೋಲೆ ನೀಡಲಾಗಿದೆ. ಅನಕ್ಷರಸ್ಥ ಸದಸ್ಯರ ಮಾಹಿತಿ ನೀಡಿದಲ್ಲಿ ಅವರಿಗೆ ಅಕ್ಷರ ಕಲಿಸುವ ಪ್ರಕ್ರಿಯೆ ಅರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಾಭ್ಯಾಸದ ಕಾರ್ಯ ಮಾಡುತ್ತಿದ್ದೇವೆ. ಸದ್ಯ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಅಕ್ಷರ ಕಲಿಸುತ್ತಿದ್ದೇವೆ. ಉಭಯ ಜಿಲ್ಲೆಗಳಲ್ಲಿ ಶೇ. 90ರಷ್ಟು ಸಾಧನೆಯಾಗಿದೆ.
-ನಾಗೇಂದ್ರಪ್ಪ , ಕೆ. ಸುಧಾಕರ,
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಉಡುಪಿ, ದ.ಕ., ಜಿಲ್ಲೆ ಅನಕ್ಷರಸ್ಥರ ಮಾಹಿತಿ
ಉಡುಪಿ ಜಿಲ್ಲೆ
ಬ್ರಹ್ಮಾವರ 979
ಕುಂದಾಪುರ 3,411
ಕಾಪು 20
ಬೈಂದೂರು 2,839
ಉಡುಪಿ 70
ಕಾರ್ಕಳ 1,502
ಹೆಬ್ರಿ 0
ಒಟ್ಟು 8,821 ದ. ಕನ್ನಡ ಜಿಲ್ಲೆ
ಬಂಟ್ವಾಳ 323
ಬೆಳ್ತಂಗಡಿ 930
ಮಂಗಳೂರು 1,714
ಪುತ್ತೂರು 1,420
ಸುಳ್ಯ 660
ಒಟ್ಟು 5,047 - ರಾಜು ಖಾರ್ವಿ ಕೊಡೇರಿ