Advertisement

ಪೆಪ್ಸಿ ಬಿಟ್ಟ ಇಂದ್ರಾ ನೂಯಿ!

06:00 AM Aug 07, 2018 | Team Udayavani |

ನವದೆಹಲಿ: ತಂಪು ಪಾನೀಯ ಕಂಪನಿ ಪೆಪ್ಸಿಯಲ್ಲಿ ಕಳೆದ 12 ವರ್ಷಗಳಿಂದಲೂ ಸಿಇಒ ಆಗಿದ್ದ ಹಾಗೂ ಜಗತ್ತಿನ ಪ್ರಭಾವಿ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದ ಉಡುಪಿ ಮೂಲದ ಇಂದ್ರಾ ನೂಯಿ ಹುದ್ದೆ ತೊರೆಯಲಿದ್ದಾರೆ. ಇವರ ಬದಲಿಗೆ 54 ವರ್ಷ ರಮೋನ್‌ ಲಗ್ವಾರ್ಟಾರನ್ನು ನೇಮಕ ಮಾಡ ಲಾಗಿದೆ. ಬದಲಾದ ಮಾರು ಕಟ್ಟೆ ಹಾಗೂ ಗ್ರಾಹಕರ ಅಭಿ ರುಚಿಯಿಂದಾಗಿ ಕಂಪನಿಯ ಲಾಭಾಂಶ ಕುಸಿಯುತ್ತಿದ್ದು, ಹೂಡಿಕೆದಾರರ ಒತ್ತಡದ ಮೇರೆಗೆ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್‌ 3 ರಿಂದ ಹೊಸ ಸಿಇಒ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2019ರ ವರೆಗೂ ಇಂದ್ರಾ ಕಂಪನಿಯ ಚೇರ್ಮನ್‌ ಆಗಿ ಮುಂದುವರಿಯಲಿದ್ದಾರೆ.

Advertisement

ಭಾರತದಲ್ಲಿ ಬೆಳೆದ ನಾನು ಇಂಥದ್ದೊಂದು ಕಂಪನಿಯನ್ನು ಮುನ್ನಡೆಸುವ ಅವಕಾಶ ನನಗೆ ಒದಗಿಬರುತ್ತದೆ ಎಂದು ಎಂದೂ ಊಹಿಸಿರಲಿಲ್ಲ. ಕಂಪನಿ ಈಗ ಉತ್ತಮ ಪ್ರಗತಿ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸ ಲಿದೆ ಎಂದು ಇಂದ್ರಾ ಹೇಳಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರತಿಷ್ಠಿತ ಆಹಾರ ಮತ್ತು ಪಾನೀಯ ತಯಾರಿಕೆ ಕಂಪ ನಿಗಳು ತೀವ್ರ ಒತ್ತಡ ದಲ್ಲಿದ್ದು, ಸಣ್ಣ ಕಂಪನಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿವೆ. ಕಳೆದ ಒಂದು ವರ್ಷದಿಂದ ಹಲವು ಆಹಾರ ಮತ್ತು ಪಾನೀಯ ಕಂಪನಿಗಳು ಮುಖ್ಯಸ್ಥರು ಹುದ್ದೆ ತೊರೆದಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next