Advertisement
ಕೇರಳದಲ್ಲಿನ ವಿಪರೀತ ಮಳೆ, ಶ್ರೀಲಂಕಾದಲ್ಲಿ ಉತ್ಪಾದನೆ ಕುಸಿತ, ವಿಯೆಟ್ನಾಂನ ಬೆಳೆ ಬದಲಾವಣೆ ಧಾರಣೆ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಸದ್ಯದ ದರ ಏರಿಕೆ ಗಮನಿಸಿದರೆ ಕೆಲವು ದಿನಗಳಲ್ಲಿ ಕೆಜಿಗೆ 500 ರೂ.ಗೆ ತಲುಪುವ ಸಾಧ್ಯತೆ ಇದೆ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು.
Related Articles
Advertisement
ಬೇಡಿಕೆ ಹೆಚ್ಚಳಮುಖ್ಯವಾಗಿ ಲಾಕ್‌ಡೌನ್ ಬಳಿಕ ಕಾಳು ಮೆಣಸು ಆಧಾರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಬೇಡಿಕೆ ಹೆಚ್ಚಳಕ್ಕೆ ಪೂರಕವಾಗಿದೆ. ವಿದೇಶಗಳಿಂದಲೂ ಭಾರತದ ಕಾಳು ಮೆಣಸಿಗೆ ಬೇಡಿಕೆ ಉಂಟಾಗಿದ್ದು, ರಪು¤ ಉದ್ದೇಶಕ್ಕೂ ಮೆಣಸಿನ ಅಗತ್ಯ ಇದೆ. ದೇಶ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸು ಉತ್ಪಾದನೆ ಯಾಗುವ ರಾಜ್ಯಗಳೆಂದರೆ ಕರ್ನಾಟಕ. ಅನಂತರ ಕೇರಳ, ತಮಿಳುನಾಡು. ಕೇರಳ, ತಮಿಳುನಾಡಿನ ಮೆಣಸು ಬೆಳೆಯುವ ಪ್ರದೇಶ ಗಳಲ್ಲಿ ಮಳೆಯಿಂದಾಗಿ ಹಾನಿ ಸಂಭವಿ ಸಿದೆ. ಇಲ್ಲಿ ಮೊದಲೇ ಉತ್ಪಾದನೆ ಕಡಿಮೆ ಯಿದ್ದು, ಮಳೆಯಿಂದ ಮತ್ತಷ್ಟು ಇಳಿಮುಖ ಗೊಂಡಿದೆ. ಕರ್ನಾಟಕದಲ್ಲೂ ಮಳೆ ಕಾರಣ ದಿಂದ ಶೇ. 25ರಷ್ಟು ಬೆಳೆ ನಷ್ಟವಾಗುವ ಭೀತಿ ಇದೆ.