Advertisement

ಸಾರಿಗೆ ಸೌಕರ್ಯಕ್ಕೂ ಜನರ ಪರದಾಟ

04:20 PM Sep 01, 2017 | Team Udayavani |

ಹಿರೇವಡಗೇರಾ: ಜಿಲ್ಲಾ ಕೇಂದ್ರದಿಂದ ಅರ್ಜುಣಗಿ, ಕುಮನೂರ, ಕಂದಳ್ಳಿ, ಶಿವನೂರ ಗ್ರಾಮಗಳಿಗೆ ಸೂಕ್ತ ಬಸ್‌ ವ್ಯವಸ್ಥೆ ಇಲ್ಲದೇ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೇ ಒಂದು ಬಸ್‌: ಯಾದಗಿರಿ ಘಟಕದಿಂದ ಶಿವನೂರ ಗ್ರಾಮಕ್ಕೆ ರಾತ್ರಿ
ತಂಗುವ ಬಸ್‌ ವ್ಯವಸ್ಥೆ ಇದೆ. ಪ್ರತಿದಿನ ಈ ಬಸ್‌ ಸಂಜೆ 7:00 ಗಂಟೆಗೆ ಯಾದಗಿರಿ ಬಸ್‌ ನಿಲ್ದಾಣದಿಂದ ಬರುತ್ತಿದ್ದು, ಇದರಲ್ಲಿ ಸುಮಾರು 180ರಿಂದ 200 ಜನ ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಪ್ರತಿನಿತ್ಯ ಪ್ರಯಾಣಿಸುತ್ತಾರೆ.

Advertisement

ನಗರ ಪ್ರದೇಶಗಳಿಗೆ ಶಾಲಾ ಕಾಲೇಜಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳು ಸಕಾಲದಲ್ಲಿ ಸೂಕ್ತ ಬಸ್‌ ವ್ಯವಸ್ಥೆ ಇಲ್ಲದೆ, ಬಸ್‌ನ ಟಾಪ್‌ ಮೇಲೆ ಕುಳಿತು ತಮ್ಮ ಗ್ರಾಮಗಳಿಗೆ ಪ್ರಯಾಣಿಸುವುದು
ಅನಿವಾರ್ಯವಾಗಿದೆ.

ಬೆಳಗಿನಿಂದ ಸಂಜೆವರೆಗೆ ಬಸ್‌ ಇಲ್ಲ: ಅರ್ಜುಣಗಿ, ಕುಮನೂರ ಹಾಗೂ ಇನ್ನಿತರ ಗ್ರಾಮಸ್ಥಳಿಗೆ ಸಂಜೆ ಏಳು ಗಂಟೆಗೆ ಮಾತ್ರ ಬಸ್‌ ಇದ್ದು, ಬೆಳಿಗಿನಿಂದ ಸಂಜೆವರೆಗೆ ಈ ಗ್ರಾಮಗಳಿಗೆ ಬಸ್‌ ಸೌಕರ್ಯ
ಇಲ್ಲದಿರುವುದರಿಂದ ಇವರೆಲ್ಲರೂ ಖಾಸಗಿ ವಾಹನಗಳ ಮೊರೆ ಹೋಗುತ್ತಾರೆ. ಇನ್ನೂ ತುರ್ತು ಸಮಯದಲ್ಲಿ ಖಾಸಗಿ ವಾಹನ ಚಾಲಕರು ಹೆಚ್ಚಿನ ಬಾಡಿಗೆಯನ್ನು ಕೇಳುತ್ತಾರೆ. ಇದರಿಂದ ಬಡವರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ಶೀಘ್ರ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಈ ಭಾಗದ ಅನೇಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕುಮನೂರ ಗ್ರಾಮಕ್ಕೆ ಮುಕ್ಕಾಂ ಬಸ್‌ ಸೌಕರ್ಯವನ್ನು ಒದಗಿಸಿದರೆ ಗೋಡಿಹಾಳ, ಹಾಲಗೇರಾ, ಅರ್ಜುಣಗಿ ಮತ್ತು ಕುಮನೂರ ಗ್ರಾಮಸ್ಥರಿಗೆ ಅನುಕೂಲವಾಗುವುದರ ಜೊತೆಗೆ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತದೆ. ಆದ್ದರಿಂದ ಇದರ ಬಗ್ಗೆ ಅನೇಕ ವೇಳೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳು ಗಮನಹರಿಸಿ ಕುಮನೂರ ಗ್ರಾಮಕ್ಕೆ ರಾತ್ರಿ ಮುಕ್ಕಾಂ ಬಸ್‌ನ ಸೌಕರ್ಯವನ್ನು ಒದಗಿಸಬೇಕು ಎಂದು ಗ್ರಾಮಸ್ಥರ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಬೇಡಿಕೆ ಆಗಿದೆ.

Advertisement

„ನಾಮದೇವ ವಾಟ್ಕರ

Advertisement

Udayavani is now on Telegram. Click here to join our channel and stay updated with the latest news.

Next