Advertisement

ಜನಜೀವನ ಸಂಪೂರ್ಣ ಬಂದ್‌

07:39 PM Mar 22, 2020 | Lakshmi GovindaRaj |

ತಿ.ನರಸೀಪುರ: ಪಟ್ಟಣದಲ್ಲಿ ಜನತಾ ಕರ್ಫ್ಯೂಗೆ ಜನಬೆಂಬಲ ಉತ್ತಮವಾಗಿ ವ್ಯಕ್ತವಾಯಿತು. ವ್ಯಾಪಾರ, ವಾಹನಗಳ ಸಂಚಾರ ಹಾಗೂ ಜನಜೀವನ ಸಂಪೂರ್ಣವಾಗಿ ಬಂದ್‌ ಆಗಿತ್ತು. ಪಟ್ಟಣದ ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಯಂಪ್ರೇರಣೆಯಿಂದ ಜನತಾ ಕರ್ಫ್ಯೂಗೆ ಮುಂದಾಗಿದ್ದರು.

Advertisement

ಬೆರಳೆಣಿಕೆ ಬೈಕ್‌, ಕೆಲವೇ ಜನರ ಓಡಾಟವಿತ್ತು. ಕಾಲೇಜು ರಸ್ತೆ ಸೇರಿ ಲಿಂಕ್‌ ರಸ್ತೆ, ಮಾರುಕಟ್ಟೆ ರಸ್ತೆ, ಚಿಕ್ಕ ಅಂಗಡಿ ಬೀದಿ ಹಾಗೂ ಇನ್ನಿತರ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಬಸ್‌, ಕಾರು ಸೇರಿದಂತೆ ಯಾವುದೇ ವಾಹನ ರಸ್ತೆಗೆ ಇಳಿದಿರಲಿಲ್ಲ.

ಮೈಸೂರು, ಶ್ರೀಮಲೆ ಮಹದೇಶ್ವರ ಬೆಟ್ಟ ಹಾಗೂ ಚಾಮರಾಜನಗರ ಸೇರಿದಂತೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 212ರ ಕಪಿಲಾನದಿ ನೂತನ ಸೇತುವೆಯೂ ವಾಹನಗಳ ಸಂಚಾರವಿಲ್ಲದೆ ಖಾಲಿಯಾಗಿ ಕಾಣುತ್ತಿತ್ತು. ಹೋಬಳಿ ಕೇಂದ್ರಗಳಾದ ಸೋಸಲೆ, ಬನ್ನೂರು ಹಾಗೂ ಮೂಗೂರು ಗ್ರಾಮಗಳಲ್ಲೂ ಕರ್ಫ್ಯೂಗೆ ಜನಬೆಂಬಲ ವ್ಯಕ್ತವಾಗಿದೆ. ಗಗೇಶ್ವರಿಯಲ್ಲೂ ವ್ಯಾಪಾರ ಬಂದ್‌ ಆಗಿತ್ತು.

“ತ್ರಿವೇಣಿ ಸಂಗಮ’ದಲ್ಲಿ ಯುಗಾದಿ ಪುಣ್ಯಸ್ನಾನ ಇಲ್ಲ: ದಕ್ಷಿಣ ಕಾಶಿಯಾದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮಾ.24, 25ರ ಯುಗಾದಿ ಹಬ್ಬದ ಪುಣ್ಯಸ್ನಾನ ಮತ್ತು ದೇವರ ಧಾರ್ಮಿಕ ಪೂಜೆ ಜಿಲ್ಲಾಧಿಕಾರಿಗಳ ಆದೇಶದಂತೆ ರದ್ದುಪಡಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ಕೋರಲಾಗಿದೆ. ಈ ಸಂಬಂಧ ಈಗಾಗಲೇ ತ್ರಿವೇಣಿ ಸಂಗಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಎಚ್ಚರಿಕೆ ಸೂಚನ ಫ‌ಲಕಗಳ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next