Advertisement

ರಾಜ್ಯ ಸರ್ಕಾರದಿಂದ ಜನಪರ ಆಡಳಿತ

03:10 PM May 09, 2017 | Team Udayavani |

ಕಲಘಟಗಿ: ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 160 ಆಶ್ವಾಸನೆಗಳಲ್ಲಿ ಈಗಾಗಲೇ 145ನ್ನು ಈಡೇರಿಸಿ ಜನಪರ ಆಡಳಿತ ನೀಡಿದ ಖ್ಯಾತಿ ಮುಖ್ಯಮಂತ್ರಿ ಸಿದ್ರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌  ಸರ್ಕಾರದ್ದಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು. 

Advertisement

ದುಮ್ಮವಾಡದಲ್ಲಿ ಆರ್‌ಐಡಿಎಫ್‌ ಯೋಜನೆಯಡಿ 38 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತಪರ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ನಾಲ್ಕು ವರ್ಷಗಳಲ್ಲಿ ಕೇವಲ ನೀರಾವರಿಗಾಗಿಯೇ 38 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ.

ಅಲ್ಲದೇ ಮುಂಬರುವ ದಿನಗಳಲ್ಲಿ ನೀರಾವರಿ ಅಭಿವೃದ್ಧಿಗೋಸ್ಕರ ಮುಖ್ಯಮಂತ್ರಿಗಳು 15 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಅಂಕಿ ಅಂಶ ನೀಡಿದರು. ಸರ್ಕಾರವು ರೈತರಿಗೆ ಶೇ 90ರ ಸಬ್ಸಿಡಿಯಲ್ಲಿ ಸ್ಪಿಂಕ್ಲರ್‌ ಸೆಟ್‌ಗಳನ್ನು ನೀಡುತ್ತಿದೆ. ಈ ಕುರಿತು 3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಹಾಗೂ 3 ರಿಂದ 10 ಲಕ್ಷದ ವರೆಗಿನ ಸಾಲಕ್ಕೆ ಕೇವಲಶೇ. 3 ಬಡ್ಡಿಯನ್ನು ರೈತರು ನೀಡಬೇಕಿದೆ.

ರೈತ ಉತ್ಪಾದಕರ ಸಹಕಾರ ಸಂಘದಲ್ಲಿ 1000 ಸದಸ್ಯರಿದ್ದು, ಅದರ ಸಮಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ 55 ಲಕ್ಷ ರೂ. ವರೆಗೆ ನೆರವು ನೀಡುತ್ತಿವೆ. ಜವಾಬ್ದಾರಿಯುತವಾಗಿ ರೈತ ಸದಸ್ಯರು ಇದರ ಸದುಪಯೋಗ  ಪಡೆದುಕೊಳ್ಳಬೇಕು ಎಂದರು. 

ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಆಡಿನವರ, ಸದಸ್ಯರಾದ ಸಿದ್ದಲಿಂಗ ಕುಂಬಾರ, ಈರಯ್ಯ ಸಿದ್ದಾಪುರಮಠ, ನಿರ್ಮಲಾ ಸುಳ್ಳದ, ಬಸಮ್ಮ ಮೂಗಣ್ಣವರ, ದುಮ್ಮವಾಡ ಗ್ರಾಪಂ ಅಧ್ಯಕ್ಷೆ ಸಂಕವ್ವ ಬೆಟದೂರ, ಉಪಾಧ್ಯಕ್ಷೆ ದ್ರಾûಾಯಣಿ ಹುಲಗೂರಮಠ, ನಾಗರತ್ನ ತಪೇಲಿ, ಗಳಗಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಗಿರಿಯಾಲ, ರೈತ ಸಂಪರ್ಕ ಕೇಂದ್ರದ ಮಾಲತಿ ಆರ್‌, ಕೆಎಂಎಫ್‌ ನಿರ್ದೇಶಕ ಯಲ್ಲಪ್ಪ ದಾಸನಕೊಪ್ಪ,

Advertisement

ಕಾಂಗ್ರೆಸ್‌ ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ಚನ್ನಬಸಯ್ಯ ಹುಬ್ಬಳಿಮಠ, ಕಲಘಟಗಿ ಎಪಿಎಂಸಿ ಮುತ್ತಣ್ಣ ಅಂಗಡಿ, ಹನುಮಂತಪ್ಪ ಕಾಳೆ, ಪ್ರಶಾಂತ ಸುಳ್ಳದ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮಂಜುನಾಥ ಮುರಳ್ಳಿ, ಹರಿಶಂಕರ ಮಠದ, ಸೋಮಶೇಖರ ಬೆನ್ನೂರ  ಇತರರಿದ್ದರು. ಸಹಾಯಕ ಕೃಷಿ ನಿರ್ದೇಶಕ ಪ್ರದೀಪ ಕಿವಟೆ ಸ್ವಾಗತಿಸಿದರು. ಕೃಷಿ ಅಧಿಕಾರಿ ಚನ್ನಪ್ಪ ಅಂಗಡಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next