153 ಸೋಂಕಿತರು ವಿಜಯಪುರ ನಗರದಲ್ಲೇ ಪತ್ತೆಯಾಗಿದ್ದು, ಸೋಂಕಿತರಲ್ಲಿ ಓರ್ವ ವೃದ್ಧ ಮƒತಪಟ್ಟಿದ್ದಾನೆ.
Advertisement
ಜಿಲ್ಲೆಯಲ್ಲಿ ಈವರೆಗೆ 17,034 ಜನರಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಬಳಿಕ ಗುಣಮುಖರಾದ 15,399 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ ಸೋಂಕು ಪತ್ತೆಯಾದ ಬಳಿಕ ಕಳೆದ ಒಂದು ವರ್ಷದಿಂದ ಈವರೆಗೆ 4,18,002 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, 4,15,080 ವರದಿ ಬಂದಿದ್ದು, ಇದರಲ್ಲಿ 3,98,212 ನೆಗೆಟಿವ್ ವರದಿ ಇವೆ. ಇದರಲ್ಲಿ 2,756 ವರದಿ ನಿರೀಕ್ಷೆಯಲ್ಲಿವೆ. ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ಮೃತರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.
Related Articles
Advertisement
ಈ ಮಧ್ಯೆ ಕೋವಿಡ್ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ಮಾರ್ಗ ಸೂಚಿಯಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಜಾತ್ರೆ ಹಾಗೂ ಸಾರ್ವಜನಿಕ ಸಮಾರಂಭ ಸೇರಿದಂತೆಹಲವು ವಿಷಯಗಳಿಗೆ ನಿರ್ಬಂಧ ಹೇರಿದೆ. ಇದಕ್ಕಾಗಿ ಅಧಿಕೃತವಾಗಿ ನಿಷೇಧವನ್ನೂ ಹೇರಿದ ಕುರಿತು ಆದೇಶ ಹೊರಡಿಸಿ, ಸಾರ್ವಜನಿಕ ಮಾಹಿತಿಗೆ ಮಾಹಿತಿ ನೀಡಿದೆ. ಆದರೆ ಈ ಆದೇಶ ಮೀರಿ ಸಿಂದಗಿ ತಾಲೂಕ ಕಕ್ಕಳಮೇಲಿ ಶಂಕರಲಿಂಗ ಮಹಾರಾಜರು ಹಾಗೂ ಮಲಘಾಣದ ಜಡೆ ಶಾಂತಲಿಂಗೇಶ್ವರ ಜಾತ್ರೆಯನ್ನು
ನಡೆಸಲಾಗಿದೆ. ಹೀಗಾಗಿ ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು ಕಕ್ಕಳಮೇಲಿ ಹಾಗೂ ಮಲಘಾಣ ಗ್ರಾಮಸ್ಥರ ವಿರುದ್ಧ ಸಿಂದಗಿ ಠಾಣೆ
ಪೊಲೀಸರಿಗೆ ದೂರು ನೀಡಿದ್ದಾರೆ. ಎರಡೂ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ತಿಳಿಸಿದ್ದಾರೆ. ಮೇ 15ರವರೆಗೆ ಪ್ರವಾಸಿ ತಾಣ ಪ್ರವೇಶ ನಿರ್ಬಂಧ
ಕೋವಿಡ್ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಡಿಯಲ್ಲಿ ಬರುವ ಜಿಲ್ಲೆಯ ಪಾರಂಪರಿಕ ಎಲ್ಲ ಸ್ಮಾರಕಗಳ ಪ್ರವೇಶಕ್ಕೆ ಮೇ 15ರವರೆಗೆ ಅಥವಾ ಮುಂದಿನ ಆದೇಶದವರೆಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಸ್ಮಾರಕಗಳಿಗೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿ
ಸಿದ್ದು, ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸುನೀಲ ಕುಮಾರ ಆದೇಶಿಸಿದ್ದಾರೆ. ಸೋಂಕಿತ ವೃದ್ಧ ಸಾವು
ಜಿಲ್ಲೆಯ ಕೋವಿಡ್ ಸೋಂಕಿಗೆ 68 ವರ್ಷದ ಪಿ-1012328 ವೃದ್ಧರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಹಾಗೂ ಐಎಲ್‌ಐ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಸಿದ್ದರೂ ಚಿಕಿತ್ಸೆ ಫಲಿದೇ ಮೃತಪಟ್ಟಿದ್ದಾರೆ. ಅಂತ್ಯ ಸಂಸ್ಕಾರವನ್ನು ಸರ್ಕಾರ ರೂಪಿಸಿರುವ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ತಿಳಿಸಿದ್ದಾರೆ.