ಗಂಗಾವತಿ: ಜಿಲ್ಲಾಡಳಿತದ ಪರಿಶ್ರಮದ ಫಲವಾಗಿ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಸೋಂಕು ಕಂಡುಬಂದಿಲ್ಲ.ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿ ಜನರನ್ನು ಲಾಕ್ ಡೌನ್ ಮೂಲಕ ಮನೆಯಲ್ಲಿರಿಸಿದ್ದರಿಂದ ಜಿಲ್ಲೆಯನ್ನು ಸರಕಾರ ಗ್ರೀನ್ ಜೋನ್ ಘೋಷಣೆ ಮಾಡಿದೆ.
ಈಗ ಗ್ರೀನ್ ಜೋನ್ ಪ್ರದೇಶದಲ್ಲಿ ಭೌತಿಕ ಅಂತರ ಕಾಪಾಡಿಕೊಂಡು ವ್ಯಾಪಾರ ವ್ಯವಹಾರ ನಡೆಸಲು ಜಿಲ್ಲಾಡಳಿತ ಅಗತ್ಯ ಸೇವೆಯ ಅಂಗಡಿಗಳಿಗೆ ಪರವಾನಿಗೆ ನೀಡಿದೆ. ಇದನ್ನೇ ಬಳಸಿಕೊಂಡ ಜನತೆ ಯಾವುದೇ ಸಾಮಾಜಿಕ ಅಂತರ ಕಾಪಾಡದೆ ಗುಂಪು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರ ಮಹಾ ವೀರ, ಗಾಂಧಿ ಚೌಕ, ಗಣೇಶ ವೃತ್ತದ ಓಎಸ್ಬಿರೋಡ್ ಗಳಲ್ಲಿ ಜನರು ಭೌತಿಕ ಅಂತರ ಕಾಪಾಡದೇ ಓಡಾಡುತ್ತಿದ್ದು ಬಟ್ಟೆ, ಕಿರಾಣಿ ಎಲೆಕ್ಟ್ರಾನಿಕ್ ಎಲೆಕ್ಟ್ರಿಕ್ ಮೊಬೈಲ್ ಸೇರಿ ಬಹುತೇಕ ಅಂಗಡಿಗಳು ತೆರೆದಿದ್ದು ಭೌತಿಕ ಅಂತರ ಕಾಪಾಡುತ್ತಿಲ್ಲ.
ಅಂಗಡಿ ಮಾಲೀಕರು ಕೈ ತೊಳೆಯಲು ನೀರು ಸೋಪು ಮತ್ತು ಸ್ಯಾನಿಟೈಜರ್ ಇಟ್ಟಿಲ್ಲ. ಅಂಗಡಿಯಲ್ಲಿ 10-25 ಜನರು ತುಂಬಿಕೊಂಡಿದ್ದು ಪರಸ್ಪರ ಅಂತರ ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ಪೊಲೀಸರು ವಿವಿಧ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಜನರನ್ನು ಕಳುಹಿಸುವ ಕಾರ್ಯ ಮಾಡುತ್ತಿಲ್ಲ. ಇನ್ನೂ ಪೊಲೀಸ್ ಅಧಿಕಾರಿಗಳು ವಿವಿಧ ವೃತ್ತಗಳಲ್ಲಿ ಬೈಕ್ ಸವಾರರಿಗೆ ದಂಡ ಹಾಡುವುದರಲ್ಲಿ ನಿರತರಾಗಿದ್ದಾರೆ. ಗ್ರೀನ್ ಜೋನ್ ನಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕಾದ ಜನರು ಮೈಮರೆತು ಬೀದಿಗೆ ಬಂದ ದೃಶ್ಯ ಕಂಡು ಬರುತ್ತಿದೆ.