Advertisement

ಬದಲಾವಣೆ ಬಯಸಿದ ಜನ: ಬಳಿಗಾರ್‌

07:38 PM Mar 21, 2018 | |

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಜನತೆ ಬದಲಾವಣೆ ಬಯಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ತಮಗೆ ಜನಬೆಂಬಲ ವ್ಯಕ್ತವಾಗುತ್ತದೆ ಎಂದು ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ. ಬಳಿಗಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪ್ರಸ್‌ ಟ್ರಸ್ಟ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಕ್ಕುಪತ್ರಕ್ಕಾಗಿ ಸುಮಾರು 11ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ ಇದುವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ವಿತರಣಾ ಕಾರ್ಯವಾಗಿಲ್ಲ. ಕ್ಷೇತ್ರದ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ನಡೆದಿಲ್ಲ. ಇದರಿಂದ ಜನತೆ ಬೇಸರಗೊಂಡಿದ್ದಾರೆ ಎಂದರು.

ಆರು ಬಾರಿ ಶಾಸಕರಾಗಿರುವ ಬಿ.ಎಸ್‌. ಯಡಿಯೂರಪ್ಪರವರು ಒಮ್ಮೆ ಮುಖ್ಯಮಂತ್ರಿಯೂ ಆಗಿದ್ದರು. ಆದರೆ ಶಿಕಾರಿಪುರ ಕ್ಷೇತ್ರದಲ್ಲಿ ರಸ್ತೆ, ಕಟ್ಟಡ ನಿರ್ಮಾಣವಾಗಿದೆಯೇ ಹೊರತು, ಜನತೆಗೆ ಬದುಕು ಕಟ್ಟಿಕೊಡುವಂತಹ ಕೆಲಸಕ್ಕೆ ಮುಂದಾಗಲಿಲ್ಲ. ತಾಲ್ಲೂಕಿನಲ್ಲಿ ಶೇ.85ರಷ್ಟು ಜನ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಆದರೆ ಅದಕ್ಕೆ ಪೂರಕವಾದ ನೀರಾವರಿ ಸೌಲಭ್ಯವನ್ನು ಕ್ಷೇತ್ರದಲ್ಲಿ ಇದುವರೆಗೂ ಕಲ್ಪಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ 1.82ಟಿಎಂಸಿ ಸಾಮರ್ಥ್ಯದ ಅಂಜನಾಪುರ ಮತ್ತು 0.72ಟಿಎಂಸಿ ಸಾಮರ್ಥ್ಯವುಳ್ಳ ಅಂಬಲಿಗೊಳ್ಳ ಜಲಾಶಯ ಹೊರತುಪಡಿಸಿದರೆ, ಇನ್ಯಾವುದೇ ಜಲಾಶಯ ನಿರ್ಮಾಣವಾಗಿಲ್ಲ. ಸಮಗ್ರ ಹಾಗೂ ಶಾಶ್ವತ ನೀರಾವರಿ ಯೋಜನೆ
ಅನುಷ್ಠಾನಗೊಳಿಸದೇ ಇರುವುದರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಉಂಟಾಗಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ದೊರಕದೆ ಇರುವುದರಿಂದ ಕೃಷಿಗೆ ಆದ್ಯತೆ ಸಿಕ್ಕಿಲ್ಲ. ಇದರಿಂದಾಗಿ ವ್ಯಾಪಾರ, ವ್ಯವಹಾರ ಹಾಗೂ ಉದ್ಯೋಗ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿದೆ ಎಂದರು. ಚುನಾವಣೆಯಲ್ಲಿ ಶಿಕಾರಿಪುರದ ಜನತೆ ತಮಗೆ ಆಶೀರ್ವಾದ ಮಾಡಿದರೆ ಎಚ್‌.ಡಿ. ಕುಮಾರಸ್ವಾಮಿ
ಅವರ ಕೈಯನ್ನು ಬಲಪಡಿಸಿದಂತಾಗುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಿದ್ದಾರೆ. ರೈತನ ಬೆಳೆಗೆ ಉತ್ತಮ ಬೆಲೆಯನ್ನು ಕಲ್ಪಿಸಿಕೊಡಲಿದ್ದಾರೆ ಎಂದು ಹೇಳಿದರು. ಸಂವಾದದಲ್ಲಿ
ಪ್ರಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಇದ್ದರು.

ಸಿರಿಗೆರೆ ಸ್ವಾಮೀಜಿಯವರು ಹೇಳಿರುವಂತೆ ಮತದಾರರಿಗೆ ಯಾವುದೇ ಆಮಿಷವೊಡ್ಡದೇ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ
ದೃಷ್ಟಿಯಿಂದ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಗಿಸಿದ ನಂತರ ಅಭ್ಯರ್ಥಿಗಳು ಮಠದಲ್ಲಿ ವಾಸ್ತವ್ಯ ಹೂಡುವಂತೆ ಸಲಹೆ 
ನೀಡಿದ್ದಾರೆ.ಯಡಿಯೂರಪ್ಪನವರು ಸ್ವಾಮೀಜಿಯವರ ಮಾತನ್ನು ಒಪ್ಪಿಕೊಳ್ಳುವ ಮೂಲಕ ಇದಕ್ಕೆ ಮೇಲ್ಪಂಕ್ತಿ ಹಾಕಬೇಕು.

ಎಚ್‌.ಟಿ. ಬಳಿಗಾರ್‌, ಶಿಕಾರಿಪುರ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next